ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಸೆಲ್ ಫೋನ್ ಗೆ ಪರ್ಯಾಯವಾಗಿ ಲೈ - ಫೋನ್ ಆವಿಷ್ಕಾರ

|
Google Oneindia Kannada News

ಮಂಗಳೂರು, ಜುಲೈ. 18: ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಸೆಲ್ ಫೋನ್ ಗಳಿಗೆ ಎಷ್ಟು ಅಡಿಕ್ಟ್ ಅಥವಾ ದಾಸರಾಗಿದ್ದೇವೆ ಎಂದರೆ ಸೆಲ್ ಫೋನ್ ಗಳಿಲ್ಲದೇ ಜೀವನವೇ ಇಲ್ಲ ಎನ್ನುವ ಮಟ್ಟಕ್ಕೆ ತಲುಪಿದ್ದೇವೆ . ಸೆಲ್ ಫೋನ್ ಮೂಲಕವೇ ನಮ್ಮ ದಿನ ಆರಂಭವಾದರೆ ಸೆಲ್ ಫೋನ್ ಗಳ ಬಟನ್ ಗಳನ್ನು ಒತ್ತುತ್ತಾ , ಜಾಲತಾಣಗಳಲ್ಲಿ ಸರ್ಚ್ ಮಾಡುತ್ತಾ ದಿನ ಕೊನೆಗೊಳ್ಳುತ್ತದೆ.

ಸೆಲ್ ಫೋನ್ ಕಿವಿಗೆ ಅಂಟಿಕೊಂಡೆ ಇರುತ್ತದೆ. ಈ ರೀತಿಯ ವರ್ತನೆ ತೋರದವರನ್ನು ಅನ್ಯಗ್ರಹ ಜೀವಿಗಳಂತೆ ಕಾಣಲಾಗುತ್ತದೆ. ಇದು ಇಂದಿನ ಹಕೀಕತ್ತು. ಆದರೆ ಈ ಸೆಲ್ ಫೋನ್ ಗಳು ಹೊರ ಸೂಸುವ ರೇಡಿಯೋ ತರಂಗಾಂತರಗಳಿಂದಾಗಿ ನಮ್ಮ ದೇಹದ ಮೇಲಾಗುತ್ತಿರುವ ಅದರಲ್ಲೂ ಮೆದುಳಿನ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ನಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆ ಯೋಚಿಸಲು ಪುರುಸೊತ್ತಿಲ್ಲ.

ಫೇಕ್ ಸುದ್ದಿ ತಡೆಗಟ್ಟಲು ವಾಟ್ಸಾಪ್ ನೀಡುತ್ತಿದೆ ಹೊಸ ಸೌಲಭ್ಯಫೇಕ್ ಸುದ್ದಿ ತಡೆಗಟ್ಟಲು ವಾಟ್ಸಾಪ್ ನೀಡುತ್ತಿದೆ ಹೊಸ ಸೌಲಭ್ಯ

ಈ ರೇಡಿಯೋ ತರಂಗಾಂತರಗಳ ಅಪಾಯದ ಕುರಿತು ಗಮನಹರಿಸಿದ ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೆಲ್ ಫೋನ್ ಗೆ ಪರ್ಯಾಯವಾಗಿ ಲೈ- ಫೋನ್ ಎಂಬ ಆರೋಗ್ಯ ಸ್ನೇಹಿ ಫೋನ್ ಗಳನ್ನುಆವಿಷ್ಕರಿಸಿದ್ದಾರೆ.

Futuristic Li Phone invented in Mangaluru

ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಸಹ್ಯಾದ್ರಿ ಇನೊವೇಶನ್ ಹಬ್ ಪ್ರಾಯೋಜಿತ ತಂತ್ರಜ್ಞಾನ ತಂತ್ರಾಂಶ ಸಂಶೋಧನಾ ಸಂಸ್ಥೆ ಆರ್ ಡಿ ಎಲ್ ಟೆಕ್ನಾಲಜೀಸ್ ಈ ಲೈ - ಫೋನ್ ಗಳನ್ನು ಆವಿಷ್ಕರಿಸಿದೆ.

