ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಕೇಟಿಂಗ್ ಚಕ್ರದ ಬೋಲ್ಟ್​ನೊಳಗೆ ಬಚ್ಚಿಟ್ಟು ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನ; ವಶ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 31: ಸ್ಕೇಟಿಂಗ್ ಚಕ್ರದ ಬೋಲ್ಟ್​ನೊಳಗೆ ಬಚ್ಚಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 16 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮುಳಿಯಾರುವಿನ ಮಹಮ್ಮದ್ ನಿವಾಸ್ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿರುವಾತ. ಈ ಅರೋಪಿ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಂಗಳವಾರ ಬೆಳಿಗ್ಗೆ ಬಂದಿಳಿದಿದ್ದ. ಈ ಸಂದರ್ಭದಲ್ಲಿ ಈತನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಸ್ಕೇಟಿಂಗ್ ಬೋರ್ಡ್ ಪತ್ತೆಯಾಗಿದೆ.

ಅದನ್ನು ಪರಿಶೀಲನೆ ನಡೆಸಿದ ವೇಳೆಯಲ್ಲಿ ಸ್ಕೇಟಿಂಗ್​ನ ವ್ಹೀಲ್​ ಬೋಲ್ಟ್ ಹಾಗೂ ಚಕ್ರಕ್ಕೆ ಸಂಪರ್ಕ ಕಲ್ಪಿಸುವ ರಾಡ್​ನಲ್ಲಿ ಚಿನ್ನವನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ.

Gold Smuggling At Mangaluru Airport; Rs 16 Lakh Worth Of Gold Seized

ಈತನಿಂದ 335 ಗ್ರಾಂ. ತೂಕದ 16,21,400 ರೂ. ಮೌಲ್ಯದ ಚಿನ್ನವನ್ನು ವಶಪಡಿಸಲಾಗಿದೆ. ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಮ್ಮದ್ ನಿವಾಸ್‌ನನ್ನು ವಶಕ್ಕೆ ತೆಗೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಶಂಕಿತ ಉಗ್ರರು ಒಳನುಸುಳಿರುವ ಶಂಕೆ

ಶ್ರೀಲಂಕಾದಿಂದ ಭಾರತಕ್ಕೆ ಶಂಕಿತ ಉಗ್ರರು ಒಳನುಸುಳಿರುವ ಶಂಕೆ ವ್ಯಕ್ತವಾಗಿದ್ದು, ಕೇರಳ ಹಾಗು ಕರ್ನಾಟಕದ ಕರಾವಳಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಶ್ರೀಲಂಕಾದಿಂದ 2 ಯಾಂತ್ರಿಕೃತ ಬೋಟ್‌ನಲ್ಲಿ ಕೇರಳ ರಾಜ್ಯದ ಕರಾವಳಿಗೆ ಬಂದಿಳಿದಿರುವ ಮಾಹಿತಿ ಲಭ್ಯವಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

Gold Smuggling At Mangaluru Airport; Rs 16 Lakh Worth Of Gold Seized

ಶಂಕಿತರು ಕೇರಳದ ಅಲಪ್ಲುಳ ಬಂದರಿಗೆ ತಲುಪಿರುವ ಮಾಹಿತಿಯನ್ನು ಗುಪ್ತಚರ ಇಲಾಖೆ ರವಾನಿಸಿದೆ. ಪಾಕಿಸ್ತಾನಕ್ಕೆ ತೆರಳಲು 12 ಮಂದಿ ಶ್ರೀಲಂಕಾದ ಶಂಕಿತ ಉಗ್ರರು ಕೇರಳದ ಕರಾವಳಿ ಭಾಗಕ್ಕೆ ಬಂದಿದ್ದಾರೆ.

ಕೇರಳ ಅಥವಾ ಕರ್ನಾಟಕ ರಾಜ್ಯದ ಕರಾವಳಿ ಭಾಗದಿಂದ ಬೋಟ್ ಮೂಲಕ ಪಾಕಿಸ್ತಾನಕ್ಕೆ ತೆರಳಲು ಶಂಕಿತ ಉಗ್ರರು ಯೋಜಿಸಿದ್ದಾರೆ. ಕರಾವಳಿ ಭಾಗದಲ್ಲಿ ಕೋಸ್ಟ್‌ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆಗೆ ಅಲರ್ಟ್ ಆಗಿ ಇರಲು ಸೂಚನೆ ನೀಡಲಾಗಿದೆ.

ಎರಡು ರಾಜ್ಯದ ಸಮುದ್ರ ತೀರದಲ್ಲಿ ಗಸ್ತು ತಿರುಗಲು ಸೂಚಿಸಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಬೋಟ್ ಕಂಡುಬಂದರೆ ಪೊಲೀಸರಿಗೆ ತಿಳಿಸುವಂತೆ ಸ್ಥಳೀಯ ಮೀನುಗಾರರಿಗೆ ತಿಳಿಸಲಾಗಿದೆ.

English summary
Gold Smuggling At Mangaluru Airport; Customs officials seized Rs 16 lakh worth of gold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X