ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಮಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಮಂಕಿಪಾಕ್ಸ್, ಹೈ ಅಲರ್ಟ್‌

|
Google Oneindia Kannada News

ಮಂಗಳೂರು, ಜುಲೈ 19; ಮಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದ ಯುವಕನಿಗೆ ಮಂಕಿಪಾಕ್ಸ್ ದೃಢಪಟ್ಟಿದೆ. ಈಗ ಇಲ್ಲಿಯೂ ಸೋಂಕು ಹರಡುವ ಆತಂಕ ಎದುರಾಗಿದೆ. ಆರೋಗ್ಯ ಇಲಾಖೆ ಯುವಕನೊಂದಿಗೆ ಪ್ರಯಾಣ ಮಾಡಿದ್ದವರು ಸೇರಿದಂತೆ 35 ಮಂದಿಗೆ ಐಸೋಲೇಷನ್‌ಗೆ ಸೂಚನೆ ನೀಡಿದೆ.

ಕೇರಳದ ಕಣ್ಣೂರಿನ ಯುವಕ ಜುಲೈ 13ರಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಜುಲೈ 15ರಂದು ಯುವಕನಿಗೆ ಜ್ವರ ಕಾಣಿಸಿಕೊಂಡಿತ್ತು, ಮೈಯಲ್ಲಿ ಗುಳ್ಳೆಗಳು ಆಗಿದ್ದವು.

ಹುಷಾರಪ್ಪಾ: ಕೇರಳಕ್ಕೂ ಕಾಲಿಟ್ಟಿದೆ ಜಗತ್ತನ್ನೇ ಕಾಡಿದ ಮಂಕಿಪಾಕ್ಸ್ಹುಷಾರಪ್ಪಾ: ಕೇರಳಕ್ಕೂ ಕಾಲಿಟ್ಟಿದೆ ಜಗತ್ತನ್ನೇ ಕಾಡಿದ ಮಂಕಿಪಾಕ್ಸ್

ಕಣ್ಣೂರಿನ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷೆ ನಡೆಸಿದಾಗ ಮಂಕಿಪಾಕ್ಸ್ ಖಚಿತವಾಗಿತ್ತು. ಈ ಹಿನ್ನಲೆಯಲ್ಲಿ ಮಂಗಳೂರಿನಲ್ಲಿಯೂ ಹೈ ಅಲರ್ಟ್ ಘೋಷಣ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್ ಹೇಳಿದ್ದಾರೆ.

ಪ್ರಾಣಿ ಆಯ್ತು: ಮನುಷ್ಯರಿಂದ ಮನುಷ್ಯರಿಗೆ ಹರಡುವ ಮಂಕಿಪಾಕ್ಸ್ ಹೆಸರು ಬದಲಾವಣೆ!ಪ್ರಾಣಿ ಆಯ್ತು: ಮನುಷ್ಯರಿಂದ ಮನುಷ್ಯರಿಗೆ ಹರಡುವ ಮಂಕಿಪಾಕ್ಸ್ ಹೆಸರು ಬದಲಾವಣೆ!

High Alert In Mangaluru After Monkeypox Patient Landed In Airport

ದುಬೈನಿಂದ ಮಂಗಳೂರಿಗೆ ಆಗಮಿಸಿದ ವಿಮಾನದಲ್ಲಿ 191 ಜನರಿದ್ದರು. ಯುವಕ ಕುಳಿತಿದ್ದ ಸೀಟು, ಅವನ ಹಿಂದಿನ, ಮುಂದಿನ ಸೀಟಿನವರು ಸೇರಿದಂತೆ 35 ಮಂದಿಗೆ ಐಸೋಲೇಷನ್‌ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.

ಮಂಕಿಪಾಕ್ಸ್ ಹೆಸರು ಬದಲಿಸುತ್ತಿರುವುದು ಏಕೆ ವಿಶ್ವ ಆರೋಗ್ಯ ಸಂಸ್ಥೆ? ಮಂಕಿಪಾಕ್ಸ್ ಹೆಸರು ಬದಲಿಸುತ್ತಿರುವುದು ಏಕೆ ವಿಶ್ವ ಆರೋಗ್ಯ ಸಂಸ್ಥೆ?

ದಕ್ಷಿಣ ಕನ್ನಡದ 15, ಉಡುಪಿಯ 6, ಕಾಸರಗೋಡಿನ 13 ಮತ್ತು ಕಣ್ಣೂರಿನ ಒಬ್ಬರು ಐಸೋಲೇಷನ್‌ನಲ್ಲಿದ್ದಾರೆ. ಸದ್ಯಕ್ಕೆ ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಐಸೋಲೇಷನ್‌ನಲ್ಲಿರುವವರು ಆರೋಗ್ಯ ಇಲಾಖೆ ಸಂಪರ್ಕದಲ್ಲಿದ್ದಾರೆ.

ಇನ್ನೂ ಮಂಗಳೂರು ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳಿಗೂ ಸಹ 21 ದಿನಗಳ ಐಸೋಲೇಷನ್‌ಗೆ ಸೂಚನೆ ನೀಡಲಾಗಿದೆ. 21 ದಿನಗಳ ಪ್ರತ್ಯೇಕ ವಾಸದ ಸಮಯದಲ್ಲಿ ಯಾರಿಗೂ ಸೋಂಕು ಕಾಣಿಸಿಕೊಳ್ಳದಿದ್ದರೆ ಅವರಿಂದ ಇತರರಿಗೆ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

5 ದಿನದಲ್ಲಿ ದೇಶದಲ್ಲಿ 2 ಮಂಕಿಪಾಕ್ಸ್ ಪ್ರಕರಣ ದಾಖಲಾಗಿದೆ. ಈ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಮಾರ್ಗಸೂಚಿಗಳ ಅನ್ವಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಅಲ್ಲದೇ ವಿಮಾನ ನಿಲ್ದಾಣಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರವೂ ಸೂಚನೆ ನೀಡಿದೆ.

ಕಾಡು ಪ್ರಾಣಿಗಳ ಮೂಲಕ ಮಂಕಿಪಾಕ್ಸ್ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರು, ಅವರು ಮುಟ್ಟಿದ ವಸ್ತುಗಳನ್ನು ಮುಟ್ಟುವುದರಿಂದಲೂ ಹರಡುತ್ತದೆ. ಪ್ರಸ್ತುತ ವಿಶ್ವದ 63 ರಾಷ್ಟ್ರಗಳಲ್ಲಿ ಸುಮಾರು 9 ಸಾವಿರ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದೆ.

English summary
High alert has been announced in Mangaluru after 31-year-old Kerala man who was confirmed to have contracted Monkeypox. He travelled to Kannur, from Mangaluru International Airport on July 13th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X