ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಸ್ನಾ ಜಾಗತಿಕ ಕೊಂಕಣಿ ಸಿನಿಮಾ ಪುರಸ್ಕಾರ

|
Google Oneindia Kannada News

ಮಂಗಳೂರು ಡಿಸೆಂಬರ್ 10: ಸಿನಿಮಾ ನವಶತಮಾನದ ಭಾಷೆ. ಕೊಂಕಣಿಯಲ್ಲಿ ನೀವು ಬಾಹುಬಲಿಯಂತಹ ಸಿನಿಮಾ ಮಾಡಬೇಕಿಲ್ಲ .

ಸಿನಿಮಾ ದೊಡ್ಡದು ಅಥವಾ ಸಣ್ಣದು ಆಗಿರಲಿ. ಕೊಂಕಣಿಯಂತಹ ಭಾಷೆಯಲ್ಲಿ ನಡೆಯುವ ಈ ಸಣ್ಣ ಸಣ್ಣ ಕೆಲಸಗಳೇ ಕೊಂಕಣಿ ಸಿನೆಮಾ ಕ್ಷೇತ್ರಕ್ಕೆ ಭದ್ರ ಬುನಾದಿಯ ಇಟ್ಟಿಗೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಅಭಿಪ್ರಾಯ ಪಟ್ಟಿದ್ದಾರೆ.

ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ನಿನ್ನೆ ಸಂಜೆ ಮಾಂಡ್ ಸೊಭಾಣ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಹಿಸ್ನಾ ಜಾಗತಿಕ ಕೊಂಕಣಿ ಸಿನಿಮಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರಧಾನ ಮಾಡಿ ಅವರು ಮಾತನಾಡಿದರು.

ಸಿನಿಮಾ ಭಾಷೆ ಎನ್ನುವುದು ಹೊಸ ಶತಮಾನದ ಭಾಷೆ .ಅಲ್ಲಿ ತಮಿಳು ,ತಲುಗು ಹಿಂದಿ ಎನ್ನುವ ಭಾಷೆಗಳಿಗಿಂತ ಹೆಚ್ಚಾಗಿ ಅದ್ಬುತ ವಿಚಾರವನ್ನು ಮಂಡಿಸುವ ಕಾರ್ಯ ನಡೆಯತ್ತಿದೆ.

Hyssna Global Konkani Cine Awards

ಕೊಂಕಣಿ ಸಿನಿಮಾ ಮಾಡುವ ಮೂಲಕ ಇಲ್ಲಿನ ಈ ಭಾಷೆ ಮಾತನಾಡಿ ಜನತೆ ನೋಡಿಕೊಂಡು ಸಂಭ್ರಮಿಸುತ್ತಾ , ಆಚರಿಸುತ್ತಾ ಮುಂದಿನವರಿಗೆ ವರ್ಗಾವಣೆ ಮಾಡುವ ಕೆಲಸವನ್ನು ಮಾಡಿಕೊಂಡು ಬನ್ನಿ ಎಂದು ಹೇಳಿದರು. ಕೊಂಕಣಿ ಸಿನೆಮಾ ಕ್ಷೇತ್ರವನ್ನು ಪ್ರೋತ್ಸಾಹಿಸಲು ಹಾಗೂ ಕಲಾವಿದರನ್ನು ಗೌರವಿಸಲು ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಆಯೋಜಿಸಿದ ಈ ಕಾರ್ಯದಲ್ಲಿ 8 ವಿಭಾಗದಲ್ಲಿ ಪುರಸ್ಕಾರಗಳನ್ನು ನೀಡಲಾಯಿತು.

ಗೋವಾದ ಗಾನಕೋಗಿಲೆ ಬಿರುದಾಂಕಿತ ಲೋರ್ನಾ ಇವರು ಕೊಂಕಣಿಯ ಗಾಯನ ಲೋಕದ ದಂತಕಥೆ ಕ್ರಿಸ್ ಪೆರಿ ಇವರ ಪ್ರಖ್ಯಾತ ರಚನೆಗಳಾದ ನಶಿಬಾಕ್ ರಡ್ತಾಂ, ಸರ್ಗ್ ತುಜ್ಯಾ ದೊಳ್ಯಾಂನಿ, ದೆಣೆಂ, ನಾಚುಂಯಾಂ ಕುಂಪಾಸರ್ ಹಾಗೂ ಬೆಬ್ದೊ ಗೀತೆಗಳನ್ನು ಹಾಡಿ ರಂಜಿಸಿದರು. ಪ್ರತಿಭಾವಂತ ಯುವ ಗಾಯಕಿ ನೈಸಾ ಲೊಟ್ಲಿಕಾರ್ ಮ್ಯಾನ್ವೆಲ್ ಆಫೊನ್ಸೊ ರಚಿತ ಸೊಭಿತ್ ರುಪ್ಣೆಂ ಗೀತೆಯನ್ನು ಹಾಡಿದರು.

