ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಲಷ್ಕರ್ ಪರ ಬರಹ, ಆರೋಪಿಗಳಿಗಾಗಿ ಹುಡುಕಾಟ

|
Google Oneindia Kannada News

ಮಂಗಳೂರು, ನವೆಂಬರ್ 27 : ಮಂಗಳೂರು ನಗರದ ಬಿಜೈ ರಸ್ತೆಯ ಗೋಡೆಯ ಮೇಲೆ ಭಯೋತ್ಪಾದಕ ಸಂಘಟನೆ ಪರವಾಗಿ ಬರಹ ಬರೆಯಲಾಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೋಡೆಯ ಮೇಲೆ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೋಯ್ಬಾ ಪರವಾಗಿ ಬರಹವನ್ನು ಬರೆಯಲಾಗಿದೆ. "ನಮ್ಮನ್ನು ವಿಧ್ವಂಸಕ ಕೃತ್ಯ ನಡೆಸಲು ಉತ್ತೇಜಿಸಲು ಬರಬೇಡಿ" ಎಂದು ಬರಹದಲ್ಲಿ ಎಚ್ಚರಿಕೆ ನೀಡಲಾಗಿದೆ.

ಮಂಗಳೂರು ದಕ್ಷಿಣಕ್ಕೆ ಬಂಪರ್ ಕೊಡುಗೆ ಕೊಟ್ಟ ಸರ್ಕಾರ ಮಂಗಳೂರು ದಕ್ಷಿಣಕ್ಕೆ ಬಂಪರ್ ಕೊಡುಗೆ ಕೊಟ್ಟ ಸರ್ಕಾರ

"ಲಷ್ಕರ್ ಎ ತೋಯ್ಬಾ ಮತ್ತು ತಾಲಿಬಾನ್‌ಗಳಿಗೆ ಸಂಘಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂಬುದು ತಿಳಿದಿದೆ" ಎಂದು ಬರೆಯಲಾಗಿದ್ದು, ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

ಜಮ್ಮು ಮತ್ತು ಕಾಶ್ಮೀರ: ಬಿಜೆಪಿ ಕಾರ್ಯಕರ್ತರ ಹತ್ಯೆ ಹಿಂದೆ ಲಷ್ಕರ್ ಕೈವಾಡಜಮ್ಮು ಮತ್ತು ಕಾಶ್ಮೀರ: ಬಿಜೆಪಿ ಕಾರ್ಯಕರ್ತರ ಹತ್ಯೆ ಹಿಂದೆ ಲಷ್ಕರ್ ಕೈವಾಡ

Graffiti Supporting Terror Groups Lashkar Found

"ಲಷ್ಕರ್ ಜಿಂದಾಬಾದ್" ಎಂದು ಸಹ ಬರೆಯಲಾಗಿದ್ದು, ಶುಕ್ರವಾರ ಬೆಳಗ್ಗೆ ಬರಹ ಬೆಳಕಿಗೆ ಬಂದಿದೆ. ಗುರುವಾರ ಮಧ್ಯರಾತ್ರಿ ಕಿಡಿಗೇಡಿಗಳು ಈ ರೀತಿ ಬರೆದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ತವರು ನೆಲದಲ್ಲಿಯೇ ಈ ರೀತಿಯ ಬರಹ ಪತ್ತೆಯಾಗಿದೆ.

ಎನ್‌ಕೌಂಟರ್‌: ಲಷ್ಕರ್ ಕಮಾಂಡರ್ ಸಜ್ಜದ್‌ನನ್ನು ಹತ್ಯೆಗೈದ ಯೋಧರು ಎನ್‌ಕೌಂಟರ್‌: ಲಷ್ಕರ್ ಕಮಾಂಡರ್ ಸಜ್ಜದ್‌ನನ್ನು ಹತ್ಯೆಗೈದ ಯೋಧರು

ಕದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ ಬರಹವನ್ನು ಅಳಿಸಿ ಹಾಕಿದ್ದಾರೆ. ಗೋಡೆ ಮೇಲೆ ಬರೆದವರು ಯಾರು? ಎಂಬುದನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಈ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕ್ರಮ‌ ಕೈಗೊಳ್ಳಲು ಸೂಚನೆಯನ್ನು ಕೊಟ್ಟಿದ್ದಾರೆ.

ರಾಷ್ಟ್ರ ವಿರೋಧಿ ಕೃತ್ಯಗಳನ್ನು ಸಹಿಸುವುದು‌ ಸಾಧ್ಯವಿಲ್ಲ ಎಂದು ವೇದವ್ಯಾಸ ಕಾಮತ್ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ.

English summary
Graffiti supporting terror group Lashkar-e-Taiba found in a wall at Kadri, Mangaluru. Police searching for accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X