• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು; ಪಕ್ಕದ ಫ್ಲ್ಯಾಟ್ ವ್ಯಕ್ತಿಯನ್ನೇ ಹನಿಟ್ರ್ಯಾಪ್ ಮಾಡಿದ ಜೋಡಿ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 29; ಪಕ್ಕದ ಮನೆಯವರು ರಾತ್ರಿ ಊಟಕ್ಕೆ ಕರೆದರೆ ಹೋಗಬೇಕಾ? ಎಂದು ನೂರು ಬಾರಿ ಯೋಚಿಸಬೇಕಾದ ಘಟನೆ ಮಂಗಳೂರಿನಲ್ಲಿ ನಡೆದಿದೆ‌‌‌. ಫ್ಲ್ಯಾಟ್‌ನಲ್ಲಿ ವಾಸವಿದ್ದ ಜೋಡಿ, ಪಕ್ಕದ ಫ್ಲ್ಯಾಟ್‌ನಲ್ಲಿದ್ದ ಉದ್ಯಮಿಯನ್ನು ರಾತ್ರಿ ಊಟಕ್ಕೆ ಕರೆದು, ಮದ್ಯ ಕುಡಿಸಿ ಹನಿಟ್ರ್ಯಾಪ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಮಂಗಳೂರು ನಗರದ ಹೊರವಲಯದ ಉಳ್ಳಾಲದ ಇನ್ ಲ್ಯಾಂಡ್ ಇಂಫಾಲ ಅಪಾರ್ಟ್‌ಮೆಂಟ್‌ನಲ್ಲಿ ಜುಲೈ 19ರಂದು ಈ ಘಟನೆ ನಡೆದಿದೆ. ಜುಲೈ 23ರಂದು ಪ್ರಕರಣ ದಾಖಲಾಗಿದ್ದು, ಪೊಲೀಸರು ಜೋಡಿಯನ್ನು ಬಂಧಿಸಿದ್ದಾರೆ.

ಪುತ್ತೂರು; ಹನಿಟ್ರ್ಯಾಪ್ ಜಾಲ ಬಯಲು, ಯುವತಿ ಬಂಧನ ಪುತ್ತೂರು; ಹನಿಟ್ರ್ಯಾಪ್ ಜಾಲ ಬಯಲು, ಯುವತಿ ಬಂಧನ

ಬಂಧಿತ ಜೋಡಿಯನ್ನು ಸಫ್ನಾ (23) ಮತ್ತು ಅಝ್ವೀನ್ ಎಂದು ಗುರುತಿಸಲಾಗಿದೆ. ಸಫ್ನಾ ಹಣ ಮಾಡುವ ಉದ್ದೇಶದಿಂದ ತನ್ನ ಸೌಂದರ್ಯವನ್ನೇ ಬಳಿಸಿ ಹನಿಟ್ರ್ಯಾಪ್ ದಂಧೆಗೆ ಇಳಿದಿದ್ದಾಳೆ. ಈಕೆಗೆ ಅಝ್ವೀನ್ ಜೊತೆ ಗೆಳೆತನವಿದ್ದು, ಇವರಿಬ್ಬರು ಸೇರಿಕೊಂಡು ಪಕ್ಕದ ಫ್ಲ್ಯಾಟ್‌ನ ಉದ್ಯಮಿಯೊಬ್ಬರಿಗೆ ಬಲೆ ಬೀಸಿದ್ದಾರೆ.

ಲೊಕಾಂಟೋ ಕಾಲ್ ಗರ್ಲ್ ಸರ್ವೀಸ್ ಹೆಸರಿನಲ್ಲಿ ಹನಿಟ್ರ್ಯಾಪ್ ! ಲೊಕಾಂಟೋ ಕಾಲ್ ಗರ್ಲ್ ಸರ್ವೀಸ್ ಹೆಸರಿನಲ್ಲಿ ಹನಿಟ್ರ್ಯಾಪ್ !

ಉದ್ಯಮಿಯನ್ನು ಸಫ್ನಾ ಒಂದೆಡು ಸಲ ಭೇಟಿ ಮಾಡಿದ್ದಳು. ಜುಲೈ 19ರಂದು ರಾತ್ರಿ ಉದ್ಯಮಿ ಮನೆಯಲ್ಲಿ ಒಂದು ಎಣ್ಣೆ ಪಾರ್ಟಿ ನಡೆದಿತ್ತು. ಪಾರ್ಟಿಯಲ್ಲಿ ಸಫ್ನಾ ಮತ್ತು ಅಝ್ವೀನ್ ಸೇರಿ ಹನಿಟ್ರಾಪ್ ಮಾಡಿ ಕಳ್ಳತನ ಮಾಡಿ ಹೋಗಿದ್ದರು. ಮದ್ಯಕ್ಕೆ ಮತ್ತಿನ ಔಷಧಿ ಬೆರೆಸಿ ಉದ್ಯಮಿಗೆ ಕುಡಿಸಿದ್ದರು. ಬಳಿಕ ಆತನನ್ನು ವಿವಸ್ತ್ರಗೊಳಿಸಿ ತಮಗೆ ಬೇಕಾದ ಭಂಗಿಯಲ್ಲಿ ಫೋಟೊ ಮತ್ತು ವಿಡಿಯೋ ಮಾಡಿಕೊಂಡಿದ್ದರು.

ಬೆಂಗಳೂರು; ವೈದ್ಯರ ಹನಿಟ್ರ್ಯಾಪ್, 10 ಲಕ್ಷ ಕೇಳಿದವರು ಕಂಬಿ ಹಿಂದೆ! ಬೆಂಗಳೂರು; ವೈದ್ಯರ ಹನಿಟ್ರ್ಯಾಪ್, 10 ಲಕ್ಷ ಕೇಳಿದವರು ಕಂಬಿ ಹಿಂದೆ!

ಬಳಿಕ ಮನೆಯಲ್ಲಿದ್ದ 2.12 ಲಕ್ಷ ಹಣ ಮತ್ತು ಉದ್ಯಮಿ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಬೆಳಗ್ಗೆ ಎಚ್ಚರಗೊಂಡು ಉದ್ಯಮಿ ಇದೆಲ್ಲಾ ಗೊತ್ತಾಗಿ ಶಾಕ್ ಆಗಿದ್ದ. ಜೋಡಿಗೆ ಕರೆ ಮಾಡಿ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಹೇಳಿದ್ದ.

ದೂರು ನೀಡಿದರೆ ವಿಡಿಯೋ ಮತ್ತು ಫೋಟೋ ವೈರಲ್ ಮಾಡಿ, ಅತ್ಯಚಾರದ ದೂರು ನೀಡುವುದಾಗಿ ಜೋಡಿ ಬೆದರಿಕೆ ಹಾಕಿದ್ದಾರೆ. ಈ ವಿಚಾರವನ್ನು ಮನೆಯವರಿಗೆ ತಿಳಿಸಿದ ಉದ್ಯಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಪೊಲೀಸರು ನಗದು ಮತ್ತು ಒಂದು ಉಂಗುರವನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಇವರಿಂದ ಯಾರಾದರು ವಂಚನೆಗೆ ಒಳಗಾಗಿದ್ದರೆ ದೂರು ನೀಡಿ ಎಂದು ಮಂಗಳೂರು ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ.

English summary
A 23-year-old woman and his friend arrested by Mangaluru police for allegedly honey trapping and blackmailing businessman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X