ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ಎಗ್ಗುಸಿಗ್ಗಿಲ್ಲದೆ ಸಾಗಿದೆ ಸಿಗರೇಟು ಸ್ಮಗ್ಲಿಂಗ್

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜನವರಿ 07 : ಕರಾವಳಿಯಲ್ಲಿ ಹೆಚ್ಚುತ್ತಿದೆ ಅಕ್ರಮ ಸಿಗರೇಟ್ ಮಾರಾಟ. ಬೀದಿಬೀದಿಗಳಲ್ಲಿ ಸಿಗರೇಟ್‌ ಸ್ಮಗ್ಲಿಂಗ್‌ ಜಾಲ ಸಕ್ರಿಯವಾಗಿದ್ದರೂ ಕೇವಲ ಬೆರಳೆಣಿಕೆಯಷ್ಟೇ ಪ್ರಕರಣಗಳು ಮಾತ್ರ ದಾಖಲಾಗಿವೆ. ಇದಕ್ಕೆ ಮೂಲ ಕಾರಣ ಏನು?

ಕರಾವಳಿಯಲ್ಲಿ ವಿದೇಶಿ ಬ್ರ್ಯಾಂಡೆಡ್ ಸಿಗರೇಟ್‌ನ ಅಕ್ರಮ ಮಾರಾಟ ಜಾಲ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಆಶ್ಚರ್ಯವೆಂದರೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕವೇ ಅತೀ ಹೆಚ್ಚು ಸಾಗಾಟ ದಂಧೆ ನಡೆಯುತ್ತಿದೆ. ಆದರೆ ಕಸ್ಟಮ್ ಅಧಿಕಾರಿಗಳಿಗೆ ಬೆರಳೆಣಿಕೆಯಷ್ಟೇ ಆರೋಪಿಗಳು ಸಿಕ್ಕಿರುವುದು ನಿಜಕ್ಕೂ ವಿಪರ್ಯಾಸ.

ವಿಶ್ವದಲ್ಲೇ ಸಿಗರೇಟು ವ್ಯವಹಾರದಲ್ಲಿ ಭಾರತದ್ದೇ ಸಿಂಹಪಾಲು. ಅತ್ಯಾಕರ್ಷಕ ಪ್ಯಾಕ್‌ಗಳಲ್ಲಿಬರುವ ಈ ಸಿಗರೇಟ್‌ಗಳು ಯುವಕ-ಯುವತಿಯರನ್ನೇ ಹೆಚ್ಚಾಗಿ ಸೆಳೆಯುತ್ತಿವೆ. ತಾವು ಇಂಪೋರ್ಟೆಡ್‌ ಸಿಗರೇಟು, ಸೇದುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೊಗೆ ಬಿಡುವ ಯುವ ಜನರಿಗೆ ಇವುಗಳಿಂದಾಗುವ ಮಾರಕ ಪರಿಣಾಮಗಳ ಅರಿವಿಲ್ಲ.

ಸಿಗರೇಟು ಸೇವಿಸುವುದು ಫ್ಯಾಷನ್

ಸಿಗರೇಟು ಸೇವಿಸುವುದು ಫ್ಯಾಷನ್

ಸಾರ್ವಜನಿಕವಾಗಿ ಸಿಗರೇಟ್ ಸೇವನೆಗೆ ನಿಷೇಧವಿದ್ದರೂ ಸಿಗರೇಟ್ ಸೇವಿಸುವ ಗ್ರಾಹಕರಿಗೇನೂ ಕೊರತೆ ಇಲ್ಲ. ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ, ಕಾಲೇಜುಗಳ ಎದುರಿನಲ್ಲಿ ಹುಡುಗ ಹುಡುಗಿಯರೆನ್ನದೆ ಸಿಗರೇಟು ಸೇವಿಸುವುದು ಫ್ಯಾಷನ್ ಎಂಬಂತಾಗಿದೆ.