ಗೋವಾದ ಪ್ರಸಿದ್ಧ ಸಂಗೀತಗಾರರಾದ ನೊರ್ಮನ್ ಕಾರ್ಡೊಜ್ ಇವರ ನೇತೃತ್ವದಲ್ಲಿ ಥಿಯೊ, ನೊಲ್ವರ್ಟ್, ಸೆಮಿ, ಆಂಟೊನಿಯೊ, ಜೊನ್ ಹಾಗೂ ಕ್ಯಾನನ್ ಇವರನ್ನೊಳಗೊಂಡ ತಂಡವು ಸುಮಧುರ ಸಂಗೀತ ನೀಡಿತು.

ನಾಚ್ ಸೊಭಾಣ್ ತಂಡವು ಆಮ್ಚೆಂ ನಶಿಬ್, ನಿರ್ಮೊಣ್, ಮೋಗ್ ಆನಿ ಮಾಯ್ಪಾಸ್ ಹಾಗೂ ನಾಚುಂಯಾ ಕುಂಪಾಸರ್ ಸಿನೆಮಾಗಳ ಹಾಡುಗಳಿಗೆ ವೈವಿಧ್ಯಮಯ ನೃತ್ಯಗಳನ್ನು ಪ್ರಸ್ತುತಪಡಿಸಿತು.

ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಹಾಗೂ ಅಧ್ಯಕ್ಷ ಲುವಿ ಜೆ ಪಿಂಟೊ ಗಣ್ಯ ಅತಿಥಿಗಳಾದ ಪ್ರಕಾಶ್ ರೈ, ಕಾರ್ಯಕ್ರಮದ ಪ್ರಾಯೋಜಕರಾದ ಹಿಸ್ನಾ ಇಂಟರ್‌ನ್ಯಾಶನಲ್ ಮಾಲಿಕ ರೊನಾಲ್ಡ್ ಪಿಂಟೊ, ನಗದು ಬಹುಮಾನಗಳ ಪ್ರಾಯೋಜಕ ನೆಲ್ಸನ್ ರೊಡ್ರಿಕ್ಸ್ ದುಬಾಯಿ ಹಾಗೂ ಸಹ ಪ್ರಾಯೋಜಕರಾದ ದುಬ್ವಾ ಪ್ರೊಡಕ್ಷನ್ ಸಂಸ್ಥೆಯ ಡಿಕ್ಸನ್ ಡಿಸೋಜ ಇವರನ್ನು ಗೌರವಿಸಿದರು.

ಕಾರ್ಯಕ್ರಮದಲ್ಲಿ ಪ್ರತಿ ವಿಭಾಗದ ವಿಜೇತರಿಗೆ 25ಸಾವಿರ ರೂಪಾಯಿ ನಗದು ಸೇರಿದಂತೆ ವಿಶಿಷ್ಟ ವಿನ್ಯಾಸದ ಟ್ರೋಫಿ ನೀಡಿ ಸನ್ಮಾನಿಸಲಾಯಿತು.

ಪುರಸ್ಕಾರ ವಿಜೇತರ ವಿವರ :
1. ಶ್ರೇಷ್ಟ ಚಲನಚಿತ್ರ : ಅಂತು
2. ಶ್ರೇಷ್ಟ ನಿರ್ದೇಶಕ : ಕರೋಪಾಡಿ ಅಕ್ಷಯ್ ನಾಯಕ್ (ಅಂತು)
3. ಶ್ರೇಷ್ಟ ನಟ : ಸುಜಯ್ ಶ್ಯಾನುಭಾಗ್ (ಅಂತು)
4. ಶ್ರೇಷ್ಟ ನಟಿ : ಎಸ್ತೆರ್ ನೊರೊನ್ಹಾ (ಸೊಫಿಯಾ)
5. ಶ್ರೇಷ್ಟ ಪೋಷಕ ನಟ : ರೊನ್ ರೊಡ್ರಿಗಸ್ (ಏಕ್ ಆಸ್ಲ್ಯಾರ್ ಏಕ್ ನಾ)
6. ಶ್ರೇಷ್ಟ ಪೋಷಕ ನಟಿ : ಪೂರ್ಣಿಮಾ ಸುರೇಶ್ (ಅಂತು)
7. ಶ್ರೇಷ್ಟ ಸಾಹಿತ್ಯ : ಹ್ಯಾರಿ ಫೆರ್ನಾಂಡಿಸ್ (ಸೊಫಿಯಾ)
8. ಶ್ರೇಷ್ಟ ಸಂಗೀತ : ಕ್ರೈಸ್ಟ್ ಸಿಲ್ವಾ/ಜೊಯೆಲ್ ಫೆರ್ನಾಂಡಿಸ್/ಟೈರನ್ ನೊರೊನ್ಹಾ (ಕನೆಕ್ಷನ್)
ಕಿರು ಚಿತ್ರ ವಿಭಾಗದಲ್ಲಿ ಆಮ್ಚೆಂ ಘರ್' ಚಿತ್ರಕ್ಕೆ ಸಮಾಧಾನಕರ ಬಹುಮಾನ 5 ಸಾವಿರ ರೂಪಾಯಿ ನೀಡಿ ಗೌರವಿಸಲಾಯಿತು.

English summary
Hyssna global Konkani cine Award whichwas held at Kalangan Shakthinagar here on Sunday on December09.The award consist of conveted title, a trophy and Rs 25 thousand each.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X