ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಕೈಗಾರಿಕಾ ಟೌನ್ ಶಿಪ್ ಪ್ರಾಧಿಕಾರ ರಚನೆ- ಯು.ಟಿ ಖಾದರ್

|
Google Oneindia Kannada News

ಮಂಗಳೂರು, ಜೂನ್ 10: ರಾಜ್ಯದಲ್ಲಿರುವ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಪ್ರತ್ಯೇಕವಾದ ಕೈಗಾರಿಕಾ ಟೌನ್ ಶಿಪ್ ಪ್ರಾಧಿಕಾರ ರಚಿಸಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

 ವಿಶ್ವನಾಥ್ ವಿರುದ್ಧ ಯು ಟಿ ಖಾದರ್ ವಾಗ್ದಾಳಿ ವಿಶ್ವನಾಥ್ ವಿರುದ್ಧ ಯು ಟಿ ಖಾದರ್ ವಾಗ್ದಾಳಿ

ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ವಿವಿಧ ಸಮಸ್ಯೆಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಈ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸ್ವತಂತ್ರ ವಾಗಿ ನಿರ್ವಹಿಸಲು ಈ ಪ್ರಾಧಿಕಾರವನ್ನು ರಚಿಸಲು ಯೋಜನೆ ಸಿದ್ಧಪಡಿಲಾಗುತ್ತಿದೆ ಎಂದು ಹೇಳಿದರು. ರಾಜ್ಯದ ಮುನಿಸಿಪಲ್ ಕಾಯ್ದೆಗೆ ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ತಂದು ಈ ಕೈಗಾರಿಕಾ ಟೌನ್ ಶಿಪ್ ಪ್ರಾಧಿಕಾರ ರಚಿಸಲಾಗುವುದು ಎಂದು ಅವರು ಸ್ಪಷ್ಟ ಪಡಿಸಿದರು.

Government will form Industrial Township Authority U T Khadar

ಒಟ್ಟು ಎಂಟು ಮಂದಿ ಸದಸ್ಯರನ್ನು ಒಳಗೊಂಡ ಈ ಪ್ರಾಧಿಕಾರದಲ್ಲಿ 5 ಮಂದಿ ಕೈಗಾರಿಕಾ ಪ್ರದೇಶದ ಸದಸ್ಯರು, ಓರ್ವ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯ, ಸ್ಥಳೀಯಾಡಳಿತ ಸಂಸ್ಥೆಗೆ ಸೇರಿದ ಒಬ್ಬ ಸದಸ್ಯ ಸರ್ಕಾರದಿಂದ ನೇಮಕಗೊಳ್ಳುತ್ತಾರೆ. ಒಬ್ಬ ನಗರಾಭಿವೃದ್ಧಿ ಇಲಾಖೆಯ ಸದಸ್ಯ ಈ ಸಮಿತಿಯಲ್ಲಿರುತ್ತಾರೆ ಎಂದು ಮಾಹಿತಿ ನೀಡಿದರು.

English summary
Speaking to media persons in Mangaluru, Urban development minister UT Khadar said that Government will form Industrial Township Authority,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X