ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ.ಕ ಜಿಲ್ಲೆಯಲ್ಲಿ ಮುಂಗಾರು ಅಬ್ಬರ-ಭಾರೀ ಗಾಳಿ ಮಳೆಗೆ ಅಪಾರ ಹಾನಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 12:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣ ಅಬ್ಬರಿಸುತ್ತಿದ್ದಾನೆ..ಜಿಲ್ಲೆಯಾದ್ಯಂತ ಭಾರೀ ಗಾಳಿ-ಮಳೆಯಾಗುತ್ತಿದ್ದು,ಶನಿವಾರ ಸಂಜೆಯ ವೇಳೆಗೆ ಸುರಿದ ಭಾರೀ ಗಾಳಿಗೆ ಅಪಾರ ಹಾನಿಯುಂಟಾಗಿದೆ.

ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ,ಬಂಟ್ವಾಳ,ಕಡಬ,ಮೂಡಬಿದಿರೆ ಭಾಗದಲ್ಲಿ ಭಾರೀ ಮಳೆ ಸುರಿದಿದೆ...

ಹವಾಮಾನ ಇಲಾಖೆಯು ಮುನ್ಸೂಚನೆ ಯಂತೆ ಮುಂಗಾರು ಅಬ್ಬರ ಆರಂಭವಾಗಿದ್ದು,ಮುಂದಿನ ಮೂರು ದಿನಗಳ ಭಾರೀ ಮಳೆಯಾಗಲಿದ್ದು,ಮಳೆಗಾಲ ಅಧೀಕೃತವಾಗಿ ಆರಂಭವಾಗಲಿದೆ..

Rain

ಬೆಳ್ತಂಗಡಿ ತಾಲೂಕಿನಲ್ಲಿ ಶನಿವಾರ ಸಂಜೆ ಸುರಿದ ಭಾರೀ ಗಾಳಿಗೆ ಅಪಾರ ಕೃಷಿ ಹಾನಿಯಾಗಿದೆ..

ತಾಲೂಕಿನಾದ್ಯಾಂತ 500 ಕ್ಕೂ ಹೆಚ್ಚು ಅಡಿಕೆಮರ-ಬಾಳೆ ಗಿಡಗಳು ಮುರಿದು ಬಿದ್ದಿರುವ ಬಗ್ಗೆ ವರದಿಯಾಗಿದೆ.. ಅಲ್ಲದೇ ಅಲ್ಲಲ್ಲಿ ಮನೆಗಳಿಗೂ ಅಪಾರ ಹಾನಿಯಾಗಿದೆ. ಮಳೆಗಾಲದ ಮೊದಲ ಮಳೆಯ ಅಬ್ಬರಕ್ಕೆ ಗ್ರಾಮೀಣ ಭಾಗದ ಜನರು ನಲುಗಿಹೋಗಿದ್ದು, ಸ್ಥಳೀಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದಾರೆ..

ಜೂನ್ 15ನೇ ತಾರೀಖಿನವರೆಗೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ರಾಜ್ಯ ಹವಾಮಾನ ಇಲಾಖೆ ಸೂಚಿಸಿದೆ.ಈ ಸಮಯದಲ್ಲಿ ಗಂಟೆಗೆ 30-40ಕೀಮೀ ವೇಗದಲ್ಲಿ ಗಾಳಿಯ ಚಲನೆವಿರುವ ಬಗ್ಗೆ ಅಂದಾಜಿಸಲಾಗಿದೆ.

ಈ ಹಿನ್ನಲೆಯಲ್ಲಿ ಕರಾವಳಿ ಭಾಗದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಗಳಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ..

ಈ ಹಿನ್ನಲೆಯಲ್ಲಿ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲೇ ಇರುವಂತೆ ಸೂಚನೆ ನೀಡಿದ್ದಾರೆ.‌ಅಲ್ಲದೆ ನದಿ ಮತ್ತು ಸಮುದ್ರ ತೀರದ ಜನರು ಎಚ್ಚರದಿಂದ ಇರುವಂತಡ ಮನವಿ ಮಾಡಿದ್ದಾರೆ..

English summary
Heavy rains inundated roads and disrupted traffic in Dakshina Kannada and Udupi districts in coastal Karnataka on Saturday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X