• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೆರೆ ತಪ್ಪಿಸಿಕೊಳ್ಳಲು ಬೈಲಗುತ್ತು ನಿವಾಸಿ ಮಾಡಿದ ಸಾಹಸವೇನು ಗೊತ್ತಾ?

|

ಮಂಗಳೂರು, ಸೆಪ್ಟೆಂಬರ್ 07 : ವಾಹನಗಳ ಟೈರ್ ಪಂಚರ್ ಆದರೆ ವಾಹನದ ಅಡಿಯಲ್ಲಿ ಜಾಕ್ ಕೊಟ್ಟು ವಾಹನವನ್ನು ಮೇಲೆತ್ತಿ ಟೈರ್ ಬದಲಿಸಿರುವುದನ್ನು ನಾವು ನೋಡಿದ್ದೇವೆ. ಲಾರಿ, ಕಾರು, ಬಸ್ ಗಳ ಟೈರ್ ಬದಲಿಸಲು ಇದೇ ತಂತ್ರಜ್ಞಾನ ಬಳಸಲಾಗುತ್ತದೆ.

ಆದರೆ ಪೂರ್ತಿ ಮನೆಯನ್ನೇ ಮೇಲೆತ್ತಲು ಜಾಕ್ ಬಳಸಿದ್ದನ್ನು ನೋಡಿದ್ದಿರಾ? ಆದರೆ ಇಂತಹ ಸಾಹಸ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಬಂಟ್ವಾಳದಲ್ಲಿ ಲಾರಿ, ಬಸ್, ಕಾರ್ ಗಳಿಗೆ ಹಾಕಲಾಗುತ್ತಿದ್ದ ಜಾಕ್ ಇದೀಗ ಮನೆಯನ್ನು ಮೇಲಕ್ಕೆತ್ತಲು ಬಳಸುತ್ತಿದ್ದು, ಅದರ ಮೂಲಕವೇ ಇಡೀ ಮನೆಯನ್ನು ಗೋಡೆ ಕುಸಿಯದ ರೀತಿಯಲ್ಲಿ ಲಿಫ್ಟ್ ಮಾಡಲಾಗಿದೆ.

ಬದುಕಿ ಬಾಳಿದ ಜಾಗ ವಾಸಕ್ಕೆ ಅಪಾಯಕಾರಿ, ಕಣ್ಣೀರಿಟ್ಟ ಸಂತ್ರಸ್ತರು

ಕರಾವಳಿಯಲ್ಲಿ ಮಳೆಗಾಲ ಶುರುವಾಯಿತೆಂದರೆ ಬಹುತೇಕ ಮಂದಿಗೆ ಮಂಡೆ ಬಿಸಿ ಶುರು. ಅದಕ್ಕೆ ಕಾರಣ ಮಳೆ ಬಂದರೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ. ಆಗ ಅಲ್ಲಿ ವಾಸಿಸಲೂ ಆಗದೆ ಬೇರೆಡೆಗೆ ತಾತ್ಕಾಲಿಕವಾಗಿ ಸ್ಥಳಾಂತರವಾಗುವ ಹಲವಾರು ಪ್ರಸಂಗಗಳು ನಡೆಯುತ್ತವೆ.

ಪ್ರತಿವರ್ಷ ಈ ಕಷ್ಟದಿಂದ ಬೇಸತ್ತಿದ್ದ ಬಂಟ್ವಾಳದ ಸಜೀಪನಡು ಗ್ರಾಮದ ಬೈಲಗುತ್ತು ನಿವಾಸಿ ರಿಯಾಝ್ ಎಂಬವರು ಇದಕ್ಕೊಂದು ಪರಿಹಾರವನ್ನು ಹುಡುಕಿಕೊಂಡಿದ್ದಾರೆ. 'ಹೌಸ್ ಲಿಫ್ಟಿಂಗ್' ಮೂಲಕ ಮನೆಯನ್ನೇ ಎತ್ತರಕ್ಕೆರಿಸಿಸಲು ಮುಂದಾಗಿದ್ದಾರೆ.

