ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಳಾಯಿ ಮೀನುಗಾರಿಕಾ ಬಂದರಿಗೆ ಕೇಂದ್ರದಿಂದ 196 ಕೋಟಿ ರೂ. ಅನುದಾನ

|
Google Oneindia Kannada News

ಮಂಗಳೂರು, ಆಗಸ್ಟ್ 10: ನವಮಂಗಳೂರಿನ ಕುಳಾಯಿ ಮೀನುಗಾರಿಕಾ ಬಂದರು ನಿರ್ಮಾಣ ಯೋಜನೆಗೆ ಕೇಂದ್ರ ಸರಕಾರವು ಅನುಮೋದನೆ ನೀಡಿ 196 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿದೆ.

ಮಂಗಳೂರು: ಕಡಲ ಮಕ್ಕಳಿಂದ ವಿಶೇಷ ಸಮುದ್ರ ಪೂಜೆಮಂಗಳೂರು: ಕಡಲ ಮಕ್ಕಳಿಂದ ವಿಶೇಷ ಸಮುದ್ರ ಪೂಜೆ

ಸಂಸದ ನಳಿನ್ ಕುಮಾರ್ ಕಟೀಲ್ ಇವರ ನೇತೃತ್ವದಲ್ಲಿ ಮೀನುಗಾರಿಕಾ ಕ್ಷೇತ್ರದ ಪದಾಧಿಕಾರಿಗಳ ನಿಯೋಗವು ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವರಾದ ರಾಧಾ ಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಈ ವೇಳೆ ಯೋಜನೆಗೆ ಅನುಮೋದನೆ ನೀಡಿ 196 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ.

Gov santions 196 crores for construction of new port at Kulai

ಇದೇ ಸಂದರ್ಭದಲ್ಲಿ ಸ್ಥಗಿತಗೊಂಡಿರುವ ಮಂಗಳೂರು ಮೀನುಗಾರಿಕಾ ಬಂದರಿನ 3ನೇ ಹಂತದ ಯೋಜನೆಗೆ 32.20 ಕೋಟಿ ರೂಪಾಯಿ ಅನುದಾನವನ್ನೂ ಕೇಂದ್ರ ಸರಕಾರದಿಂದ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಯಿತು.

ವೈರಲ್ ಆದ ರಷ್ಯಾ ಅಧ್ಯಕ್ಷರ ಬೇಸಿಗೆ ಮೋಜಿನ 'ಮೀನು ಬೇಟೆ'ವೈರಲ್ ಆದ ರಷ್ಯಾ ಅಧ್ಯಕ್ಷರ ಬೇಸಿಗೆ ಮೋಜಿನ 'ಮೀನು ಬೇಟೆ'

ನಿಯೋಗದಲ್ಲಿ ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾದ ನಿತಿನ್ ಕುಮಾರ್, ಕರ್ನಾಟಕ ಪರ್ಸಿನ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷರಾದ ಮೋಹನ್ ಬೆಂಗ್ರೆ, ಕರ್ನಾಟಕ ಕರಾವಳಿ ಮೀನುಗಾರರ ಕ್ರೀಯಾ ಸಂಘದ ಅಧ್ಯಕ್ಷರಾದ ಮನೋಹರ್ ಬೋಳೂರು, ಮೀನುಗಾರ ಪ್ರಮುಖರಾದ ಅನಿಲ್ ಕುಮಾರ್, ಇಬ್ರಾಹಿಂ ಬೆಂಗ್ರೆ, ನವೀನ್ ಬಂಗೇರ, ಬಾಬು ಉಳ್ಳಾಲ್, ದಯಾನಂದ ಇವರು ಉಪಸ್ಥಿತರಿದ್ದರು.

English summary
Government sanctions Rs. 196 crores for the construction of new port at Kulai in Mangaluru. The complete initiative was taken by MP Naleen Kumar Kateel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X