ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈಭವದ ಮೂಡಬಿದಿರೆ ಆಳ್ವಾಸ್ ವಿರಾಸತ್ಗೆ ಸಂಭ್ರಮದ ಚಾಲನೆ

|
Google Oneindia Kannada News

ಮೂಡಬಿದಿರೆ, ಜನವರಿ 05: ಮೂಡಬಿದರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಪ್ರಸಿದ್ಧ ಆಳ್ವಾಸ್‌ ವಿರಾಸತ್‌ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಸಾಂಸ್ಕೃತಿಕ ಉತ್ಸವದ ಅಂಗವಾಗಿ ಖ್ಯಾತ ಹಿನ್ನೆಲೆ ಗಾಯಕ ಹರಿಹರನ್ ಅವರಿಗೆ ಆಳ್ವಾಸ್‌ ವಿರಾಸತ್‌ 2019 ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಿನ್ನೆ ಸಂಜೆ ನಡೆದ ಭವ್ಯ ಸಮಾರಂಭದಲ್ಲಿ ಆಳ್ವಾಸ್ ವಿರಾಸತ್ ರಜತ ಮಹೋತ್ಸವ ಕಾರ್ಯಕ್ರಮವನ್ನು ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಎನ್‌ ವಿನಯ ಹೆಗ್ಡೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕೇವಲ ಪಾಠ ಪ್ರವಚನಗಳಿಗೆ ಮಾತ್ರ ಸೀಮಿತವಾಗದೇ ಸಾಹಿತ್ಯ, ಸಂಸ್ಕೃತಿ, ಕಲೆ, ಕ್ರೀಡೆಗಳ ಆಕರ್ಷಿತರಾಗುವಂತೆ ಕಾರ್ಯಕ್ರಮ ಅಯೋಜಿಸುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆ ನಾಡಿಗೆ ಮಾದರಿ ಯಾಗಿದೆಎಂದು ಹೇಳಿದರು.

ಜ.13 ರಂದು ಮಂಗಳೂರಿನ ಏಕೈಕ ರಾಮ-ಲಕ್ಷಣ ಜೋಡುಕರೆ ಕಂಬಳ ಜ.13 ರಂದು ಮಂಗಳೂರಿನ ಏಕೈಕ ರಾಮ-ಲಕ್ಷಣ ಜೋಡುಕರೆ ಕಂಬಳ

ಆರ್ಥಿಕ ಸಂಕಷ್ಟ ದಲ್ಲಿಯೂ ಕೂಡ ಟೀಕೆ ಟಿಪ್ಪಣಿಗಳನ್ನು ಸಂಭಾಳಿ ಸುತ್ತ, ಇದು ತನ್ನ ಕರ್ತವ್ಯ ಎಂದು ಭಾವಿಸಿ ಶ್ರಮಿಸುತ್ತಿರುವ ಡಾ.ಎಂ. ಮೋಹನ ಆಳ್ವರ ಚಿಂತನೆಗಳನ್ನು ಯುವಜನತೆ ಅರ್ಥಮಾಡಿ ಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಹರಿಹರನ್‌ಗೆ ಆಳ್ವಾಸ್ ವಿರಾಸತ್‌ ಪ್ರಶಸ್ತಿ

ಹರಿಹರನ್‌ಗೆ ಆಳ್ವಾಸ್ ವಿರಾಸತ್‌ ಪ್ರಶಸ್ತಿ

ಕಾರ್ಯಕ್ರಮದ ಅಂಗವಾಗಿ ಖ್ಯಾತ ಹಿನ್ನೆಲೆ ಗಾಯಕ ಹರಿಹರನ್‌ ಅವರನ್ನು ಡಾ.ಎಂ.ಮೋಹನ ಆಳ್ವರು ಅವರು 'ಆಳ್ವಾಸ್‌ ವಿರಾಸತ್‌ 2019' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಆಳ್ವಾಸ್ ವಿರಾಸತ್ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಗೌರವಧನ, ಸ್ಮರಣಿಕೆ, ಸಮ್ಮಾನ ಫಲಕ ಒಳ ಗೊಂಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹರಿಹರನ್ ಈ ಸಮ್ಮಾನ ನನ್ನಲ್ಲಿ ವಿನೀತ ಪ್ರಜ್ಞೆಯನ್ನು ಉದ್ದೀಪಿಸಿದೆ, ಇದು ಸ್ಮರಣೀಯ ಕ್ಷಣ ಎಂದು ಹರಿಹರನ್‌ ಭಾವುಕರಾಗಿ ಪ್ರತಿಕ್ರಿಯಿಸಿದರು.

