ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುತ್ತೂರು ಜಾತ್ರೋತ್ಸವದ ವೇಳೆ ಭಗವಾಧ್ವಜವಿರುವ ಆಟೋ ಮಾತ್ರ ಬಳಸಿ; ಹಿಂದೂ ಜಾಗರಣ ವೇದಿಕೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 9: ರಾಜ್ಯದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವಾಗ ಅನ್ಯಧರ್ಮೀಯರ ಕ್ಯಾಬ್ ಬಳಸದಂತೆ ಕರೆ ನೀಡಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಮತ್ತೊಂದು ಅಭಿಯಾನ ಆರಂಭವಾಗಿದೆ.

ಹತ್ತು ದಿನಗಳ ಕಾಲ ನಡೆಯುವ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ವೇಳೆ ಹಿಂದೂಗಳು ಭಗವಾ ಧ್ವಜ ಇರುವ ಹಿಂದೂಗಳ ಆಟೋವನ್ನು ಹೊರತುಪಡಿಸಿ ಇತರ ಆಟೋಗಳನ್ನು ಬಳಸದಂತೆ ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ.

ದೈವಾರಾಧನೆಯಲ್ಲಿ ಸಾಮರಸ್ಯ ಜೀವಂತ; ಮಂಗಳೂರಿನಲ್ಲೇ ನಡೆಯುತ್ತಿದೆ 'ಅರಬ್ಬೀ' ಮುಸ್ಲಿಂ ದೈವದ ಆರಾಧನೆದೈವಾರಾಧನೆಯಲ್ಲಿ ಸಾಮರಸ್ಯ ಜೀವಂತ; ಮಂಗಳೂರಿನಲ್ಲೇ ನಡೆಯುತ್ತಿದೆ 'ಅರಬ್ಬೀ' ಮುಸ್ಲಿಂ ದೈವದ ಆರಾಧನೆ

ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ವ್ಯಾಪಾರ ನಿರ್ಬಂಧದ ಬಳಿಕ ಈಗ ಅನ್ಯಮತೀಯರಿಗೆ ಮತ್ತೊಂದು ನಿರ್ಬಂಧ ಹೇರಲಾಗಿದೆ. ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವಕ್ಕೆ ಹಿಂದೂಗಳ ಆಟೋಗಳನ್ನೇ ಬಳಸುವಂತೆ ಹಿಂದೂ ಜಾಗರಣ ವೇದಿಕೆ ಅಭಿಯಾನ ಆರಂಭಿಸಿದೆ. ಈ ಹಿನ್ನಲೆಯಲ್ಲಿ ಹಿಂದೂ ಜಾಗರಣ ವೇದಿಕೆ ತಾಲೂಕಿನ ಹಿಂದೂಗಳ ಆಟೋಗಳಿಗೆ ಭಗವಾ ಧ್ವಜ ನೀಡಿ ಅಭಿಯಾನ ಆರಂಭಿಸಿದೆ.

Hindu Jagran Vedike Started Campaign In Puttur Asking Hindus To Use Only Hindu Auto Drivers During Mahalingeshwar Jatre

