ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರ್ಧ ಲೀಟರ್ ನೀರಿಗೆ 40 ರೂ., ಮಂಗಳೂರಲ್ಲಿ ಹೀಗೊಂದು ಹಗಲು ದರೋಡೆ

ಮಂಗಳೂರಿನಲ್ಲಿ ನೀರಿನ ಹಾಹಾಕಾರ ಮುಗಿಲು ಮುಟ್ಟುತ್ತಿದೆ. ಇದರ ಮಧ್ಯೆ 10 ರೂಪಾಯಿಗೆ ಸಿಗುತ್ತಿದ್ದ ಅರ್ಧ ಲೀಟರ್ ಮಿನರಲ್ ವಾಟರ್ ಗೆ 40 ರೂಪಾಯಿ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

By ಐಸಾಕ್ ರಿಚರ್ಡ್
|
Google Oneindia Kannada News

ಮಂಗಳೂರು, ಏಪ್ರಿಲ್ 3: ಮಂಗಳೂರಿನಲ್ಲಿ ನೀರಿನ ಹಾಹಾಕಾರ ಮುಗಿಲು ಮುಟ್ಟುತ್ತಿದೆ. ಇದರ ಮಧ್ಯೆ 10 ರೂಪಾಯಿಗೆ ಸಿಗುತ್ತಿದ್ದ ಅರ್ಧ ಲೀಟರ್ ಮಿನರಲ್ ವಾಟರ್ ಗೆ 40 ರೂಪಾಯಿ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ಐಷಾರಾಮಿ ಮಾಲ್ ಗಳಲ್ಲಿ ಪ್ರತಿ ಅರ್ಧ ಲೀಟರ್ ನೀರಿನ ಬಾಟಲಿಗೆ 10 ರೂಪಾಯಿ ಜಾಗದಲ್ಲಿ 40 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. 1 ಲೀಟರ್ ನೀರಿನ ಬಾಟಲಿಗೆ 20ರ ಜಾಗದಲ್ಲಿ 80 ರೂಪಾಯಿ ವಸೂಲಿ ಮಾಡಲಾಗುತ್ತಿದೆ.[ಬಿಸಿಲ ಬೇಗೆಯ ನಡುವೆ ಮಂಗಳೂರಲ್ಲಿ ಶುರುವಾಯಿತೇ ನೀರಿನ ದಂಧೆ ?]

Half liter water bottle of Rs 10 is now Rs 40 in Mangaluru malls

ಬಾಟಲಿಯಲ್ಲಿ ಬರೆದ 'ಎಂಆರ್ ಪಿ' (ಮಾಕ್ಸಿಮಮ್ ರಿಟೇಲ್ ಪ್ರೈಸ್) ಬೆಲೆ ಯಾವುದನ್ನೂ ಈ ಮಾಲ್ ಗಳು ಗಮನಕ್ಕೆ ತೆಗೆದುಕೊಳ್ಳದೆ ಹಗಲು ದರೋಡೆಯಲ್ಲಿ ನಿರತವಾಗಿವೆ.


ಜೀವ ಜಲ ದುಬಾರಿ

ಮಂಗಳೂರಿನ ವಿವಿಧ ಶಾಪಿಂಗ್ ಮಾಲ್, ಮಲ್ಟಿಫ್ಲೆಕ್ಸ್ ಸಿನೆಮಾ ಮಂದಿರಗಳಲ್ಲಿ ನೀರಿನ ಬಾಟಲಿಗಳನ್ನು ದುಪ್ಪಟ್ಟಲ್ಲ ನಾಲ್ಕು ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದಿರುವ ಸಾಮಾಜಿಕ ಕಾರ್ಯಕರ್ತ ಶಶಿಧರ ಶೆಟ್ಟಿ ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.[ಮಂಗಳೂರಿನಲ್ಲಿ ನೀರಿಗೆ ಸಮಸ್ಯೆ, ಟ್ಯಾಂಕರ್ ಗಳಿಗೆ ಹೆಚ್ಚಿದ ಬೇಡಿಕೆ]

Half liter water bottle of Rs 10 is now Rs 40 in Mangaluru malls

'ಶಾಪಿಂಗ್ ಮಾಲೊಂದರಲ್ಲಿ ತಮ್ಮಿಂದ ಒಂದು ಲೀಟರ್ ನೀರಿಗೆ 80 ರೂಪಾಯಿ ದುಡ್ಡು ವಸೂಲಿ ಮಾಡಿದ್ದಾರೆ. ಅಲ್ಲದೆ ಇಲ್ಲಿಗೆ ಬರುವ ಎಲ್ಲರಿಂದಲೂ ಇದೇ ಮೊತ್ತದ ದುಡ್ಡು ವಸೂಲಿ ಮಾಡುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದರೂ ಇಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಡ ಜನರ ಲೂಟಿ ಹೊಡೆಯಲಾಗುತ್ತಿರುವುದು ವಿಷಾದನೀಯ ಸಂಗತಿ," ಎಂದು ಶಶಿಧರ್ ಶೆಟ್ಟಿ ದೂರಿದ್ದಾರೆ.

"ನಗರದ 'ಸಿಟಿ ಸೆಂಟರ್' ಮಾಲ್ ಸೇರಿದಂತೆ ಹಲವು ಮಲ್ಟಿಪ್ಲೆಕ್ಸ್ ಸಿನೆಮಾ ಮಂದಿರಗಳಿಗೆ ತೆರಳಿದರೆ ಅಲ್ಲಿ ಹೊರಗಡೆಯಿಂದ ಯಾವುದೇ ತಿಂಡಿ ತಿನಸುಗಳನ್ನು ಕೊಂಡು ಹೋಗುವುದಕ್ಕೆ ಅವಕಾಶವಿಲ್ಲ. ನೀರನ್ನು ಕೂಡಾ ಅಲ್ಲಿಂದಲೇ ಖರೀದಿಸಬೇಕು. ಹೀಗಿರುವಾಗ ದುಪ್ಪಟ್ಟು ದರ ವಸೂಲಿ ಮಾಡಿ ನೀರಿನ ಬಾಟಲಿಗಳಲ್ಲಿ ಜನತೆಯ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಆದ್ದರಿಂದ ಕೂಡಲೇ ಇಂತಹ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ," ಅವರು ಆಗ್ರಹಿಸಿದ್ದಾರೆ.

English summary
The scarcity of water in Mangaluru is now a privilege for Big Malls. Half liter water bottle of 10 Rs is now selling to 40 Rs in malls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X