ವೈರಲ್ ಆಯ್ತು ಹಿಂದೂ ಯುವತಿ‌, ಮುಸ್ಲಿಂ ಯುವಕನ ಪ್ರೇಮ ವಿವಾಹದ ಲಗ್ನ ಪತ್ರಿಕೆ ವೈರಲ್ ಆಯ್ತು ಹಿಂದೂ ಯುವತಿ‌, ಮುಸ್ಲಿಂ ಯುವಕನ ಪ್ರೇಮ ವಿವಾಹದ ಲಗ್ನ ಪತ್ರಿಕೆ

ಪೇಜಾವರ ಶ್ರೀ ಮಾತು

ಪೇಜಾವರ ಶ್ರೀ ಮಾತು

ಉದ್ಘಾಟನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು . ತಾಳ ಮೇಳದ ಹೊಂದಾಣಿಕೆ ಯಿಂದ ಸುಂದರ ಸಂಗೀತ ಯಾವ ರೀತಿ ಹೊರಹೊಮ್ಮಲು ಸಾಧ್ಯವೋ ಅದೇ ರೀತಿ ಪರಸ್ಪರ ಸಾಮರಸ್ಯದೊಂದಿಗೆ ಜನರ ರಾಷ್ಟ್ರೀಯ ಜೀವನ ಸಂಗೀತವಾಗಿರಲಿ ಎಂದು ಹೇಳಿದರು.

ಮಂಗಳೂರಿನಲ್ಲಿ ಪ್ರಿಯಕರನನ್ನು ಕೊಲೆ ಮಾಡಿದ ಪ್ರೇಯಸಿಯ ಅಣ್ಣ ಮಂಗಳೂರಿನಲ್ಲಿ ಪ್ರಿಯಕರನನ್ನು ಕೊಲೆ ಮಾಡಿದ ಪ್ರೇಯಸಿಯ ಅಣ್ಣ

ಪಶ್ಚಿಮದವರನ್ನು ಪ್ರಭಾವಿಸಿರುವ ಅಧ್ಯಾತ್ಮ

ಪಶ್ಚಿಮದವರನ್ನು ಪ್ರಭಾವಿಸಿರುವ ಅಧ್ಯಾತ್ಮ

ಅಧ್ಯಾತ್ಮ, ಯೋಗ, ಕಲೆ ಇವುಗಳೆಲ್ಲ ಪೂರ್ವದಿಂದ ಪಶ್ಚಿಮಕ್ಕೆ ಸಾಗಿ ಅಲ್ಲಿನವರನ್ನು ಪ್ರಭಾವಿಸಿದರೆ ಪಶ್ಚಿಮದ ವಿಕೃತಿಗಳು ಪೂರ್ವಕ್ಕೆ ಬಂದು ಈ ನಾಡನ್ನು ಕಂಗೆಡಿಸಿವೆ. ಇಂಥ ಸಂದರ್ಭ ವಿರಾಸತ್‌ ಸಾಮರಸ್ಯ ಮೂಡಿಸುವ ಅಪೂರ್ವ ಪ್ರಯತ್ನ ಎಂದು ಅವರು ಅಭಿಪ್ರಾಯ ಪಟ್ಟರು.

ಹರಿಹರನ್ ಸಂಗೀತದ ಮೋಡಿ

ಹರಿಹರನ್ ಸಂಗೀತದ ಮೋಡಿ

ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಹರಿಹರನ್ ಶಾಸ್ತ್ರೀಯ ಸಂಗೀತದ ಮೋಡಿ ಮಾಡಿದರೆ ಲೆಸ್ಲೆ ಲಿವಿಸ್ ಪಾಶ್ಚಾತ್ಯ ಸಂಗೀತದ ರಸ ದೌತಣ ಉಣ ಬಡಿಸಿದರು. ಈ ಸಂದರ್ಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಸಚಿವರಾದ ಅಮರನಾಥ ಶೆಟ್ಟಿ, ಅಭಯಚಂದ್ರ, ಜಯಶ್ರೀ ಅಮರನಾಥ ಶೆಟ್ಟಿ, ಮಾಜಿ ವಿಧಾನಪರಿಷತ್‌ಸದಸ್ಯ ಕ್ಯಾ.ಗಣೇಶ್‌ ಕಾರ್ಣಿಕ್‌, ಮತ್ತಿತರರು ಉಪಸ್ಥಿತರಿದ್ದರು.

English summary
Very famous Alvas Virasth 2019 National cultural fest inaugurated in Moodbidre. Renowned singer Hariharan received Alvas Viarsath 2019 award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X