ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋಲಿನ ಭೀತಿಯಲ್ಲಿ ಎಸ್‌ಡಿಪಿಐ ಜೊತೆ ರೈ ಮೈತ್ರಿ: ಹರಿಕೃಷ್ಣ ಬಂಟ್ವಾಳ

|
Google Oneindia Kannada News

ಮಂಗಳೂರು, ಏಪ್ರಿಲ್ 28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಮಾನಾಥ ರೈ ಹಾಗೂ ಕಾಂಗ್ರೆಸ್ ಇರುವವರೆಗೂ ಸೌಹಾರ್ದತೆ ನೆಲೆಸಲು ಸಾಧ್ಯವಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಮಾನಾಥ ರೈ ಸೋಲು ಖಚಿತ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂಟ್ವಾಳಕ್ಕೆ ಕಾಲಿರಿಸಿದಾಗಲೇ ರಮಾನಾಥ ರೈ ಸೋಲುತ್ತಾರೆ ಎಂಬುದು ನಿರ್ಧಾರವಾಗಿದೆ. ರಾಹುಲ್ ಬಂಟ್ವಾಳಕ್ಕೆ ಬಂದದ್ದೇ ಶನೀಶ್ವರ ಬಂದಂತೆ. ರಾಹುಲ್ ಎಲ್ಲೆಲ್ಲಿ ಭೇಟಿ ನೀಡಿದ್ದಾರೆ ಅಲ್ಲಿ ಕಾಂಗ್ರೆಸ್ ಗೆದ್ದ ಇತಿಹಾಸವಿಲ್ಲ ಎಂದು ಅವರು ವ್ಯಂಗ್ಯವಾಡಿದರು.

'ರಾಹುಲ್ ಬಂಟ್ವಾಳಕ್ಕೆ ಕಾಲಿಟ್ಟಾಗಲೇ ರಮಾನಾಥ ರೈ ಸೋಲು ಖಚಿತ''ರಾಹುಲ್ ಬಂಟ್ವಾಳಕ್ಕೆ ಕಾಲಿಟ್ಟಾಗಲೇ ರಮಾನಾಥ ರೈ ಸೋಲು ಖಚಿತ'

ರಮಾನಾಥ ರೈ ಸೋಲುವ ಭೀತಿಯಿಂದ ಬಂಟ್ವಾಳದಲ್ಲಿ ಎಸ್‌ಡಿಪಿಐ ಜತೆ ಕೈಜೋಡಿಸಿದ್ದಾರೆ. ಮುಸ್ಲಿಂ ಮತಗಳನ್ನು ಪಡೆಯುವ ಉದ್ದೇಶದಿಂದ ಎಸ್‌ಡಿಪಿಐ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದರು.

Harikrishna Bantwal slams Ramanath Rai for join hands with SDPI

ಹತ್ಯೆ ಮುಕ್ತ, ಭಯ ಮುಕ್ತ ಜಿಲ್ಲೆಯಾಗಬೇಕಾದಲ್ಲಿ ಮುಸ್ಲಿಮರು ಕಾಂಗ್ರೆಸ್ ಬಿಟ್ಟು ಹೊರಬರಬೇಕು. ಭಗವದ್ಗೀತೆ, ಖುರಾನ್, ಬೈಬಲ್,‌ ತ್ರಿಪೀಟಿಕಾ ಆಧಾರದ ಮೇಲೆ ದೇಶ ರಚನೆ ಆಗಿಲ್ಲ. ಇವುಗಳ ಆಧಾರದ ಮೇಲೆ ಆಡಳಿತ ನಡೆಸಲು ಸಾಧ್ಯವಿಲ್ಲ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ರಚಿತ ಸಂವಿಧಾನದಿಂದ ಮಾತ್ರ ದೇಶ ಕಟ್ಟಲು, ನಡೆಸಲು ಸಾಧ್ಯ ಎಂದು ಅವರು ಹೇಳಿದರು.

ದೇಶದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತರು ಒಟ್ಟಾಗಿರಬಾರದೆಂದು ಬ್ರಿಟೀಷರು ವಿಷಬೀಜ ಬಿತ್ತಿದ್ದರು. ಅದೇ ರೀತಿ ಇವತ್ತು ಕೂಡಾ ವಿಷ ಬೀಜ ಬಿತ್ತುತ್ತಿರುವವರು ನೆಹರೂ-ಗಾಂಧಿ ಕುಡಿಗಳು ಎಂದು ವಾಗ್ದಾಳಿ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಚುನಾವಣೆಗಾಗಿ ಮರಳಿನ,‌ ಮರದ, ಟ್ರಾಸ್ಫರ್ ಮಾಡಿಸಿಕೊಟ್ಟ ದುಡ್ಡು ಹಂಚುತ್ತಿದೆ ಎಂದು ದೂರಿದ ಅವರು, ದುಡ್ಡಿನಿಂದಲೇ ಚುನಾವಣೆ ಗೆಲ್ಲಬಹುದು ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ ಎಂದು ಆರೋಪಿಸಿದರು.

Harikrishna Bantwal slams Ramanath Rai for join hands with SDPI

"ನುಡಿದಂತೆ ನಡೆದಿದ್ದರೆ ಸಿದ್ಧರಾಮಯ್ಯನವರು ಚಾಮುಂಡೇಶ್ವರಿ ಬಿಟ್ಟು ಬಾದಾಮಿಗೇಕೆ ಓಡಿ ಹೋದರು? ಒಂದು ಕ್ಷೇತ್ರದಲ್ಲಿ ನಿಂತು ಗೆಲ್ಲಲು ಧೈರ್ಯವಿಲ್ಲದ ಸಿದ್ಧರಾಮಯ್ಯನವರು ಓಡಿ ಹೋಗಿದ್ದಾರೆ," ಎಂದು ಅವರು ವ್ಯಂಗ್ಯವಾಡಿದರು .

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಣಾಯಕರಾದ ಬಿಲ್ಲವ ಸಮುದಾಯಕ್ಕೆ ಬಿಜೆಪಿಯಲ್ಲಿ ನೀಡಿದ ಸ್ಥಾನಮಾನದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಬಿಲ್ಲವರು ನಿಷ್ಠಾವಂತ ರಾಷ್ಟ್ರವಾದಿಗಳೇ ಹೊರತು ಜಾತಿವಾದಿಗಳಲ್ಲ. ಒಂದು ವೇಳೆ ಜಾತಿವಾದಿಗಳಾಗುತ್ತಿದ್ದರೆ ಜನಾರ್ದನ ಪೂಜಾರಿ ಲೋಪಸಭಾ ಚುನಾವಣೆಯಲ್ಲಿ ಸೋಲಲು ಸಾಧ್ಯವೇ ಇರುತ್ತಿರಲಿಲ್ಲ," ಎಂದು ಅವರು ಹೇಳಿದರು.

"ಬಿಜೆಪಿ ಮೇಲೆ ಆರೋಪ‌ ಮಾಡುವ ಕಾಂಗ್ರೆಸ್ ಬಿಲ್ಲವರಿಗೆ ಎಷ್ಟು ಪ್ರಾಮುಖ್ಯತೆ ನೀಡಿದೆ?" ಎಂದು ಅವರು ಪ್ರಶ್ನಿಸಿದರು. ಗೆದ್ದಲ್ಲಿ ಜನಾರ್ದನ ಪೂಜಾರಿ ಮನೆಯಲ್ಲಿ ಊಟ‌ ಹಾಕುತ್ತೇನೆ ಎಂಬ ರೈ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, "ಈ ಬಾರಿಯ ಚುನಾವಣೆಯಲ್ಲಿ ರೈ ಸೋಲು ಖಚಿತ. .
ಜನಾರ್ದನ ಪೂಜಾರಿ ಮನೆಯಲ್ಲಿ ಊಟ ಹಾಕುವ ಅವಕಾಶವೇ ಬರೋದಿಲ್ಲ," ಎಂದು ಅವರು ವ್ಯಂಗ್ಯವಾಡಿದರು.

English summary
Karnataka assembly election 2018: Minister Ramanath Rai will loose his post this time and that's the reason he has joined hands with SDPI, slams Harikrishna Bantwal here on Saturday 28 in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X