• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಧರ್ಮಸ್ಥಳದಲ್ಲಿ ಅಂದಗಾತಿಯರ ಅಂದ ಹೆಚ್ಚಿಸುವ ಕೈಮಗ್ಗ ಸೀರೆಗಳು

By ವರದಿ ಮತ್ತು ಚಿತ್ರಗಳು: ಜಯಲಕ್ಷ್ಮಿ ಭಟ್, ಎಸ
|
   ಧರ್ಮಸ್ಥಳದಲ್ಲಿ ಅಂದಗಾತಿಯರ ಅಂದ ಹೆಚ್ಚಿಸುವ ಕೈಮಗ್ಗ ಸೀರೆಗಳು | Oneindia Kannada

   ಸೀರೆ ಎಂದಾಕ್ಷಣ ಥಟ್ ಅಂತ ಹೆಣ್ಮಕ್ಳ ಬಾಯಲ್ಲಿ ಬರೋದು ಬನಾರಸ್ ಸೀರೆ, ಮೈಸೂರು ಸಿಲ್ಕ್, ಕಾಂಜೀವರಂ ಸೀರೆ ಹೀಗೆ ನಾನಾ ವೆರೈಟಿ ಫ್ಯಾಷನ್ ಸೀರೆಗಳು. ಈ ಸೀರೆಗಳು ಹೆಣ್ಮಕ್ಳಗೆ ಅಂದ ಚೆಂದವನ್ನು ಹೆಚ್ಚಿಸುತ್ತವೆ. ಆದ್ರೆ, ಇವೆಲ್ಲವುಗಳಿಗಿಂತ ವಿಭಿನ್ನ ರೀತಿಯ ಅಂದಗಾತಿಯರ ಅಂದವನ್ನು ಮತ್ತಷ್ಟು ಹೆಚ್ಚಿಸುವ ಸೀರೆ ಅಂದ್ರೆ ಕೈಮಗ್ಗದ ಸೀರೆಗಳು.

   ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ

   ಹೌದು, ಕೈಮಗ್ಗದ ಸೀರೆಗಳು ಇತ್ತೀಚೆಗೆ ಮಾಸಿ ಮೂಲೆ ಸೇರಿದಬಹುದು. ಆದರೆ, ಆ ಸೀರೆಗಳ ಬಾಳಿಕೆ, ಅವುಗಳ ಗಮ್ಮತ್ತು ಮಾತ್ರ ಇನ್ನೂ ಮಾಸಿಲ್ಲ. ಇಂತಹ ಕೈಮಗ್ಗದ ಸೀರೆಗಳು ನಿಮಗೆ ಬೇಕಪ್ಪ ಅಂದ್ರೆ ಈಗ ಧರ್ಮಸ್ಥಳಕ್ಕೆ ಹೋದರೆ ಸಿಗುತ್ತವೆ.

   ಸೀರೆಯ ಮೇಲೆ ಕನ್ನಡದ ರಂಗು ಚೆಲ್ಲಿದ ವೃಂದಾ ಶೇಖರ್

   ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ಕೈಮಗ್ಗದ ಸೀರೆಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ. ನೇಕಾರರದಿಂದ ನೇರವಾಗಿ ನಾರಿಯರಿಗೆ ಕೈಮಗ್ಗದ ಸೀರೆಗಳನ್ನು ಮಾರಾಟ ಮಾಡಲಾಗುತ್ತಿದೆ.

   ಧರ್ಮಸ್ಥಳ ದೀಪೋತ್ಸವದಲ್ಲಿ ಬರೋಡ ಬಲೂನಗಳದ್ದೇ ಕಾರುಬಾರು

   ಲಕ್ಷ ದೀಪೋತ್ಸವದ ಐದನೇ ದಿನದಿಂದ ಸಿಲ್ಕ್ ಮತ್ತು ಕಾಟನ್ ಸೀರೆಗಳಿಗೆ ಬೇಡಿಕೆ ಹೆಚ್ಚಾಯಿತು. ಆರಂಭದಲ್ಲಿ ಮಾರಾಟ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಮೊದಲ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ಉಳಿದ ಮಳಿಗಗಳಲ್ಲಿದ್ದಂತೆ ಕೈಮಗ್ಗದ ಸೀರೆ ಮಳಿಗೆಯಲ್ಲಿ ಜನಜಂಗುಳಿಯಿರಲಿಲ್ಲ. ಗುರುವಾರದಿಂದ ಹಲವರು ಈ ಸೀರೆಗಳೆಡೆಗೆ ಆಕರ್ಷಿತರಾದರು.

   ತುಮಕೂರಿನ ಎಸ್‌ಜಿಆರ್ ಎಸ್ ಘಟಕದ ಸೀರೆ

   ತುಮಕೂರಿನ ಎಸ್‌ಜಿಆರ್ ಎಸ್ ಘಟಕದ ಸೀರೆ

   ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಎಸ್‌ಜಿಆರ್ ಎಸ್ ಉತ್ಪನ್ನ ಘಟಕದ ಈ ಸೀರೆಗಳನ್ನು ಈ ಮಳಿಗೆಯಲ್ಲಿ ಮಾರಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಲಕ್ಷದೀಪೋತ್ಸವಕ್ಕೆ ಆಗಮಿಸುತ್ತಿರುವ ಈ ಘಟಕದ ಪ್ರತಿನಿಧಿಗಳು ಈ ಸಲವೂ ಇಲ್ಲಿ ವ್ಯಾಪಾರನಿರತರಾಗಿದ್ದಾರೆ.

