ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಟ್ಲ ಬಳಿ ಐಸ್ ಕ್ರೀಂ ವ್ಯಾನ್ ನಲ್ಲಿ ನಡೆಯುತ್ತಿತ್ತು ಅಕ್ರಮ ಗೋಸಾಗಾಟ

|
Google Oneindia Kannada News

ಮಂಗಳೂರು ಜುಲೈ 18: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಐಸ್ ಕ್ರೀಮ್ ವ್ಯಾನ್ ನಲ್ಲಿ ಅಕ್ರಮವಾಗಿ ಗೋಸಾಟ ನಡೆಸುತ್ತಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಮೂರು ದನಗಳನ್ನು ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ ಗೋಕಳ್ಳರು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.

 ಕುಖ್ಯಾತ ದನಗಳ್ಳನನ್ನು ಬಂಧಿಸಿದ ಮಂಗಳೂರು ಪೊಲೀಸರು ಕುಖ್ಯಾತ ದನಗಳ್ಳನನ್ನು ಬಂಧಿಸಿದ ಮಂಗಳೂರು ಪೊಲೀಸರು

ಇದಕ್ಕೆ ಉದಾಹರಣೆ, ಅಮೂಲ್ ಐಸ್‌ಕ್ರೀಂ ಹೆಸರಿನ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣ.

Illegal cattle transport in Ice cream vehicle in vitla

ಕೆಲ ದಿನಗಳಿಂದ ಐಸ್ ಕ್ರೀಂ ವ್ಯಾನ್ ನಲ್ಲಿ ಗೋವುಗಳ ಸಾಗಾಟ ನಡೆಯುತ್ತಿತ್ತು. ಆದರೆ ಐಸ್ ಕ್ರೀಂ ಗಾಡಿ ಎಂದು ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ನೆನ್ನೆ, ಅಕ್ರಮ ಗೋ ಸಾಗಾಟದ ಬಗ್ಗೆ ದೊರೆತ ಮಾಹಿತಿ ಮೇರೆಗೆ ಸಾಲೆತ್ತೂರು ಕಟ್ಟತ್ತಿಲ ಎಂಬಲ್ಲಿ ವಿಟ್ಲ ಪೊಲೀಸರ ತಂಡ ಐಸ್ ಕ್ರೀಂ ವಾಹನವನ್ನು ಅಡ್ಡಗಟ್ಟಿದ್ದಾರೆ. ಹೀಗೆ ಅಡ್ಡಗಟ್ಟುತ್ತಿದ್ದಂತೆ ಚಾಲಕ ವಾಹನವನ್ನು ಮುಂದಕ್ಕೆ ಚಲಾಯಿಸಿ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದಾನೆ. ತಕ್ಷಣವೇ ವ್ಯಾನ್ ನಿಂದ ಇಳಿದು ಇಬ್ಬರು ಪರಾರಿಯಾಗಿದ್ದಾರೆ. ವಾಹನವನ್ನು ಪೊಲೀಸರು ಪರಿಶೀಲಿಸಿದಾಗ ಮೂರು ದನಗಳು ಪತ್ತೆಯಾಗಿವೆ.

ಉಡುಪಿಯಲ್ಲಿ ಅಕ್ರಮ ಜಾನುವಾರು ಸಾಗಾಟ; ಪೊಲೀಸರೂ ಶಾಮೀಲುಉಡುಪಿಯಲ್ಲಿ ಅಕ್ರಮ ಜಾನುವಾರು ಸಾಗಾಟ; ಪೊಲೀಸರೂ ಶಾಮೀಲು

ಈ ದನಗಳನ್ನು ಸಾಲೆತ್ತೂರು ರಸ್ತೆ ಮೂಲಕ ಕೇರಳದಲ್ಲಿರುವ ಕಸಾಯಿಖಾನೆಗೆ ಕೊಂಡೊಯ್ಯಲಾಗುತ್ತಿತ್ತು ಎಂದು ತಿಳಿದುಬಂದಿದೆ. ಮೂರು ದನಗಳನ್ನು ಹಾಗು ಸಾಗಾಟಕ್ಕೆ ಬಳಸಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

English summary
Vitla police team traced illegal cattle transport in Ice cream vehicle and rescued 3 cows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X