ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿ ಸಂಘಟನೆಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಪ್ರಜ್ವಲ್ ರೇವಣ್ಣ

|
Google Oneindia Kannada News

ಮಂಗಳೂರು, ಜೂನ್ 5: ನಗರದಲ್ಲಿರುವ ಎಂಆರ್‌ಪಿಎಲ್‌ ಸಂಸ್ಥೆಯಲ್ಲಿ ಸ್ಥಳೀಯರಿಗೆ ಅವಕಾಶ ನೀಡದೇ ಉತ್ತರ ಭಾರತೀಯರಿಗೆ ಕೆಲಸ ನೀಡುತ್ತಿರುವುದನ್ನು ವಿರೋಧಿಸಿ ನಡೆಯುತ್ತಿರುವ ಮನೆಮನೆ ಪ್ರತಿಭಟನೆಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬೆಂಬಲ ಸೂಚಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಜ್ವಲ್ ರೇವಣ್ಣ, " ಮಂಗಳೂರಿನಲ್ಲಿರುವ ಎಂಆರ್‌ಪಿಎಲ್‌ ಸಂಸ್ಥೆ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದೇ, ಸಂಸ್ಥೆಯ 233 ಹುದ್ದೆಗಳಲ್ಲಿ ಶೇಕಡಾ 98ಕ್ಕೂ ಹೆಚ್ಚು ಉದ್ಯೋಗಗಳನ್ನು ಉತ್ತರ ಭಾರತೀಯರಿಗೆ ನೀಡಿ ಕರಾವಳಿಯ ಸ್ಥಳೀಯ ಯುವಕರಿಗೆ ಅನ್ಯಾಯವೆಸಗಿದೆ" ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

"ಭೂಮಿ ಕೊಟ್ಟ ರಾಜ್ಯದ ಯುವಕರಿಗೆ ಕೆಲಸ ನೀಡದೆ ಹೊರ ರಾಜ್ಯದವರಿಗೆ ಮಣೆ ಹಾಕಿರುವ ಸಂಸ್ಥೆಯ ಅವಶ್ಯಕತೆ ನಮಗೇನಿದೆ? ಡಾ ಸರೋಜಿನಿ ಮಹಿಷಿ ವರದಿ ಇಂದಿಗೂ ಜಾರಿಯಾಗಿಲ್ಲ. ರಾಜ್ಯ ಸರ್ಕಾರ ಪರಿಷ್ಕೃತ ಆದೇಶವನ್ನೂ‌ ಹೊರಡಿಸಿತು, ಅದೂ ಕೂಡ ಪಾಲನೆಯಾಗುತ್ತಿಲ್ಲ" ಎಂದು ಪ್ರಜ್ವಲ್ ಟ್ವೀಟ್ ಮಾಡಿದ್ದಾರೆ.

Hassan MP Prajwal Revanna supports Coastal People protests against MRPL

"ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳೇ ಹೀಗೆ ಸ್ಥಳೀಯರಿಗೆ ವಂಚಿಸಿದರೆ ಜನರು ಏನು ಮಾಡಬೇಕು? ಈ ನಾಡಿನ ಮಣ್ಣಿನ ಮಕ್ಕಳಿಗೆ ಉದ್ಯೋಗ ಒದಗಿಸದ ಎಂಆರ್‌ಪಿಎಲ್‌ ವಿಸ್ತರಣೆಗಾಗಿ ಬೇಡಿಕೆಯಿಟ್ಟಿರುವ ಒಂದಿಂಚು ಜಾಗವನ್ನೂ‌ ಸರ್ಕಾರ ಕೊಡಕೂಡದು".

"ಎಂಆರ್ ಪಿಎಲ್ ನಲ್ಲಿ ಸ್ಥಳೀಯರಿಗೆ ಸಿಂಹಪಾಲು ಇರಬೇಕು. ಉಳಿದ ಹುದ್ದೆಗಳು ಕರ್ನಾಟಕದ ಇತರ ಜಿಲ್ಲೆಗಳಿಗೆ ಲಭ್ಯವಾಗಬೇಕು. ಸ್ಥಳೀಯರಿಗೆ ವಂಚಿಸಿ ಉತ್ತರ ಭಾರತೀಯರಿಗೆ ಉದ್ಯೋಗ ನೀಡಿರುವ ಹಿನ್ನೆಲೆಯಲ್ಲಿ ಕರಾವಳಿಯ ಜನಪರ ಸಂಘಟನೆಗಳು ಇಂದು ಕರೆ ನೀಡಿರುವ ಮನೆಮನೆ ಪ್ರತಿಭಟನೆ ನನ್ನ ಸಂಪೂರ್ಣ ಬೆಂಬಲವಿದೆ"ಎಂದು ಪ್ರಜ್ವಲ್ ರೇವಣ್ಣ ಬೆಂಬಲ ಸೂಚಿಸಿದ್ದಾರೆ.

English summary
Haasan MP Prajwal Revanna supports Coastal people protests against MRPL for not giving Jobs to local people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X