ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹ್ಯಾಟ್ರಿಕ್ ಹೊಡೆದ ನಳಿನ್ ಕುಮಾರ್ ಕಟೀಲ್

|
Google Oneindia Kannada News

ಮಂಗಳೂರು, ಮೇ 24: ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸಂಘದಿಂದ ಬಂದು ಚತುರ ಸಂಘಟಕ, ಪ್ರಖರ ವಾಗ್ಮಿಯಾಗಿ ಬೆಳೆದು ಲೋಕಸಭೆ ಪ್ರವೇಶಿಸುವ ಮೂಲಕ ಅಚ್ಚರಿ ಮೂಡಿಸಿದ್ದ ನಳಿನ್ ಕುಮಾರ್ ಕಟೀಲು ಮೂರನೇ ಬಾರಿಗೆ ಸತತವಾಗಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡಬಾರದು ಎಂದು ಸಂಘ ಪರಿವಾರದ ಒಂದು ಗುಂಪು ಒಳಗಿಂದೊಳಗೆ ಕೆಲಸ ಮಾಡಿತ್ತು. ಮಾತ್ರವಲ್ಲ ಪಕ್ಷದ ವರಿಷ್ಠರನ್ನು ಒತ್ತಾಯಿಸಿತ್ತು. ಪಕ್ಷದೊಳಗೂ ಅವರಿಗೆ ಟಿಕೆಟ್ ನೀಡಬಾರದೆನ್ನುವವರು ಇದ್ದರು. ಎರಡನೇ ಅವಧಿಗೆ ಟಿಕೆಟ್ ನೀಡಿದಾಗ ಅವರ ವೈಯಕ್ತಿಕ ತೇಜೋವಧೆಯನ್ನು ಮಾಡಿ ಅವರಿಗೆ ಟಿಕೆಟ್ ದೊರೆಯದಂತೆ ಮಾಡುವ ಪ್ರಯತ್ನ ನಡೆದಿತ್ತು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಧೂಳಿಪಟದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಧೂಳಿಪಟ

ಆದರೆ ನಳಿನ್ ಕುಮಾರ್ ಕಟೀಲ್ ಎಲ್ಲಾ ಸಂಕಟಗಳನ್ನು ಮೀರಿ ಗೆದ್ದರು. ಮೊದಲ ಮತ್ತು ಎರಡನೇ ಅವಧಿಗೆ ನಳಿನ್ ಸೋಲಿಸಿದ್ದು ಕಾಂಗ್ರೆಸ್ಸಿನ ಘಟಾನುಘಟಿ ನಾಯಕರಲ್ಲಿ ಒಬ್ಬರಾಗಿರುವ ಬಿ.ಜನಾರ್ದನ ಪೂಜಾರಿಯವರನ್ನು. ಪ್ರಥಮ ಚುನಾವಣೆಗೆ ಹೋಲಿಸಿದರೆ ಎರಡನೇ ಚುನಾವಣೆಯಲ್ಲಿ ತನ್ನ ಗೆಲುವಿನ ಅಂತರವನ್ನು 1.43 ಲಕ್ಷಕ್ಕೆ ಏರಿಸಿದ್ದ ನಳಿನ್, ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರು.

 Hattrick win for Nalin Kumar Kateel

ಕರ್ನಾಟಕ ಮಾತ್ರವಲ್ಲದೇ ಕಮ್ಯೂನಿಸ್ಟರು ಪ್ರಬಲವಾಗಿರುವ ಕೇರಳದಲ್ಲೂ ಬಿಜೆಪಿ ನೆಲೆಯೂರುವಂತೆ ಮಾಡಿದ್ದರು. ಅವರ ಈ ಸಾಧನೆ, ಬದ್ಧತೆಯನ್ನು ಗುರುತಿಸಿಯೇ ವಿರೋಧ ಇದ್ದರೂ ಬಿಜೆಪಿ ಹೈಕಮಾಂಡ್ ಅವರಿಗೆ ಟಿಕೆಟ್ ನೀಡಿತ್ತು.

 ಚುನಾವಣೆ ಫಲಿತಾಂಶ 2019: ವಿರೋಧಗಳ ನಡುವೆಯೂ ಶೋಭಾ ಜಯಭೇರಿ ಚುನಾವಣೆ ಫಲಿತಾಂಶ 2019: ವಿರೋಧಗಳ ನಡುವೆಯೂ ಶೋಭಾ ಜಯಭೇರಿ

ಶತಾಯ ಗತಾಯ ಈ ಸಲ ಗೆಲ್ಲಲೇಬೇಕೆಂಬ ಛಲದಲ್ಲಿದ್ದ ಕಾಂಗ್ರೆಸ್ ಯುವ ನಾಯಕ, ಹೊಸ ಮುಖ, ದ. ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಎಂ. ರೈಯವರನ್ನು ಕಣಕ್ಕಿಳಿಸಿತು. ಜತೆಗೆ ಜೆಡಿಎಸ್ ಮತ್ತು ಎಡಪಕ್ಷಗಳು ಕೂಡಾ ಸಾಥ್ ನೀಡಿದ್ದವರು. ಆದರೆ ಕಾಂಗ್ರೆಸ್ ಕಾರ್ಯತಂತ್ರ ಫಲ ನೀಡಿಲ್ಲ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಈ ಸಲವೂ ಗೆಲ್ಲುವ ಮೂಲಕ ಬಿಜೆಪಿ ಸತತ ಎಂಟನೇ ಅವಧಿಗೆ ಗೆದ್ದುಕೊಂಡಿದೆ.

2014ರ ಚುನಾವಣೆ ಮತಗಳಿಕೆ...

ನಳಿನ್ ಕುಮಾರ್ ಕಟೀಲು -ಬಿಜೆಪಿ -6,42,739

ಬಿ. ಜನಾರ್ದನ ಪೂಜಾರಿ -ಕಾಂಗೆಸ್ - 4,99,030

ಬಿಜೆಪಿ ಗೆಲುವಿನ ಅಂತರ 1,43,709


2019ರ ಚುನಾವಣೆ ಮತಗಳಿಕೆ...

ನಳಿನ್ ಕುಮಾರ್ ಕಟೀಲು -ಬಿಜೆಪಿ - 7,74285

ಮಿಥುನ್ ಎಂ. ರೈ -ಕಾಂಗ್ರೆಸ್ - 4,99,664

ಗೆಲುವಿನ ಅಂತರ 2,74,621

2014ಕ್ಕೆ ಹೋಲಿಸಿದರೆ ಈ ಚುನಾವಣೆಯಲ್ಲಿ ನಳಿನ್ 1,31,546 ಹೆಚ್ಚು ಮತಗಳನ್ನು ಪಡೆದಿದ್ದಾರೆ. ನಳಿನ್ ಜಯ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ತಂದಿದೆ. ಪಕ್ಷದ ಚುನಾವಣಾ ಕಚೇರಿ ಇರುವ ಮಂಗಳೂರಿನ ಬಂಟ್ಸ್‍ಹಾಸ್ಟೆಲ್ ನಲ್ಲಿ ವಿಜಯೋತ್ಸವ ಮುಗಿಲು ಮುಟ್ಟಿತ್ತು. ಪಟಾಕಿ ಸದ್ದು, ಹೊಗೆಯಲ್ಲಿ ರಸ್ತೆ ಕಾಣದಾಗಿತ್ತು.

English summary
BJP candidate Nalin Kumar Kateel won from Dakshina Kannada Lok sabha constituency for third time . Here is the details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X