ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಳುಗಿದ ಸುಬ್ರಹ್ಮಣ್ಯ ಹೊಸಮಠ ಸೇತುವೆ: ವಾಹನ ಸಂಚಾರ ಸ್ಥಗಿತ

By ಮಂಗಳೂರು ಪ್ರತಿನಿಧಿ
|
Google Oneindia Kannada News

Recommended Video

ಕುಕ್ಕೆ ಸುಬ್ರಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಹೊಸ ಮಠ ಮುಳುಗಡೆ | Oneindia Kannada

ಮಂಗಳೂರು, ಜೂನ್ 29: ಕಳೆದ 3 ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಎಡೆಬಿಡದೆ ಮಳೆ ಮುಂದುವರಿದ ಪರಿಣಾಮ ಜಿಲ್ಲೆಯ ಜೀವ ನದಿ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ತುಂಬಿ ಉಕ್ಕಿ ಹರಿಯತೊಡಗಿದೆ.

ಸುಬ್ರಹ್ಮಣ್ಯ ಬಳಿಯ ಹೊಸಮಠ ಸೇತುವೆ ಮತ್ತೆ ಮುಳುಗಡೆಯಾಗಿದೆ. ಕುಮಾರಧಾರಾ ನದಿಯಲ್ಲಿ ಪ್ರವಾಹ ಪರಿಸ್ಥಿತಿಯಿದೆ. ಹೊಸಮಠ ಸೇತುವೆ ಮುಳುಗಡೆಯಾದ ಕಾರಣ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ - ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಬಂದ್ ಆಗಿದ್ದು ಭಕ್ತರು ಪರದಾಡುವಂತಾಗಿದೆ.

ದ.ಕ.ದಲ್ಲಿ ಬಿರುಸುಗೊಂಡ ಮಳೆ: ತಗ್ಗು ಪ್ರದೇಶಗಳು ಜಲಾವೃತದ.ಕ.ದಲ್ಲಿ ಬಿರುಸುಗೊಂಡ ಮಳೆ: ತಗ್ಗು ಪ್ರದೇಶಗಳು ಜಲಾವೃತ

ಇದೇ ವೇಳೆ, ಸಂಗಮ ಕ್ಷೇತ್ರ ಉಪ್ಪಿನಂಗಡಿ ಬಳಿ ನೀರಿನ ಮಟ್ಟ ಏರಿಕೆಯಾಗಿದ್ದು, ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಸಂಗಮಗೊಂಡು ಸಹಸ್ರಲಿಂಗೇಶ್ವರ ದೇವಸ್ಥಾನದ ಅಂಗಣಕ್ಕೆ ನೀರು ನುಗ್ಗುವ ಸಾಧ್ಯತೆ ವ್ಯಕ್ತವಾಗಿದೆ.

Hosmata Bridge connecting Kukke Subramanya submerged in flood water

ಚುರುಕುಗೊಂಡ ದಕ್ಷಿಣ ಕನ್ನಡದ ಪ್ರಮುಖ ಸೇತುವೆಗಳ ತಪಾಸಣಾ ಕಾರ್ಯಚುರುಕುಗೊಂಡ ದಕ್ಷಿಣ ಕನ್ನಡದ ಪ್ರಮುಖ ಸೇತುವೆಗಳ ತಪಾಸಣಾ ಕಾರ್ಯ

ಕಳೆದ ಮೂರು ವರ್ಷಗಳಲ್ಲಿ ಇದುವರೆಗೂ ಉಪ್ಪಿನಂಗಡಿಯ ಸಂಗಮ ಕ್ಷೇತ್ರ ಮುಳುಗಡೆಯಾಗಿರಲಿಲ್ಲ ಎಂಬುದು ಗಮನಾರ್ಹ. ಮಳೆಯಿಂದಾಗಿ ಹೆಚ್ಚಿನ ಹಾನಿ ಆಗದಿದ್ದರೂ, ಜನರು ಚಳಿಯಿಂದ ಥರಗುಟ್ಟುವಂತಾಗಿದೆ. ಮಂಗಳೂರಿನ ರಸ್ತೆಗಳಲ್ಲಿ ನೀರು ಹರಿಯತೊಡಗಿದ್ದು ವಾಹನಗಳ ಸಂಚಾರಕ್ಕೆ ತೊಡಕಾಗಿದೆ.

English summary
Dakshina kannad and Udupi districts of coastal Karnataka received heavy rainfall science 3 days. Hosmata bridge connecting Kukke Subrahamnya and Uppinangady submerged in flood water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X