ಕೊಡಗು : ನಿರಾಶ್ರಿತರ ತಾತ್ಕಾಲಿಕ ಶೆಡ್ ಹೀಗಿದೆ ನೋಡಿ

ಈ ಪ್ರದೇಶದಲ್ಲಿ ಭಾರೀ ಮಳೆ ಸುರಿದರೆ ಪಕ್ಕದ ನೇತ್ರಾವತಿ ನದಿ ನೀರು ಗ್ರಾಮದ ಕೆಲ ಮನೆಗಳಿಗೆ ನುಗ್ಗುತ್ತದೆ. ಬೈಲಗುತ್ತು, ಬೋಳಮೆ ನಿವಾಸಿಗಳು ಪ್ರತಿವರ್ಷ ಇದರಿಂದ ಸಂಕಷ್ಟ ಪಡುತ್ತಾರೆ. ನೆರೆ ನೀರಿನಿಂದಾಗಿ ಅಲ್ಲಿನ ರಸ್ತೆ ಸಂಪರ್ಕವೂ ಕಡಿತಗೊಳ್ಳುತ್ತದೆ. ಈ ವೇಳೆ ಅನ್ಯ ದಾರಿಯಿಲ್ಲದೇ ಬೇರೆಡೆಗೆ ತಾತ್ಕಾಲಿಕ ಸ್ಥಳಾಂತರವಾಗಬೇಕಾಗುತ್ತದೆ.

ಇದರಿಂದ ಬೇಸತ್ತಿದ್ದ ರಿಯಾಝ್ ರವರು ಸೂಕ್ತ ಪರಿಹಾರದ ಹುಡುಕಲು ಆರಂಭಿಸಿದ್ದರು. ಆ ಸಂದರ್ಭದಲ್ಲಿ ತಮ್ಮ ಸ್ನೇಹಿತನಿಂದ 'ಹೌಸ್ ಲಿಫ್ಟಿಂಗ್' ಕುರಿತು ಮಾಹಿತಿ ಲಭಿಸಿದೆ. ಅಂದ ಹಾಗೆ, ರಿಯಾಝ್ ಹೌಸ್ ಲಿಫ್ಟಿಂಗ್ ಮಾಡಿದ ಬಗೆ ಹೇಗಿತ್ತು ಎನ್ನುವುದನ್ನು ತಿಳಿಯಲು ಈ ಲೇಖನ ಓದಿ...

 ಮನೆ ಮೇಲಕ್ಕೆತ್ತುವ ಕೆಲಸ ಆರಂಭ

ಮನೆ ಮೇಲಕ್ಕೆತ್ತುವ ಕೆಲಸ ಆರಂಭ

ಮನೆಯ ಎತ್ತರವನ್ನು ಏರಿಸಲು ನಿರ್ಧರಿಸಿ ರಿಯಾಝ್, ಆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ದೆಹಲಿ ಮೂಲದ 'ಹರಿ ಓಂ ಶಿವ ಹೌಸ್ ಲಿಫ್ಟಿಂಗ್ ಕನ್ಸ್ ಟ್ರಕ್ಷನ್ ಪ್ರೈ.ಲಿ ಬಗ್ಗೆ ಮಾಹಿತಿ ಪಡೆದು ಅವರನ್ನು ಗ್ರಾಮಕ್ಕೆ ಕರೆಸಿ ಅವರ ಮೂಲಕ ಮನೆಯನ್ನೇ ಮೇಲಕ್ಕೆತ್ತುವ ಸಾಹಸಕ್ಕೆ ಕೈ ಹಾಕಿದ್ದಾರೆ.

ಈ ತಂತ್ರಜ್ಞಾನದ ಮೂಲಕ ಕೇವಲ ನೆಲ ಅಗೆದು ನಂತರ ಗೋಡೆಯೊಂದಿಗೆ ನಿರ್ಧಿಷ್ಟ ಎತ್ತರಕ್ಕೆ ಮನೆಯನ್ನು ಎತ್ತರಕ್ಕೇರಿಸಲಾಗುತ್ತದೆ. ಈಗಾಗಲೇ ಗ್ರಾಮಕ್ಕೆ ಆಗಮಿಸಿರುವ 'ಹರಿ ಓಂ ಶಿವ ಹೌಸ್ ಲಿಫ್ಟಿಂಗ್ ಕನ್ಸ್ ಟ್ರಕ್ಷನ್ ಪ್ರೈ.ಲಿ ಕಾರ್ಮಿಕರು ಮನೆಯನ್ನೇ ಮೇಲಕ್ಕೆತ್ತುವ ಕೆಲಸವನ್ನು ಈಗಾಗಲೇ ಆರಂಭಿಸಿದ್ದಾರೆ.

 180 ಜಾಕ್ ಬಳಕೆ

180 ಜಾಕ್ ಬಳಕೆ

ಪೂರ್ತಿ ಮನೆಯನ್ನು ಮೇಲಕ್ಕೆತ್ತಿ ಮನೆಯ ಅಡಿಪಾಯವನ್ನು ಮತ್ತಷ್ಟು ಎತ್ತರಕ್ಕೆ ಕಟ್ಟುವ ಕೆಲಸ ಕೆಲವೇ ದಿನಗಳಲ್ಲಿ ಪೂರ್ತಿಯಾಗಲಿದೆ. 1 ಸಾವಿರ ಚದರ ಮೀಟರ್ ಮನೆ ಮೇಲೆತ್ತಲು ಸುಮಾರು 2.5 ಲಕ್ಷ ರೂ. ಖರ್ಚಾಗುತ್ತದೆ ಎನ್ನುತ್ತಾರೆ ಮನೆ ಮಾಲಕ ಮುಹಮ್ಮದ್ ರಿಯಾಝ್ .

