ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ರೈಲ್ವೇ ಹಳಿ ಮೇಲೆ ಗುಡ್ಡ ಕುಸಿತ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 16: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದಿದ್ದು, ಜಿಲ್ಲೆಯ ಗ್ರಾಮೀಣ ಭಾಗ ಸೇರಿದಂತೆ ಮಂಗಳೂರು ನಗರ ಭಾಗದಲ್ಲೂ ಧಾರಾಕಾರ ಮಳೆ ಸುರಿಯುತ್ತಿದೆ.

ರೈಲು ಹಳಿ ಮೇಲೆ ಮಣ್ಣು ಕುಸಿದು ರೈಲು ಸಂಚಾರ ಬಂದ್ ಆಗಿರುವ ಘಟನೆ ಮಂಗಳೂರು ಜಂಕ್ಷನ್ ಮತ್ತು ತೋಕೂರು ರೈಲ್ವೇ ನಿಲ್ದಾಣ ಮಧ್ಯೆ ನಡೆದಿದೆ.

ಮಂಗಳೂರು ಹೊರವಲಯದ ಕುಲಶೇಖರ ಟನಲ್ ಬಳಿ ಹಳಿಗೆ ಮಣ್ಣು ಕುಸಿತವಾಗಿದ್ದು, ಕೊಂಕಣ್ ರೈಲ್ವೇ ವಿಭಾಗದ ರೈಲು ಸಂಚಾರ ವ್ಯತ್ಯಯವಾಗಿದೆ. ಮಂಗಳೂರು ಹಾಗೂ ಮುಂಬೈ ಮಧ್ಯೆ ಸಂಚರಿಸುವ ರೈಲಿಗೆ ತಾತ್ಕಾಲಿಕ ತಡೆಯಾಗಿದೆ.

Heavy Rain In Dakshina Kannada: Hill Collapsed On Railway Track

ರೈಲ್ವೇ ಇಲಾಖಾ ಸಿಬ್ಬಂದಿ ಕೆಲವೇ ಗಂಟೆಗಳಲ್ಲಿ ತೆರವುಗೊಳಿಸಿ ರೈಲು ಸಂಚಾರಕ್ಕೆ ಅನುವು ಮಾಡಕೊಡಲಿದ್ದು, ಮಣ್ಣು ತೆರವು ಕಾರ್ಯ ಆರಂಭವಾಗಿದೆ.

ಜುಲೈ 19ರವರೆಗೆ ಕರಾವಳಿಯಾದ್ಯಂತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಾಧಾರಾ ನದಿ ಮೈದುಂಬಿ ಹರಿಯುತ್ತಿವೆ.

English summary
Heavy rains have continued across Dakshina Kannada district and Mangaluru city, including rural parts of the district, has been torrential.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X