"ಭಗವಾ ಧ್ವಜ ಇದ್ದ ಆಟೋಗಳನ್ನೇ ಹಿಂದೂ ಭಕ್ತಾದಿಗಳು ಆಯ್ಕೆ ಮಾಡಬೇಕೆಂದು ಹಿಂದೂ ಜಾಗರಣ ವೇದಿಕೆ ಪುತ್ತೂರಿನ ಹಿಂದೂ ಭಕ್ತರಲ್ಲಿ ಮನವಿ ಮಾಡಿದೆ. ಜಾತ್ರೆಯ ನೆಪದಲ್ಲಿ ಅನ್ಯಮತೀಯರಿಂದ ಹಿಂದೂ ಹೆಣ್ಣುಮಕ್ಕಳಿಗೆ ತೊಂದರೆಯ ಆರೋಪ ಇದೆ. ಜಾತ್ರೆಗೆ ಬರುವ ನೆಪದಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಮೋಸ ಮಾಡುವ ಜಾಲ ಆಗುತ್ತಿದೆ. ಆಮಿಷಗಳನ್ನು ತೋರಿಸಿ ಅವರನ್ನು ಪುಸಲಾಯಿಸಿ ಅವರ ಬಾಳನ್ನು ಹಾಳು ಮಾಡುವ ಕೆಲಸವನ್ನು ಅನ್ಯಮತೀಯ ಯುವಕರು ಮಾಡುತ್ತಿದ್ದಾರೆ. ಇಡೀ ಜಾತ್ರಾ ಉತ್ಸವದಲ್ಲಿ ಎಲ್ಲೇ ಹಿಂದೂ ಯುವತಿಯರು ಅನ್ಯಧರ್ಮದ ಯುವಕರ ಜೊತೆ ಸುತ್ತಾಡುವುದನ್ನು ನೋಡಿದರೆ ಆಟೋ ಚಾಲಕರು ಹಿಂದೂ ಜಾಗರಣ ವೇದಿಕೆಯ ಗಮನಕ್ಕೆ ತರಬೇಕು," ಅಂತಾ ಹಿಂದೂ ಜಾಗರಣ ವೇದಿಕೆಯ ಪ್ರಮುಖ ಡಾ.ಪ್ರಸಾದ್ ಭಂಡಾರಿ ಮನವಿ ಮಾಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಮತ್ತೆ ಅಕ್ರಮ?; ಸಾಮಗ್ರಿ ಖರೀದಿಯಲ್ಲಿ ಕಮಿಷನ್ ಆರೋಪಕುಕ್ಕೆ ಸುಬ್ರಹ್ಮಣ್ಯ ಮತ್ತೆ ಅಕ್ರಮ?; ಸಾಮಗ್ರಿ ಖರೀದಿಯಲ್ಲಿ ಕಮಿಷನ್ ಆರೋಪ

ಏಪ್ರಿಲ್ 10ರಂದು ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಧ್ವಜಾರೋಹಣವಾಗಲಿದ್ದು, ಏಪ್ರಿಲ್ 20ರಂದು ಧ್ವಜ ಅವರೋಹಣ ನಡೆಯಲಿದೆ. ಈ ಹತ್ತು ದಿನಗಳ ಜಾತ್ರೋತ್ಸವದ ಸಂದರ್ಭ ಆಟೋಗಳು ಕೇಸರಿ ಧ್ವಜವನ್ನು ಹಾಕಿ ಓಡಾಟ ನಡೆಸುವಂತೆ ಹಿಂದೂ ಜಾಗರಣ ವೇದಿಕೆ ಮನವಿ ಮಾಡಿದೆ.

Hindu Jagran Vedike Started Campaign In Puttur Asking Hindus To Use Only Hindu Auto Drivers During Mahalingeshwar Jatre

