ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ಸಂಭ್ರಮದ ಗಣೇಶೋತ್ಸವ ಆಚರಣೆ

|
Google Oneindia Kannada News

ಮಂಗಳೂರು, ಆಗಸ್ಟ್ 25: ಕರಾವಳಿ ಜಿಲ್ಲೆಗಳಲ್ಲಿ ಇಂದು ವಿಘ್ನನಿವಾರಕ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ 375 ಕಡೆ ಸಾರ್ವಜನಿಕ ಗಣೇಶೋತ್ಸವವನ್ನು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿವೆ.

ಮೋದಕ ಪ್ರಿಯನಾದ ಗಣಪನಿಗೆ ಸೌತೆಕಾಯಿ ಬಲು ಇಷ್ಟ!ಮೋದಕ ಪ್ರಿಯನಾದ ಗಣಪನಿಗೆ ಸೌತೆಕಾಯಿ ಬಲು ಇಷ್ಟ!

ಮಂಗಳೂರಿನ ಕೇಂದ್ರ ಮೈದಾನದಲ್ಲಿ ಹಿಂದೂ ಯುವಸೇನೆಯ ಆಶ್ರಯದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ 25 ವರ್ಷದ ಬೆಳ್ಳಿಹಬ್ಬದ ಸಂಭ್ರಮ. ಈ ಪ್ರಯಕ್ತ ಇಂದು ಗಣೇಶನ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು.

ಉಡುಪಿಯಲ್ಲಿ ಬಿಸ್ಕೆಟ್ ನಲ್ಲಿ ಮೂಡಿದ ಗಣಪನ ಕಲಾಕೃತಿಉಡುಪಿಯಲ್ಲಿ ಬಿಸ್ಕೆಟ್ ನಲ್ಲಿ ಮೂಡಿದ ಗಣಪನ ಕಲಾಕೃತಿ

ಗಣಹೋಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳನ್ನು ಈ ಪ್ರಯಕ್ತ ಹಮ್ಮಿಕೊಳ್ಳಲಾಗಿತ್ತು. ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಉತ್ಸವಕ್ಕೆ ಚಾಲನೆ ನೀಡಿದರು.

ಗಣೇಶೋತ್ಸವದಂದು ಆ್ಯಂಬುಲೆನ್ಸ್ ಕೊಡುಗೆ

ಗಣೇಶೋತ್ಸವದಂದು ಆ್ಯಂಬುಲೆನ್ಸ್ ಕೊಡುಗೆ

ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುತ್ತಿರುವ ಗಣೇಶೋತ್ಸವಕ್ಕೆ 25 ನೇ ವರ್ಷ ತುಂಬಿದ ಹಿನ್ನಲೆಯಲ್ಲಿ ಅಂಗವಾಗಿ ದಿ.ಗುಣಕರ ಶೆಟ್ಟಿಯವರ ನೆನಪಿಗೋಸ್ಕರ ಅತ್ಯಾಧುನಿಕ ಅಂಬ್ಯುಲೆನ್ಸ್ ಸೇವೆಯನ್ನು ಲೋಕಾರ್ಪಣೆ ಮಾಡಲಾಯಿತು.

ಓಂಕಾರ ನಗರದಲ್ಲಿ ಗಣೇಶೋತ್ಸವ

ಓಂಕಾರ ನಗರದಲ್ಲಿ ಗಣೇಶೋತ್ಸವ

ಬಂಟ್ಸ್ ಹಾಸ್ಟಲ್ ನ ಒಂಕಾರ ನಗರದಲ್ಲೂ ಗಣೇಶೋತ್ಸವ ಪ್ರಯುಕ್ತ ಧ್ವಜಾರೋಹಣ ಹಾಗೂ ತೆನೆಹಬ್ಬ ಹಾಗೂ ಧಾರ್ಮಿಕ ಸಭೆಗಳನ್ನು ನಡೆಸಲಾಯಿತು.

ಹತ್ತು ಹಲವು ಕಡೆ ಗಣೇಶೋತ್ಸವ

ಹತ್ತು ಹಲವು ಕಡೆ ಗಣೇಶೋತ್ಸವ

ಮಂಗಳೂರಿನ ಪ್ರತಾಪ್ ನಗರದ ಸಂಘ ನಿಕೇತನ, ರಥಬೀದಿ ವೆಂಕಟರಮಣ ದೇವಸ್ಥಾನದ ಗಣಪ, ಕೆ.ಎಂ.ಸಿ, ಕರಂಗಲ್ಪಾಡಿ ಮಾರುಕಟ್ಟೆ, ಮರೋಳಿ, ಮಂಗಳೂರು ಹಾಲು ಉತ್ಪಾದಕರ ಸಂಘ ಕುಲಶೇಖರ, ಸಿದ್ಧಿವಿನಾಯಕ ದೇವಸ್ಥಾನ ಬಿಕರ್ನಕಟ್ಟೆ, ಬಿಜೈ ಹೀಗೆ ನಗರದ ಹತ್ತು ಹಲವಾರು ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವಗಳನ್ನು ಆಯೋಜಿಸಲಾಗಿದೆ.

ದಕ್ಷಿಣ ಕನ್ನಡದಾದ್ಯಂತ ಗಣೇಶೋತ್ಸವ

ದಕ್ಷಿಣ ಕನ್ನಡದಾದ್ಯಂತ ಗಣೇಶೋತ್ಸವ

ಮಂಗಳೂರು ನಗರ ಹೊರತುಪಡಿಸಿ ಜಿಲ್ಲೆಯ ಪುತ್ತೂರ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲೂ ಗಣಪನ ವಿಗ್ರಹ ಪ್ರತಿಷ್ಟಾಪನೆ ಮಾಡಲಾಯಿತು. ಕಿಲ್ಲೆ ಮೈದಾನದಲ್ಲಿ ಈ ಬಾರಿ 60 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ನಡೆಸಲಾಗುತ್ತಿದ್ದು. ಈ ಪ್ರಯುಕ್ತ ಹಲವು ಧಾರ್ಮಿಕ ವಿಧಿವಿಧಾನಗಳೂ ನಡೆಯಿತು.

ಮುಗಿಲು ಮುಟ್ಟಿದ ಸಂಭ್ರಮ

ಮುಗಿಲು ಮುಟ್ಟಿದ ಸಂಭ್ರಮ

ಇದೇ ಪ್ರಕಾರ ಫಿಲೋಮಿನಾ ಕಾಲೇಜಿನಲ್ಲೂ , ವಿವೇಕಾನಂದ ಕಾಲೇಜಿನಲ್ಲೂ ಗಣೇಶನ ವಿಗ್ರಹದ ಪ್ರತಿಷ್ಟಾಪನೆ ಮಾಡಲಾಯಿತು. ಒಟ್ಟಾರೆ ಗಣೇಶ ಚತುರ್ಥಿಯ ಸಂಭ್ರಮ ಕರಾವಳಿ ಜಿಲ್ಲೆಗಳಲ್ಲಿ ಮುಗಿಲು ಮುಟ್ಟಿದೆ.

English summary
Mangaluru city is geared up with Ganesh Chaturthi excitement, with devotees seen celebrating the great festival. In More than 375 places Ganesha idol has been placed for Public to worship in Dakshina Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X