ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಗ್ರರು ಒಳನುಸುಳಿರುವ ಮಾಹಿತಿ; ಕರಾವಳಿಯಲ್ಲಿ ಮುಂದುವರಿದ ಹೈಅಲರ್ಟ್

|
Google Oneindia Kannada News

ಮಂಗಳೂರು, ಆಗಸ್ಟ್ 29: ತಮಿಳುನಾಡಿನ ಮೂಲಕ 6 ಮಂದಿ ಉಗ್ರರು ಒಳನುಸುಳಿರುವ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಕರಾವಳಿ ತೀರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕರಾವಳಿಯಲ್ಲಿ ಕಟ್ಟುನಿಟ್ಟಿನ ಭದ್ರತೆ ಮುಂದುವರೆದಿದ್ದು, ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ.

ಕರ್ನಾಟಕ ಕರಾವಳಿಯಲ್ಲಿ ಶಂಕಿತ ಉಗ್ರ; ಪೊಲೀಸರಿಂದ ರೇಖಾಚಿತ್ರ ಬಿಡುಗಡೆಕರ್ನಾಟಕ ಕರಾವಳಿಯಲ್ಲಿ ಶಂಕಿತ ಉಗ್ರ; ಪೊಲೀಸರಿಂದ ರೇಖಾಚಿತ್ರ ಬಿಡುಗಡೆ

ಸಮುದ್ರದಲ್ಲಿ ನಡೆಯುವ ಚಟುವಟಿಕೆಗಳ ಮೇಲೂ ನಿಗಾವಹಿಸಲಾಗಿದ್ದು, 15 ದಿನಗಳಿಂದ ಕಡಲ ತೀರದಲ್ಲಿ ಪೊಲೀಸ್ ಪಡೆ ಸೇರಿದಂತೆ ಕರಾವಳಿ ಕಾವಲು ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಸಮುದ್ರದಲ್ಲಿ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಹಾಗೂ ಕಡಲ ತೀರದಲ್ಲಿ ಶಂಕಿತ ಬೋಟ್‌ ಮತ್ತು ವ್ಯಕ್ತಿಗಳು ಕಂಡುಬಂದರೆ ಮಾಹಿತಿ ನೀಡುವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

High Alert Continued In Coastal Districts

ಮಾರ್ಕೆಟ್‌, ಮಾಲ್‌, ಆಸ್ಪತ್ರೆ, ಬಸ್ಸು, ರೈಲು ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ವಾಹನಗಳ ಮೇಲೆ ಸರಕಾರಿ ಲಾಂಛನವನ್ನು ಅನಧಿಕೃತವಾಗಿ ಬಳಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಅನುಮಾನಾಸ್ಪದ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಸಮುದ್ರದಲ್ಲಿ ಭಾರತೀಯ ತಟ ರಕ್ಷಣಾ ಪಡೆಯ ಹಡಗುಗಳು ಗಸ್ತು ತಿರುಗುತ್ತಿದ್ದು, ಭಾರತೀಯ ನೌಕಾ ಪಡೆ ಕೂಡ ಸನ್ನದ್ಧಗೊಂಡಿದೆ.

English summary
High alert announcement continued in Coastal districts of Karnataka . Police force and coastal security force kept in high alert
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X