ಲೈ-ಫೋನ್ ಅತ್ಯಾಧುನಿಕ ತಂತ್ರಜ್ಞಾನದ ಅತ್ಯಂತ ಸರಳ ಫೋನ್ ಎಂದು ಹೇಳಲಾಗಿದೆ. ಸೆಲ್ ಫೋನ್ ಗಳಲ್ಲಿ ಬಳಕೆಯಾಗುವುದು ಆರ್ ಎಫ್ ಅಥವಾ ರೇಡಿಯೋ ಫ್ರಿಕ್ವೆನ್ಸಿ ತರಂಗಗಳು. ಆದರೆ ಲೈ-ಫೋನ್ ಗಳಲ್ಲಿ ಬಳಸುವುದು ಎಲ್ ಇ ಡಿ ಬಲ್ಪ್ ಬೆಳಕನ್ನು. ಇದು ವಿಶ್ವ ಮಟ್ಟದ ಅಪೂರ್ವ ಅವಿಷ್ಕಾರ ಎಂದು ಆರ್ ಡಿ ಎಲ್ ಟೆಕ್ನಾಲಜೀಸ್ ಮುಖ್ಯಸ್ಥ ರಾಘವ ಶೆಟ್ಟಿ ತಿಳಿಸಿದ್ದಾರೆ.

ಸೆಲ್ ಫೋನ್ ಗಳಲ್ಲಿ ಉಪಯೋಗವಾಗುವ ರೇಡಿಯೋ ಫ್ರಿಕ್ವೆನ್ಸಿಗಳು ಧ್ವನಿ, ಚಿತ್ರ ಅಥವಾ ಪಠ್ಯಗಳನ್ನು ವಿದ್ಯುತ್ ಆಥವಾ ಕಾಂತೀಯ ಸಂಕೇತಗಳನ್ನಾಗಿ ಪರಿವರ್ತಿಸಿ ಪ್ರವರ್ತಿಸುತ್ತದೆ. ಈ ಸಂಕೇತಗಳನ್ನು ಇನ್ನೊಂದು ಸೆಲ್ ಫೋನ್ ಸ್ವೀಕರಿಸಿ ಕೇಳುಗನಿಗೆ ತಲುಪಿಸುತ್ತದೆ. ಇಲ್ಲಿ ಸಂವಹನದ ಮಾಧ್ಯಮ ರೇಡಿಯೋ ತರಂಗಗಳು.

ಆದರೆ ಲೈ- ಫೋನ್ ಗೆ ಬೇಕಿರುವುದು ಎಲ್ ಇ ಡಿ ಬೆಳಕು. ಈ ಬೆಳಕಿನಡಿ ಕುಳಿತು ಈ ಫೋನ್ ಬಳಸಬಹುದು. ಮೊಬೈಲ್ ಸಿಮ್ಮನ್ನು ಸೆಲ್ಯುಲರ್ ನ ಗೇಟ್ ವೇಗೆ ಜೋಡಿಸಿದರೆ ಸೆಲ್ ಫೋನ್ ನ ಕರೆಗಳು , ಮೆಸೇಜ್ ಗಳು ಲೈ-ಫೋನ್ ತೆರೆಯಲ್ಲಿಮೂಡುತ್ತದೆ. ಬಳಿಕ ಸೆಲ್ ಫೋನ್ ನ ಎಲ್ಲಾ ಕೆಲಸಗಳನ್ನು ನಡೆಸಬಹುದಾಗಿದೆ.

ಲೈ- ಫೋನ್ ನಲ್ಲಿ ಆರ್ ಎಫ್ ತರಂಗಾಂತರಗಳು ಇಲ್ಲ. ಆರ್ ಡಿ ಎಲ್ ನ ವಿಶೇಷ ತರಂಗಾಂತರ ಸಂಸ್ಕರಣೆಯಿಂದ ಆರ್ ಎಫ್ ತರಂಗಾಂತರಗಳು ಬೆಳಕಿನ ದತ್ತಾಂಶಗಳಾಗಿ ಪರಿವರ್ತನೆ ಗೊಂಡು ಲೈ -ಫೋನ್ ತಲುಪುತ್ತದೆ. ಸೆಲ್ ಫೋನ್ ಗಳ ವಿಕಿರಣಗಳ ಯಾವ ದುಷ್ಪರಿಣಾಮಗಳು ಇಲ್ಲಿ ಇರುವುದಿಲ್ಲೆಂದು ಹೇಳಲಾಗಿದೆ.

English summary
RLD technologies sponsored By Sahyadri innovation hub of Mangaluru invented Li-Phone alternative to cell phone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X