ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೋಷನ್ ಬೇಗ್ ವಿರುದ್ಧ ನಾಳೆಯಿಂದ 'I am Modi' ಅಭಿಯಾನ: ಸೂಲಿಬೆಲೆ

By ಕಿರಣ್ ಸಿರ್ಸೀಕರ್
|
Google Oneindia Kannada News

ಮಂಗಳೂರು, ಅಕ್ಟೋಬರ್ 13: ಬೆಂಗಳೂರಿನಲ್ಲಿ ಭಾಷಣವೊಂದರಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ ಸಚಿವ ರೋಷನ್ ಬೇಗ್ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಈ ಆಕ್ರೋಶವೀಗ ಪ್ರತಿಭಟನೆಗೂ ತಿರುಗಿದೆ.

ಮೋದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಚಿವ ರೋಷನ್ ಬೇಗ್ಮೋದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಚಿವ ರೋಷನ್ ಬೇಗ್

ಶುಕ್ರವಾರ ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ಯುವಾ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ನಗರಾಭಿವೃದ್ಧಿ ಮತ್ತು ಹಜ್ ಸಚಿವ ರೋಷನ್ ಬೇಗ್ ವರ್ತನೆ ಖಂಡನೀಯ ಎಂದಿದ್ದಾರೆ.

'I am Modi' campaign against Roshan Baig from Oct 13 : Chakravarthy Sulibele

ಇಂತಹಾ ಕೀಳು ಮಟ್ಟದ ಹೇಳಿಕೆ ವಿರುದ್ಧ 'I am Modi' (ನಾನು ಮೋದಿ) ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಾಳೆಯಿಂದ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

"ಸಚಿವ ರಮಾನಾಥ ರೈ ಕೂಡ ಇತ್ತೀಚೆಗೆ ನನ್ನ ವಿರುದ್ಧ ಕೀಳು ಭಾಷೆಯಲ್ಲಿ ಮಾತನಾಡಿದ್ದರು. ನಾನದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಈ ಸರಣಿ ಮುಂದುವರಿಯುತ್ತಿದೆ," ಎಂದು ಅವರು ಆಕ್ರೋಶ ವ್ಯಕ್ತಡಿಸಿದ್ದಾರೆ.

ಹೀಗಾಗಿ ಇದರ ವಿರುದ್ಧ ಜಾಗೃತಿ ಆಂದೋಲನವೊಂದು ನಡೆಯಬೇಕಾಗಿದೆ. ಈ ಕಾರಣಕ್ಕೆ ಸಾಮಾಜಿಕ ತಾಲತಾಣಗಳಲ್ಲಿ 'ಐ ಆ್ಯಮ್ ಮೋದಿ' ಅಭಿಯಾನವನ್ನು ನಡೆಸಲಾಗುವುದು ಎಂದಿದ್ದಾರೆ.

ಸಚಿವ ರೋಷನ್ ಬೇಗ್ ಅವರ ಹೇಳಿಕೆಯಿಂದ ಕನ್ನಡಿಗನಾಗಿ ತಲೆತಗ್ಗಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಸೂಲಿಬೆಲೆ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಭ್ಯತೆಗೆ ರೋಷನ್ ಬೇಗ್ ಕಳಂಕ ತಂದಿದ್ದಾರೆ ಎಂದರು.

ಸಚಿವ ರೋಷನ್ ಬೇಗ್ ಅವರ ಹೇಳಿಕೆಯನ್ನು ಖಂಡಿಸಿ ನಾಳೆಯಿಂದ 'ಐ ಯಾಮ್ ಮೋದಿ' ಕ್ಯಾಂಪೇನ್ ಆರಂಭಿಸಲಾಗುತ್ತದೆ. ನಾಳೆ ಮುಂಜಾನೆಯಿಂದ ಸಾಮಾಜಿಕ ಜಾಲ ತಾಣ ಫೇಸ್ ಬುಕ್ , ಟ್ವಿಟ್ಟರ್ ನಲ್ಲಿ ಹ್ಯಾಷ್ ಟ್ಯಾಗ್ ಕ್ಯಾಂಪೇನ್ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ಈ ಕ್ಷಣದಿಂದ "ನಾನು ಕೂಡಾ ಮೋದಿ" ಎಂದು ಹೇಳಿದ ಅವರು ಈ ಕ್ಯಾಂಪೇನ್ ಮೂಲಕ ಜನರು ತಮ್ಮ ಡಿಪಿ ಯಲ್ಲಿ ಮೋದಿ ಅವರ ಚಿತ್ರ ಹಾಕಲಿದ್ದಾರೆ ಎಂದು ಅವರು ತಿಳಿಸಿದರು .

English summary
Chakravarthy Sulibele said that, ‘I am Modi’ campaign to be held against minister Roshan Baig over his derogatory remark against PM Narendra Modi, here in Mangaluru on October 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X