"ಹಿಂದೂ ಹೆಣ್ಣುಮಕ್ಕಳನ್ನು ಹಿಂದೂಗಳೇ ರಕ್ಷಿಸಬೇಕಾದ ಸಮಯ ಬಂದಿದೆ. ಹಿಂದುತ್ವದ ಹೆಸರಿನಲ್ಲಿ ಬಂದ ಸರಕಾರ ಹಿಂದೂಗಳಿಗೆ ಸಹಕಾರ ನೀಡುತ್ತಿಲ್ಲ. ಹಿಂದೂಗಳ ಮೇಲೆಯೇ ಕೇಸುಗಳನ್ನು ದಾಖಲಿಸಲಾಗುತ್ತಿದೆ. ಹಿಂದೂ ಹೆಣ್ಣುಮಕ್ಕಳನ್ನು ರಕ್ಷಿಸುವ ಕೆಲಸವನ್ನು ಸಂಘಟನೆಗಳು ನಿರಂತರ ಮಾಡಲಿದೆ. ಈ ಅಭಿಯಾನದ ಒಂದು ಭಾಗ ಆಟೋಗಳಿಗೆ ಭಗವಾಧ್ವಜ ಹಾಕಿಸಿ ಹಿಂದುತ್ವ ಉಳಿಸುವ ಕಾರ್ಯ ಮಾಡುತ್ತಿದೆ," ಎಂದು ಪುತ್ತೂರು ಹಿಂದೂ ಜಾಗರಣ ವೇದಿಕೆಯ‌ ಮುಖಂಡ ಡಾ.ಪ್ರಸಾದ್ ಭಂಡಾರಿ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಅತೀ ಪ್ರಸಿದ್ಧ ದೇವಸ್ಥಾನವಾಗಿದ್ದು, ಏಪ್ರಿಲ್ 17ರಂದು ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಭಕ್ತರು ಸೇರುತ್ತಾರೆ. ಪುತ್ತೂರು ಮಹಾಲಿಂಗೇಶ್ವರ ದೇವರು ಈ ಸೀಮೆಯ ದೇವರಾಗಿದ್ದು, ಸ್ಥಳೀಯ ಹತ್ತೂರಿನ ಜನರು ಶ್ರದ್ಧಾಭಕ್ತಿಯಿಂದ ಆರಾಧಿಸುವ ದೇವರಾಗಿದ್ದಾರೆ.

Hindu Jagran Vedike Started Campaign In Puttur Asking Hindus To Use Only Hindu Auto Drivers During Mahalingeshwar Jatre

ಮುಸ್ಲಿಂ ಮುಖಂಡರ ಪ್ರತಿಕ್ರಿಯೆ ಏನು?
ಇನ್ನು ಹಿಂದೂ ಜಾಗಾರಣ ವೇದಿಕೆಯ ಈ ನಿರ್ಧಾರ ಪುತ್ತೂರು ಮುಸ್ಲಿಂ ಆಟೋ ಚಾಲಕರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪುತ್ತೂರಿನ ದರ್ಬೆಯ ಆಟೋ ಚಾಲಕ ಹಮೀದ್, "ಇಷ್ಟು ವರ್ಷಗಳಲ್ಲಿ ಪುತ್ತೂರು ಜಾತ್ರೋತ್ಸವದ ವೇಳೆ ಭಾಗಶಃ ಎಲ್ಲಾ ವಾಹನಗಳಿಗೆ ಭಗವಾಧ್ವಜ ಅಳವಡಿಸಲಾಗುತ್ತಿತ್ತು. ಆದರೆ ಈ ಬಾರಿ ನೇರವಾಗಿ ಹಿಂದೂಗಳಲ್ಲದವರ ಆಟೋಗಳಲ್ಲಿ ಹೋಗಬೇಡಿ ಅಂತಾ ಕರೆ ನೀಡಿದ್ದಾರೆ".

"ಯಾರದ್ದೋ ವೈಮನಸ್ಸಿಗೆ ಪ್ರತಿ ದಿನ ದುಡಿದು ತಿನ್ನುವ ನಮಗೆ ಅನ್ಯಾಯವಾಗುತ್ತಿದೆ. ಚಿಕ್ಕಂದಿನಿಂದಲೂ ನಾವು ಪುತ್ತೂರು ಜಾತ್ರೆಗೆ ಹೋಗುತ್ತಿದ್ದೆವು. ಜಾತ್ರಾ ಗದ್ದೆಯಲ್ಲಿ ಸುತ್ತಿ ಸಂಭ್ರಮಿಸುತ್ತಿದ್ದೆವು. ಆದರೆ ಇತ್ತೀಚಿನ ಬೆಳವಣಿಗೆ ಎರಡು ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಆತಂಕ ಎದುರಾಗಿದೆ," ಎಂದು ಹಮೀದ್ ಹೇಳಿದ್ದಾರೆ.

English summary
Hindu Jagarana vedike started campaign in Puttur asking Hindus to use only Hindu auto drivers during Mahatobara Mahalingeshwar Jathre in Dakshina kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X