ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ.ಕ ಜಿಲ್ಲೆಯಲ್ಲಿ ಭಾರಿ ಮಳೆ, ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು ಜುಲೈ 18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು ನದಿ, ಹಳ್ಳಗಳು ತುಂಬಿ ಹರಿಯುತ್ತಿದೆ. ತಗ್ಗು ಪ್ರದೇಶದ ಅಡಿಕೆ ತೋಟಗಳು ಜಲಾವೃತವಾಗಿದ್ದು, ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ.

ಇನ್ನು ಭಾರೀ ಮಳೆಯ ನಡುವೆಯೂ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತ ಜನ ಸಾಗರವೇ ಸೇರಿದೆ‌‌. ಸಾವಿರಾರು ಸಂಖ್ಯೆಯಲ್ಲಿ ಧರ್ಮಸ್ಥಳ ಭಕ್ತರು ಆಗಮಿಸಿದ್ದು, ಮಳೆಯನ್ನೂ ಲೆಕ್ಕಿಸದೇ ದೇವಸ್ಥಾನದತ್ತ ಭಕ್ತರ ದಂಡೇ ಹರಿದು ಬರುತ್ತಿದೆ.

ವೀಕೆಂಡ್ ಆಗಿರುವ ಹಿನ್ನಲೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಕ್ಷೇತ್ರದತ್ತ ಆಗಮಿಸಿದ್ದಾರೆ. ಕಳೆದ ನಾಲ್ಕುದಿನಗಳಿಂದ ದ.ಕ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಾಗುತ್ತಿದ್ದು,ಜೀವ ನದಿ ನೇತ್ರಾವತಿ ಮೈದುಂಬಿ ಹರಿಯುತ್ತಿದೆ..

ಗುಡ್ಡ ಜರಿದು ರಸ್ತೆ ಸಂಚಾರಕ್ಕೆ ಅಡಚಣೆ

ಗುಡ್ಡ ಜರಿದು ರಸ್ತೆ ಸಂಚಾರಕ್ಕೆ ಅಡಚಣೆ

ಇನ್ನು ಭಾರೀ ಮಳೆಗೆ ಹಲವೆಡೆ ಗುಡ್ಡ ಜರಿತವಾಗಿದೆ.‌ ಭಾರೀ ಮಳೆಗೆ ಗುಡ್ಡ ಜರಿದು ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ, ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆಳಗಿನ ವಗ್ಗ ಎಂಬಲ್ಲಿ ನಡೆದಿದೆ. ಬಿ.ಸಿ.ರೋಡ್- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಗೆ ಜರಿದ ಗುಡ್ಡ ಜರಿದಿದ್ದು, ರಸ್ತೆ ಬದಿಯ ಗುಡ್ಡ ಜರಿದು ಸುಮಾರು 50ಕ್ಕೂ ಹೆಚ್ಚು ಅಡಿಕೆ ಮರಗಳು ಧರಾಶಾಯಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ಗುಡ್ಡ ಅಗೆದ ಪರಿಣಾಮ ಜರಿದ ಗುಡ್ಡ ಜರಿದಿದ್ದು, ಗುಡ್ಡ ಜರಿದು ರಸ್ತೆಗೆ ಬಿದ್ದ ಮಣ್ಣು ಜೆಸಿಬಿ ಮೂಲಕ ತೆರವು ಮಾಡಲಾಗಿದೆ..

ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆ

ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆ

ನಿರಂತರ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ದ.ಕ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರಂತರ ಮಳೆಯಿಂದಾಗಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ.‌ ಘಟ್ಟ ಪ್ರದೇಶ ಮತ್ತು ಕುಮಾರಧಾರ ಪರ್ವತಗಳಿಂದ ಕುಮಾರಾಧಾರೆಗೆ ನೀರು ಹರಿದು ಬರುತ್ತಿದೆ.

ಪರ್ವತಗಳಿಂದ ಕುಮಾರಾಧಾರೆಗೆ ನೀರು ಹರಿದು ಬರುತ್ತಿದೆ

ಪರ್ವತಗಳಿಂದ ಕುಮಾರಾಧಾರೆಗೆ ನೀರು ಹರಿದು ಬರುತ್ತಿದೆ

ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣ ಕುಮಾರಧಾರ ಹರಿವು ಹೆಚ್ಚಳವಾಗಿದೆ. ಸದ್ಯ ಸಂಪೂರ್ಣ ಮುಳುಗಡೆಯಾಗಿರುವ ಕುಮಾರಧಾರ ಸ್ನಾನ ಘಟ್ಟದಲ್ಲಿ ಭಕ್ತರು ನದಿಗಿಳಿಯದೇ ತಲೆಗೆ ನೀರು ಚಿಮುಕಿಸಿ ತೆರಳುತ್ತಿದ್ದಾರೆ. ಕುಮಾರಧಾರ ನದಿಗೆ ಇಳಿಯದಂತೆ ಭಕ್ತಾಧಿಗಳಿಗೆ ಸೂಚನೆ ನೀಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನದಿ ಬಳಿ ಜಿಲ್ಲಾಡಳಿತ ರಬ್ಬರ್ ಬೋಟ್ ಸನ್ನದ್ದವಾಗಿ ಇರಿಸಿದೆ.

ರೈಲು ಹಳಿ ಮೇಲೆ ಗುಡ್ಡ ಜರಿತವಾಗಿದೆ

ರೈಲು ಹಳಿ ಮೇಲೆ ಗುಡ್ಡ ಜರಿತವಾಗಿದೆ

ಇನ್ನು ಭಾರೀ ಮಳೆಗೆ ರೈಲು ಹಳಿ ಮೇಲೆ ಗುಡ್ಡ ಜರಿತವಾಗಿದ್ದು,ರೈಲು ಸಾಗುತ್ತಿದ್ದಾಗಲೇ ಮಣ್ಣು ಕುಸಿತವಾಗಿದೆ. ಅದೃಷ್ಟವಶಾತ್‌ ಭಾರೀ ಅನಾಹುತ ತಪ್ಪಿದ್ದು,ರೈಲಿನ ಗಾರ್ಡ್ ಗೆ ಕೊಂಚ ಪ್ರಮಾಣದ ಹಾನಿಯಾಗಿದೆ. ಮಂಗಳೂರು-ಬೆಂಗಳೂರು ರೈಲು ಮಾರ್ಗದ ವೀರಮಂಗಲದ ಗಡಿಪಿಲ ಎಂಬಲ್ಲಿ ಘಟನೆಯಾಗಿದ್ದು, ಗಾಂಧಿಧಾಮ್ - ನಾಗರ್ ಕೊಯಿಲ್ ಏಕ್ಸ್ ಪ್ರೆಸ್ ರೈಲು ಇದಾಗಿದ್ದು, ಅರ್ಧ ದಾರಿಯಲ್ಲೇ ರೈಲು ಬಾಕಿಯಾಗಿದ್ದು, ಹಳಿಯಿಂದ ಮಣ್ಣು ತೆಗೆದ ಬಳಿಕ ಮತ್ತೆ ಸಂಚಾರ ಆರಂಭವಾಗಿದೆ.

English summary
Heavy Rainfall wrecks havoc in Dakshina Kannada district and disrupts normal life in Mangaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X