ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುಟ್ಟ ಮಗಳ ಇಚ್ಛೆಯಂತೆ ಶೌಚಾಲಯ ನಿರ್ಮಿಸಲು ಚಿನ್ನವನ್ನೇ ಅಡವಿಟ್ಟ ಕುಟುಂಬ

|
Google Oneindia Kannada News

ಮಂಗಳೂರು, ಜನವರಿ 17: ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯದ ಅನಿವಾರ್ಯತೆಯ ಕುರಿತು ಜಾಗೃತಿ ಮೂಡಲಾರಂಭಿಸಿದೆ. ಇದೀಗ ಶೌಚಾಲಯ ನಿರ್ಮಾಣಕ್ಕಾಗಿ ಹೆತ್ತವರಲ್ಲಿ ಹಠ ಹಿಡಿದು ಯಶಸ್ವಿಯಾದ ಪುಟ್ಟ ಬಾಲಕಿಯ ಕಥೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ಭಾರೀ ಚರ್ಚೆಯಾಗುತ್ತಿದೆ.

6 ತಿಂಗಳಲ್ಲಿ 13 ಲಕ್ಷ ಟನ್ ಕಸ ಸ್ವಚ್ಛಗೊಳಿಸಿದ ಐಎಎಸ್ ಅಧಿಕಾರಿ6 ತಿಂಗಳಲ್ಲಿ 13 ಲಕ್ಷ ಟನ್ ಕಸ ಸ್ವಚ್ಛಗೊಳಿಸಿದ ಐಎಎಸ್ ಅಧಿಕಾರಿ

ಮನೆಯಲ್ಲಿ ಶೌಚಾಲಯವಿಲ್ಲ ಎಂಬ ಕೊರಗಿನಿಂದ ಹೆತ್ತವರನ್ನು ಕಾಡಿಬೇಡಿ ಮನವೊಲಿಸಿ ಕೊನೆಗೂ ಶೌಚಾಲಯ ಕಟ್ಟಿಸಿಕೊಳ್ಳುವಲ್ಲಿ ಶಿರ್ತಾಡಿ ಗ್ರಾಮದ ಮೂಡುಕೊಣಾಜೆಯ 8ರ ಹರೆಯದ ಕಾವ್ಯ ಯಶಸ್ವಿಯಾಗಿದ್ದಾಳೆ. ಕುದ್ರೆಲ್ ನಿವಾಸಿ ಶೀನ-ಲೀಲಾ ದಂಪತಿಯ ಇಬ್ಬರು ಮಕ್ಕಳಲ್ಲಿ ಕಾವ್ಯಾ ಕಿರಿಯವಳು.

 ಭಾರತೀಯ ರೈಲುಗಳಲ್ಲಿ ಶೀಘ್ರವೇ ಇ ಶೌಚಾಲಯ ವ್ಯವಸ್ಥೆ ಭಾರತೀಯ ರೈಲುಗಳಲ್ಲಿ ಶೀಘ್ರವೇ ಇ ಶೌಚಾಲಯ ವ್ಯವಸ್ಥೆ

ಪುಟ್ಟ ಬಾಲಕಿ ಕಾವ್ಯ ಸ್ಥಳೀಯ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಾಳೆ. ಶಾಲೆಯಲ್ಲಿ ಆರೋಗ್ಯ ಕಾರ್ಯಕರ್ತೆಯ ಸ್ವಚ್ಛತೆಯ ಪಾಠದಿಂದ ಪ್ರೇರಿತಳಾದ ಕಾವ್ಯಾ ಶೌಚಾಲಯ ನಿರ್ಮಿಸಲು ಹೆತ್ತವರನ್ನು ಆಗ್ರಹಿಸಿದ್ದಳು.

Gold ornament pledged for construct toilet

ಈ ಹಿಂದೆ ಸೋಗೆ ಮಾಡಿನ ಸೂರಿನ ಮನೆಯನ್ನು ದುರಸ್ತಿ ಮಾಡಲು ಸುಮಾರು 1.5 ಲಕ್ಷ ರೂಪಾಯಿ ಸಾಲಮಾಡಿದ್ದ ಈ ಬಡ ಕುಟುಂಬಕ್ಕೆ ಮತ್ತೆ ಶೌಚಾಲಯ ನಿರ್ಮಿಸಲು ಸಾಧ್ಯವಿರಲಿಲ್ಲ. ಮಗಳ ಆಸೆಯಂತೆ ಮನೆಗೆ ಶೌಚಾಲಯ ನಿರ್ಮಿಸಲು ಹೆತ್ತವರಲ್ಲಿ ಚಿಕ್ಕಾಸು ಇರಲಿಲ್ಲ. ಜೊತೆಗೆ ಮನೆ ಜಾಗದ ಹಕ್ಕುಪತ್ರ ಸಮಸ್ಯೆ ಬೇರೆ.

 ಬಯಲು ಬಹಿರ್ದೆಸೆ ಮುಕ್ತಗೊಂಡ ಗ್ರಾಮೀಣ ಕರ್ನಾಟಕ ಬಯಲು ಬಹಿರ್ದೆಸೆ ಮುಕ್ತಗೊಂಡ ಗ್ರಾಮೀಣ ಕರ್ನಾಟಕ

ಕೊನೆಗೆ ಪಂಚಾಯತ್ ನಲ್ಲಿ ಶೌಚಾಲಯ ನಿರ್ಮಿಸಲು ವಿನಂತಿ ಸಲ್ಲಿಸಿದಾಗ ಅದು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮಗಳ ಒತ್ತಾಯಕ್ಕೆ ಮನಸೋತ ಹೆತ್ತವರು ಮನೆಯಲ್ಲಿ ಚಿನ್ನ ಅಡವಿಟ್ಟು 30 ಸಾವಿರ ರೂಪಾಯಿ ವೆಚ್ಚದಲ್ಲಿ ಶೌಚಾಲಯ, ಸ್ನಾನದ ಕೊಠಡಿ ಕಟ್ಟಿಸಿದ್ದಾರೆ. ಶೌಚಾಲಯಕ್ಕಾಗಿ ಒತ್ತಾಯಿಸಿ ಯಶಸ್ವಿಯಾದ ಕಾವ್ಯಾಳ ಪ್ರಸಂಗ ಈಗ ಪ್ರಶಂಸೆಗೆ ಪಾತ್ರವಾಗಿದೆ.

English summary
A family of Kudrel of Shirthadi village near Moodbidre pledged glod for construct toilet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X