ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಜಿರೆ; ಮತ ಎಣಿಕೆ ಕೇಂದ್ರದ ಮುಂದೆ ಪಾಕಿಸ್ತಾನ ಪರ ಘೋಷಣೆ

|
Google Oneindia Kannada News

ಮಂಗಳೂರು, ಡಿಸೆಂಬರ್ 30: ಕರ್ನಾಟಕದ 5,728 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ದಕ್ಷಿಣ ಕನ್ನಡದಲ್ಲಿ ಮತ ಎಣಿಕೆ ಕೇಂದ್ರದ ಬಳಿ ಪಾಕಿಸ್ತಾನ ಪರವಾದ ಘೋಷಣೆಯನ್ನು ಕೂಗಲಾಗಿದೆ.

ಬುಧವಾರ ಮಧ್ಯಾಹ್ನ ಬೆಳ್ತಂಗಡಿ ತಾಲೂಕಿನ ಉಜಿರೆಯ ಮತ ಎಣಿಕೆ ಕೇಂದ್ರದ ಹೊರಗೆ ಪಾಕಿಸ್ತಾನ ಪರವಾದ ಘೋಷಣೆ ಕೂಗಲಾಗಿದೆ. ಪೊಲೀಸರು ಸಹ ಈ ಸಮಯದಲ್ಲಿ ಅಲ್ಲಿಯೇ ಇದ್ದರು.

Karnataka Gram Panchayat Election Results 2020 Live : ಪಂಚಾಯಿತಿ ಫಲಿತಾಂಶ Karnataka Gram Panchayat Election Results 2020 Live : ಪಂಚಾಯಿತಿ ಫಲಿತಾಂಶ

ಬಿಜೆಪಿ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಮತ ಕೇಂದ್ರದ ಹೊರಗೆ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಆಗ ಎಸ್‌ಡಿಪಿಐನ ಕೆಲವು ಕಾರ್ಯಕರ್ತರು ಪಾಕಿಸ್ತಾನ ಪರವಾದ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿದೆ.

ಸೌದಿ ಸಾಲ ತೀರಿಸಲು ಚೀನಾಗೆ ಬಕೆಟ್ ಹಿಡಿದ ಪಾಕ್ ನಾಯಕರು..!ಸೌದಿ ಸಾಲ ತೀರಿಸಲು ಚೀನಾಗೆ ಬಕೆಟ್ ಹಿಡಿದ ಪಾಕ್ ನಾಯಕರು..!

Gram Panchayat Election Result Pro Pakistan Slogan In Ujire

'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗುವ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಪರಿಶೀಲನೆ ಮಾಡಿ ಮುಂದಿ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

ಸಿಪಿಇಸಿ ಯೋಜನೆಗಾಗಿ ಚೀನಾದಿಂದ 2.7 ಬಿಲಿಯನ್ ಡಾಲರ್ ಪಡೆಯಲು ಪಾಕ್ ನಿರ್ಧಾರ: ವರದಿಸಿಪಿಇಸಿ ಯೋಜನೆಗಾಗಿ ಚೀನಾದಿಂದ 2.7 ಬಿಲಿಯನ್ ಡಾಲರ್ ಪಡೆಯಲು ಪಾಕ್ ನಿರ್ಧಾರ: ವರದಿ

ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕೆಲವು ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಆಗ ಎಸ್‌ಡಿಪಿಐ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿದರು ಎಂದು ಕೆಲವರು ಹೇಳುತ್ತಿದ್ದಾರೆ. ತನಿಖೆ ಬಳಿಕ ಖಚಿತವಾದ ಮಾಹಿತಿ ಲಭ್ಯವಾಗಲಿದೆ.

English summary
Pro Pakistan slogan at gram panchayat election counting center at Ujire, Belthangady taluk of Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X