• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ಫ್ಯೂ ಇರುವಾಗ ಮದುವೆಗೆ ಹೋಗೋದು ಹೇಗೆ?, ವಿವರ

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಏಪ್ರಿಲ್ 21; ಕೊರೊನಾ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ ಶನಿವಾರ ಮತ್ತು ಭಾನುವಾರ ಕರ್ಫ್ಯೂ ಜಾರಿಗೊಳಿಸಿದೆ. ಈ ನಡುವೆ ಮದುವೆ ಕಾರ್ಯಕ್ರಮಗಳಿಗೆ ಸರ್ಕಾರ ಸ್ವಲ್ಪ ಮಟ್ಟಿನ ರಿಯಾಯತಿ ನೀಡಿದೆ.

ವಾರಾಂತ್ಯದ ಕರ್ಫ್ಯೂ ನಡುವೆ ಮದುವೆ ಕಾರ್ಯಕ್ರಮಗಳಿಗೆ ಅನುಮತಿ ತೆಗದುಕೊಳ್ಳಬೇಕು. ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಏನು ಮಾಡಬೇಕು? ಎಂಬ ಗೊಂದಲಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಸ್ಪಷ್ಟವಾಗಿ ಉತ್ತರಿಸಿದ್ದಾರೆ.

ಮಂಗಳೂರು; ಜಾತ್ರೆ ಮಾಡಿದ ದೇವಾಲಯದ ವಿರುದ್ಧ ಪ್ರಕರಣ ಮಂಗಳೂರು; ಜಾತ್ರೆ ಮಾಡಿದ ದೇವಾಲಯದ ವಿರುದ್ಧ ಪ್ರಕರಣ

ಈಗಾಗಲೇ ರಾಜ್ಯ ಸರ್ಕಾರದ ಆದೇಶದಂತೆ ಮದುವೆ ಕಾರ್ಯಕ್ರಮಗಳಿಗೆ ಕೇವಲ 50 ಜನರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಮದುವೆ ಮನೆಯವರು ಮೊದಲು ತಾವು ಕರೆದಿರುವ 50 ಮಂದಿಯ ಹೆಸರಿನ ಪಟ್ಟಿಯನ್ನು ಸಿದ್ಧಪಡಿಸಬೇಕು.

ಬೆಂಗಳೂರು-ಮಂಗಳೂರು ನಡುವೆ ಏ.10 ರಿಂದ 3 ರೈಲುಬೆಂಗಳೂರು-ಮಂಗಳೂರು ನಡುವೆ ಏ.10 ರಿಂದ 3 ರೈಲು

ಆ 50 ಮಂದಿಯ ಪಟ್ಟಿಯಲ್ಲಿ ಅರ್ಚಕರು, ಮದುವೆ ಗಂಡು-ಹೆಣ್ಣು, ಫೋಟೋಗ್ರಾಫರ್ ಕೂಡಾ ಒಳಗೊಂಡಿರುತ್ತಾರೆ. ಪಟ್ಟಿಯನ್ನು ಮಹಾನಗರ ಪಾಲಿಕೆಯ ಜನರಾದರೆ ಪಾಲಿಕೆಯ ಆಯುಕ್ತರ ಬಳಿ, ಪಟ್ಟಣ ಪಂಚಾಯತಿ ಅವರಾದರೆ ತಹಶೀಲ್ದಾರ್ ಬಳಿ, ಗ್ರಾಮ ಪಂಚಾಯತ್ ವ್ಯಾಪ್ತಿಯಾದರೆ ಪಿಡಿಒ ಬಳಿ ನೀಡಿ ಅನುಮತಿ ಪತ್ರ ಪಡೆದುಕೊಳ್ಳಬೇಕು.

ರಾಮನಗರ; ಆತಂಕ ತಂದ ಕೋವಿಡ್ ಸೋಂಕಿತರ ನಾಪತ್ತೆ ರಾಮನಗರ; ಆತಂಕ ತಂದ ಕೋವಿಡ್ ಸೋಂಕಿತರ ನಾಪತ್ತೆ

ಪಟ್ಟಿಯನ್ನು ನೀಡಿದಾಗ ಮದುವೆ ಕಾರ್ಯಕ್ರಮಕ್ಕೆ ಅನುಮತಿ ಸಿಗುತ್ತದೆ. ಆದರೆ 50 ಮಂದಿಗಿಂತ ಹೆಚ್ಚು ಜನ ಕಾರ್ಯಕ್ರಮದಲ್ಲಿದ್ದರೆ ಅನುಮತಿ ನೀಡಿದ ಅಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ.

50 ಜನರ ಪಟ್ಟಿಯಲ್ಲಿರುವ ವ್ಯಕ್ತಿ ಮದುವೆ ಕಾರ್ಯಕ್ರಮಗಳಿಗೆ ಹೋಗಬೇಕಾದರೆ ಮದುವೆ ಕಾರ್ಯಕ್ರಮದ ಮೂಲ ಆಮಂತ್ರಣ ಪತ್ರಿಕೆ, ಪಟ್ಟಿಯಲ್ಲಿ ಹೆಸರಿದ್ದ ಬಗ್ಗೆ ದಾಖಲಾತಿ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಹೊಂದಿರಲೇಬೇಕು.

ಕಾರಿನಲ್ಲಿ ಪ್ರಯಾಣಿಸುವಾಗ ಕುಟುಂಬದ ಇಬ್ಬರು ಮದುವೆಗೆ ಹೋಗಬೇಕಾದರೆ ಇಬ್ಬರಲ್ಲೂ ಈ ಎಲ್ಲಾ ದಾಖಲಾತಿ ಗಳು ಇರಲೇಬೇಕಾಗುತ್ತದೆ ಎಂದುದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಸ್ಪಷ್ಟ ಪಡಿಸಿದ್ದಾರೆ.

ಇನ್ನು ದೇವಾಲಯಗಳಲ್ಲಿ ಮದುವೆ ಕಾರ್ಯಕ್ರಮಗಳು ನಡೆದರೆ ಸಾರ್ವಜನಿಕರು ಸೇರದಂತೆ ದೇವಾಲಯದ ಆಡಳಿತ ಮಂಡಳಿ ನೋಡಿಕೊಳ್ಳಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಲು ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಡಳಿತ ಹೇಳಿದೆ.

English summary
Karnataka government announced weekend curfew till May 4, 2021. How to attend marriage during curfew time here are the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X