ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ಪತ್ನಿಯೇನೂ ನನ್ನನ್ನು ಬಿಟ್ಟು ಹೋಗಿಲ್ಲ!

By Srinath
|
Google Oneindia Kannada News

ಮಂಗಳೂರು, ಏಪ್ರಿಲ್ 14- ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ದಶಕಗಳಷ್ಟು ವಿಳಂಬವಾಗಿ ತಮ್ಮ ಪತ್ನಿಯನ್ನು ಹೊರಜಗತ್ತಿಗೆ ಪರಿಚಯಿಸಿರುವ ಬೆನ್ನಿಗೆ ಕೆಲ ಹಿರಿಯ ರಾಜಕಾರಣಿಗಳ ಪತ್ನಿಯರ ಬಗ್ಗೆಯೂ ಒಂದಷ್ಟು ಚರ್ಚೆಗಳು ನಡೆದಿವೆ.

ಪ್ರಧಾನಿ ಅಭ್ಯರ್ಥಿ ಹಾಗಿರಲಿ ಹಾಲಿ ಪ್ರಧಾನ ಮಂತ್ರಿಯೇ ತಮ್ಮ ಪತ್ನಿಯ ಹೆಸರನ್ನು ಅಫಿಡವಿಟ್ ನಲ್ಲಿ ನಮೂದಿಸಿಲ್ಲ ಎಂಬುದರ ಬಗ್ಗೆ ಯಾರೊ ಪುಣ್ಯಾತ್ಮ ಇದ್ದ ಕೆಲಸವನ್ನೆಲ್ಲ ಪಕ್ಕಕ್ಕಿಟ್ಟು ಸಂಶೋಧನೆ ನಡೆಸಿ ತಿಳಿಸಿದ್ದ.

ಅದಾಗುತ್ತಿದ್ದಂತೆ ಕಳೆದ ವಾರ ನಮ್ಮವರೇ ಆದ ಕರಾವಳಿಯ ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಅವರೂ ಸಹ ತಮ್ಮ ಪತ್ನಿಯ ಹೆಸರನ್ನು ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್ ನಲ್ಲಿ ದಾಖಲಿಸಿಲ್ಲ ಎಂಬ ಬೊಬ್ಬೆ ಎದ್ದಿದೆ.

 I have not deserted my wife like Modi Janardhan Poojary dakshina kannada congress candidate,
ಆದರೆ ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿರುವ ಪೂಜಾರಿ ಅಸಲಿಗೆ ತಾವು ಸಲ್ಲಿಸಿರುವ ನಾಮಪತ್ರದಲ್ಲಿ ಪತ್ನಿಯ ಹೆಸರು ಮತ್ತು ಮತ್ತಿತರ ವಿವರಣೆಯನ್ನು ನಮೂದಿಸುವ ಕಾಲಂ ಇರಲೇ ಇಲ್ಲ. ಹಾಗಾಗಿ ನಾನು ನನ್ನ ಪತ್ನಿಯ ಹೆಸರನ್ನು ದಾಖಲಿಸಿಲ್ಲ.

ಆದರೆ ನನ್ನ ಪತ್ನಿಯ ಆದಾಯದ ಬಗ್ಗೆ ವಿವರಣೆ ನೀಡಬೇಕಾದ ಕಾಲಂನಲ್ಲಿ ಆಕೆ ಕೃಷಿಕಳು, ಹಾಗಾಗಿ ಆಕೆಯ ಆದಾಯಕ್ಕೆ ತೆರಿಗೆ ಕಟ್ಟುವ ಅಗತ್ಯ ಇಲ್ಲವೆಂದು ನಾನು ಅದರ ವಿವರಣೆ ನೀಡಿಲ್ಲ ಅಷ್ಟೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಜನಾರ್ದನ ಪೂಜಾರಿ ಅವರು ಸ್ಪಷ್ಟನೆ ನೀಡಿದ್ದಾರೆ.

'ನಾನೂ ಒಬ್ಬ ಅರ್ಹ ವಕೀಲ. ಹಾಗಾಗಿ ನನಗೆ ಕಾನೂನು ಚೌಕಟ್ಟಿನ ಬಗ್ಗೆ ಪರಿವೆ ಇದೆ. ಎಲ್ಲ ಅಗತ್ಯ ದಾಖಲೆನಗಳನ್ನೂ ನಾಮಪತ್ರದಲ್ಲಿ ದಾಖಲಿಸಿದ್ದೇನೆ. ಬಿಟ್ಟಿ ಪ್ರಚಾರಕ್ಕಾಗಿ ಅನಗತ್ಯ, ಹಸಿಹಸಿ ಸುಳ್ಳು ಮಾಹಿತಿ ನೀಡುವುದು ಸರಿಯಲ್ಲ' ಎಂದು ಪರೋಕ್ಷವಾಗಿ ಬಿಜೆಪಿ ಮೇಲೆ ದಾಳಿ ಮಾಡಿದರು.

ನನ್ನ ಪತ್ನಿಯೇನೂ ನನ್ನನ್ನು ಬಿಟ್ಟು ಹೋಗಿಲ್ಲ:
'ನಾನೇನೂ ಮೋದಿಯ ಹಾಗೆ ಬ್ರಹ್ಮಚಾರಿ ಎಂದು ಹೇಳಿಕೊಂಡಿಲ್ಲ. ನಾನು ನನ್ನ ಹೆಂಡತಿ ಜತೆಯೇ ವಾಸವಾಗಿದ್ದೇನೆ. ಆಕೆಯ ಹೆಸರು ಮಾಲತಿ ಅಂತ. ಆಕೆಯ ಜತೆ ಅನೇಕ ಬಾರಿ ಬಹಿರಂಗ ಸಭೆಗಳಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪತ್ನಿಯೇನೂ ನನ್ನನ್ನು ಬಿಟ್ಟು ಹೋಗಿಲ್ಲ' ಎಂದು ಮೋದಿ ಮೇಲೆ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

English summary
Lok Sabha Election 2014 - There is no column to provide the name and other details of the candidate’s spouse, so i have not mentioned it says B Janardhan Poojary, Congress candidate from Dakshina Kannada Lok Sabha constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X