ವಿದೇಶಿ ಬ್ರಾಂಡ್ ಅಂದ್ರೆ ಅದೇನೋ ಪ್ರೀತಿ

ವಿದೇಶಿ ಬ್ರಾಂಡ್ ಅಂದ್ರೆ ಅದೇನೋ ಪ್ರೀತಿ

ಜನರಿಗೆ ವಿದೇಶಿ ಸಿಗರೇಟ್ ಅಂದರೆ ಅದೇನೋ ಪ್ರೀತಿ. ಇದೇ ಭಾವನೆಯನ್ನು ಅರಿತ ಕಳ್ಳ ಸಾಗಾಟಕಾರರು ಈ ದಂಧೆಗೆ ಕೈ ಹಾಕಿದ್ದಾರೆ. ರಾಜ್ಯದ ಕರಾವಳಿ ಪ್ರದೇಶ ಅಕ್ರಮ ವಿದೇಶಿ ಸಿಗರೇಟ್ ಸರಬರಾಜಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಇದಲ್ಲದೆ ನೆರೆಯ ಕೇರಳದಲ್ಲೂ ಅಕ್ರಮ ಸಿಗರೇಟ್ ಪೂರೈಕೆ ಜಾಲದ ಲಿಂಕಿಗೆ ದುಬೈ ಹಾಗೂ ಇತರ ಅರಬ್ ರಾಷ್ಟ್ರಗಳೇ ಮೂಲಸ್ಥಾನವಾಗಿದೆ.

ಅರಬ್ ರಾಷ್ಟ್ರಗಳಿಂದ ಅಕ್ರಮ ಸಿಗರೇಟ್ ರಫ್ತು

ಅರಬ್ ರಾಷ್ಟ್ರಗಳಿಂದ ಅಕ್ರಮ ಸಿಗರೇಟ್ ರಫ್ತು

ಅರಬ್ ರಾಷ್ಟ್ರಗಳಿಂದ ರಫ್ತಾಗುವ ಈ ಅಕ್ರಮ ಸಿಗರೇಟು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮಂಗಳೂರಿಗೆ ಬಂದರೂ ಅದು ನೇರವಾಗಿ ಹೋಗುವುದು ನೆರೆಯ ಕೇರಳ ರಾಜ್ಯಕ್ಕೆ. ಹಾಗೆಯೇ ಕೇರಳದಿಂದ ಮತ್ತೆ ರಸ್ತೆ ಮಾರ್ಗವಾಗಿ ಈ ಸಿಗರೇಟ್ ಕರಾವಳಿ ಭಾಗಕ್ಕೆ ಪೂರೈಕೆಯಾಗುತ್ತಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಸಿಗರೇಟು ಪತ್ತೆಯಾದ ಪ್ರಕರಣಗಳ ವಿವರ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಸಿಗರೇಟು ಪತ್ತೆಯಾದ ಪ್ರಕರಣಗಳ ವಿವರ

2013ರ ಅಕ್ಟೋಬರ್‌ನಲ್ಲಿ 10 ಲಕ್ಷ ರು. ಮೌಲ್ಯದ ಸಿಗರೇಟು ವಶ
2015ರ ಅಕ್ಟೋಬರ್‌ನಲ್ಲಿ 1.20 ಲಕ್ಷ ರು. ಮೌಲ್ಯದ ಸಿಗರೇಟು ವಶ
2016ರ ಜನವರಿಯಲ್ಲಿ 4.19 ಲಕ್ಷ ರು. ಮೌಲ್ಯದ ಸಿಗರೇಟು ವಶ
2016ರ ಏಪ್ರಿಲ್‌ನಲ್ಲಿ 2.44 ಲಕ್ಷ ರು. ಮೌಲ್ಯದ ಸಿಗರೇಟು ವಶ
2016ರ ಸಪ್ಟೆಂಬರ್‌ನಲ್ಲಿ 4.25 ಲಕ್ಷ ರು. ಮೌಲ್ಯದ ಸಿಗರೇಟು ಪತ್ತೆ

English summary
Foreign brand cigarettes are being sold illegally in Mangaluru even though ban orders imposed in the city. Young men and women are getting trapped into this illegal business. Who has to bell the cat? A special story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X