   ಕೈಮಗ್ಗದಲ್ಲಿ ನೇಯ್ದ ಸೀರೆಗಳಿಗೆ ಬೇಡಿಕೆ

   ಕೈಮಗ್ಗದಲ್ಲಿ ನೇಯ್ದ ಸೀರೆಗಳಿಗೆ ಬೇಡಿಕೆ

   ಇಂದಿನ ಕಾಲದಲ್ಲಿ ಸೀರೆಗೆ ಆದ್ಯತೆ ನೀಡುವವರ ಸಂಖ್ಯೆ ಬಹಳ ಕಡಿಮೆ. ಆದರೂ ಸಾಂಪ್ರದಾಯಿಕ ಶೈಲಿಯಲ್ಲಿ ಕೈಮಗ್ಗದಲ್ಲಿ ನೇಯ್ದ ಸೀರೆಗಳಿಗೆ ಬೇಡಿಕೆ ಇದೆ. ರಬ್ಬರ್ ಸಿಲ್ಕ್, ಪಾಲಿಸ್ಟರ್, ಉಣ್ಣೆ ಬಟ್ಟೆಗಳ ನಡುವೆಯೂ, ರೇಷ್ಮೆ ಸೀರೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ಹೇಳಿ ಮಾಡಿಸಿಕೊಂಡು ಹೋಗುತ್ತಾರೆ. ಬಹಳ ದೊಡ್ಡ ಮಟ್ಟದಲ್ಲಿ ಲಾಭದಾಯಕವಲ್ಲದಿದ್ದರೂ ಪಾರಂಪರಿಕವಾಗಿ ನಡೆಸಿಕೊಂಡು ಬಂದ ಈ ಉದ್ಯೋಗ ತೃಪ್ತಿದಾಯಕವಾಗಿದೆ ಎನ್ನುತ್ತಾರೆ ಎಸ್.ಜಿ.ಆರ್.ಎಸ್ ಉತ್ಪನ್ನ ಘಟಕದ ಮಾಲೀಕರಾದ ಗೋಪಿನಾಥ್.ವಿ.

   ಕೈಮಗ್ಗದ ಉದ್ಯಮಕ್ಕೆ 50 ವರ್ಷಗಳ ಇತಿಹಾಸ

   ಕೈಮಗ್ಗದ ಉದ್ಯಮಕ್ಕೆ 50 ವರ್ಷಗಳ ಇತಿಹಾಸ

   ಗೋಪಿನಾಥ ಅವರ ಅಪ್ಪ, ಅಜ್ಜನ ಕಾಲದಿಂದಲೂ ನಡೆದುಕೊಂಡು ಬಂದ ಈ ಕೈಮಗ್ಗದ ಉದ್ಯಮಕ್ಕೆ ಸುಮಾರು 50 ವರ್ಷಗಳ ಇತಿಹಾಸವೇ ಇದೆ. ಬದಲಾದ ಕಾಲಮಾನಕ್ಕನುಗುಣವಾಗಿ ಮಾರಾಟದ ಶೈಲಿಯಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಲಾಗಿದೆ. ಫೇಸ್‌ಬುಕ್, ವಾಟ್ಸಾಪ್. ಆನ್‌ಲೈನ್ ಮೂಲಕವೂ ಸೀರೆಗಳಿಗೆ ಬೇಡಿಕೆಗಳನ್ನು ಸ್ವೀಕರಿಸಲಾಗುತ್ತಿದೆ.

   ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೀರೆ

   ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೀರೆ

   ಗ್ರಾಹಕರ ಅಭಿರುಚಿಗೆ ಅನುಗುಣವಾದ ಸೀರೆಗಳನ್ನೇ ತಯಾರಿಸಿ ಕೊಡಲಾಗುತ್ತಿದೆ. ನಮ್ಮ ಭಾರತೀಯ ಪುರಾತನ ಕೈಮಗ್ಗದ ಪದ್ಧತಿಯಲ್ಲಿ ತಯಾರಾಗುವ ಸೀರೆಗಳಿಗೆ ಕೇವಲ ನಮ್ಮ ರಾಜ್ಯ, ದೇಶದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯದಲ್ಲೂ ಬಹು ಬೇಡಿಕೆ ಇದೆ. ಅಲ್ಲದೇ ಹೊರ ದೇಶದಲ್ಲೂ ಸಹ ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ನೇಯ್ಗೆ ಸೀರೆಗಳಿಗೆ ಬೇಡಿಕೆ ಇರುವುದು ಸಂತೋಷಕರ ವಿಷಯ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Handloom Sarees demand in Dharmasthala Laksha Deepotsava 2017.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more