ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓದಲು ಹೇಳಿ​ದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ 4ನೇ ತರಗತಿ ವಿದ್ಯಾರ್ಥಿನಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 28: ಪರೀ​ಕ್ಷೆಗೆ ಓದಲು ಹೇಳಿ​ದ್ದಕ್ಕೆ ಬಾಲಕಿ ಆತ್ಮ​ಹತ್ಯೆ ಮಾಡಿ​ಕೊಂಡಿರುವ ಘಟನೆ ಬುಧ​ವಾರ ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಮೂರು ಕಾವೇರಿ ಬಳಿಯ ಕಮ್ಮಜೆ ಎಂಬ​ಲ್ಲಿ ನಡೆ​ದಿದೆ.

ಶ್ರೀಲತಾ ಎಂಬುವರ 10 ವರ್ಷದ ಮಗಳು, ಧ್ರುವಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಕಿನ್ನಿಗೋಳಿಯ ಮೇರಿವೆಲ್ ಶಾಲೆಯಲ್ಲಿ ಆಕೆ 4ನೇ ತರಗತಿ ಓದುತ್ತಿದ್ದಳು. ಬುಧವಾರ ಸ್ಥಳೀಯ ಚರ್ಚ್ ನಲ್ಲಿ ಉತ್ಸವವಿದ್ದ ಕಾರಣ ಶಾಲೆಗೆ ರಜೆ ಘೋಷಿಸಲಾಗಿತ್ತು.

ಕುಟುಂಬದಲ್ಲಿ ಜಗಳ; ಪತ್ನಿ ಮಕ್ಕಳನ್ನು ಬರ್ಬರವಾಗಿ ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿಕುಟುಂಬದಲ್ಲಿ ಜಗಳ; ಪತ್ನಿ ಮಕ್ಕಳನ್ನು ಬರ್ಬರವಾಗಿ ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಕೆಲ ಕಾಲ ಧ್ರುವಿ ಟಿ.ವಿ. ನೋಡುತ್ತಿದ್ದು, ಕರೆಂಟ್ ಹೋದ ಕಾರಣ, ಪರೀಕ್ಷೆಗೆ ಓದಿಕೊಳ್ಳುವಂತೆ ಅಜ್ಜಿ ತಿಳಿಸಿದ್ದಾರೆ. ರೂಮಿಗೆ ಹೋಗಿ ಸೇರಿಕೊಂಡ ಆಕೆ ಎಷ್ಟು ಹೊತ್ತಾದರೂ ಹೊರಗೆ ಬರಲಿಲ್ಲ.

Girl Committ Suicide For Grandmother Told Her To Read

ಅನುಮಾನಗೊಂಡು ಕೋಣೆಯೊಳಗೆ ನೋಡಿದಾಗ, ಕೋಣೆಯ ಕಿಟಕಿಗೆ ಕೂದಲಿಗೆ ಹಾಕಿಕೊಳ್ಳುವ ರಿಬ್ಬನ್‌ ಹಾಕಿಕೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

English summary
Girl Committ Suicide For Grandmother Told Her To Read for exams. Inicident happened at kammaje at mangaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X