ಸದ್ಯಕ್ಕೆ 1 ಫೀಟ್ ನಷ್ಟು ಮನೆಯನ್ನು ಮೇಲಕ್ಕೆತ್ತಲಾಗಿದೆ. ಇನ್ನೂ 2.5 ಫೀಟ್ ಮೇಲಕ್ಕೆ ಎತ್ತರಕ್ಕೇರಿಸುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಸುಮಾರು 180 ರಷ್ಟು ಜಾಕ್ ಗಳನ್ನು ಬಳಸಲಾಗಿದೆ.

ಕೊಡಗಿನಲ್ಲಿ ಮನೆ ಕಳೆದುಕೊಂಡವರಿಗೆ ಹೊಸ ಮನೆ: ವಸತಿ ಸಚಿವರ ಭರವಸೆ

 ಪ್ರಥಮ ಬಾರಿಗೆ ಮನೆ ಮೇಲೆತ್ತುವ ಕೆಲಸ ನಿರ್ವಹಣೆ

ಪ್ರಥಮ ಬಾರಿಗೆ ಮನೆ ಮೇಲೆತ್ತುವ ಕೆಲಸ ನಿರ್ವಹಣೆ

ಜಾಕ್ ಗಳನ್ನು ಬಳಸಿ ಕ್ರಮಬದ್ಧವಾಗಿ ಮನೆಯ ನಾಲ್ಕೂ ಕಡೆಗಳಿಂದ ಮೇಲಕ್ಕೇರಿಸಲಾಗುತ್ತಿದೆ. ಈ ತಂತ್ರಜ್ಞಾನದ ಪ್ರಕಾರ ಮನೆ ಮೇಲೆ ಏರಿಸಿದಂತೆಯೇ ಒಂದೊಂದು ಜಾಕ್ ಗಳನ್ನು ಕಳಚಿ ಕಲ್ಲನ್ನು ಕಟ್ಟಿ ಭದ್ರಪಡಿಸಲಾಗುತ್ತದೆ. ಕರ್ನಾಟಕದಲ್ಲಿ ದೆಹಲಿಯ ಈ ಹರಿ ಓಂ ಶಿವ ಹೌಸ್ ಲಿಫ್ಟಿಂಗ್ ಕನ್ಸ್ ಟ್ರಕ್ಷನ್ ಕಂಪೆನಿ ಪ್ರಥಮ ಬಾರಿಗೆ ಮನೆ ಮೇಲೆತ್ತುವ ಕೆಲಸ ನಿರ್ವಹಿಸುತ್ತಿದೆ.

 ಇತರೆ ರಾಜ್ಯಗಳಲ್ಲಿ ಯಶಸ್ವಿ

ಇತರೆ ರಾಜ್ಯಗಳಲ್ಲಿ ಯಶಸ್ವಿ

ಇದುವರೆಗೆ ವಿದೇಶ ಹಾಗೂ ಹೊರ ರಾಜ್ಯಗಳಲ್ಲಿ ಕಾಣುತ್ತಿದ್ದ ಈ ತಂತ್ರಜ್ಞಾನದ ಬಳಕೆ ಕರಾವಳಿ ಭಾಗದಲ್ಲೂ ಕಾಲಿರಿಸಿದೆ. ಕೇರಳ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಈಗಾಗಲೇ ಈ ಕೆಲಸವನ್ನು ಹರಿ ಓಂ ಶಿವ ಹೌಸ್ ಲಿಫ್ಟಿಂಗ್ ಕನ್ಸ್ ಟ್ರಕ್ಷನ್ ಕಂಪೆನಿ ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಹೇಳಲಾಗಿದೆ.

ಮುಹಮ್ಮದ್ ರಿಯಾಝ್ ಅವರ ಮನೆ ಮೇಲೆತ್ತುವ ಕಾರ್ಯ ಪೂರ್ಣಗೊಂಡ ಬಳಿಕ ಅವರ ಸಹೋದರನ ಮನೆಯನ್ನೂ ಕೂಡ ಇದೇ ರೀತಿ ಮೇಲಕ್ಕೆತ್ತಲು ತೀರ್ಮಾನಿಸಲಾಗಿದೆ.

English summary
The house in Sajipanadu of Bantwal catching attention. Here entire house lifted by nearly 2 feet to tackle the flood problem in the area. Here is the full details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more