ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿಗೆ ಮತ್ತೆ ಬಂದ ಆಮ್ಲಜನಕ ಹೊತ್ತ ಯುದ್ಧ ನೌಕೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 11; ದೇಶದಲ್ಲಿ ಆಮ್ಲಜನಕ ಕೊರತೆ ನೀಗಿಸಲು ಗಲ್ಫ್ ರಾಷ್ಟ್ರಗಳು ಮತ್ತೆ ಆಕ್ಸಿಜನ್ ಟ್ಯಾಂಕ್ ಗಳನ್ನು ಭಾರತಕ್ಕೆ ಕಳುಹಿಸಿದೆ. ನವಮಂಗಳೂರು ಬಂದರಿಗೆ ಮತ್ತೆ ಎರಡು ಯದ್ಧ ನೌಕೆಗಳ ಮೂಲ‌ಕ ಆಮ್ಲಜನಕ ಟ್ಯಾಂಕ್ ಆಗಮಿಸಿದೆ.

ಭಾರತೀಯ ನೌಕಾದಳದ ಐಎನ್ಎಸ್ ತಬಾರ್ ಮತ್ತು ಐಎನ್ಎಸ್ ಕೊಚ್ಚಿ ಕುವೈತ್ ನಿಂದ 20 ಮೆಟ್ರಿಕ್ ಟನ್ ತೂಕದ 5 ಆಕ್ಸಿಜನ್ ಕಂಟೈನರ್, 70 ಪ್ಯಾಲೆಟ್ ಆಕ್ಸಿಜನ್ ಸಿಲಿಂಡರ್ ಮತ್ತು 2 ಲಿಕ್ವಿಡ್ ಆಕ್ಸಿಜನ್‌ ಅನ್ನು ಮಂಗಳೂರಿಗೆ ತರಲಾಗಿದೆ.

ಬೆಂಗಳೂರು ತಲುಪಿದ ಮೊದಲ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲುಬೆಂಗಳೂರು ತಲುಪಿದ ಮೊದಲ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು

ಕುವೈತ್ ಸರ್ಕಾರ ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ದಾನ ಮಾಡಿರುವ ಎರಡನೇ ಹಂತದ ಆಮ್ಲಜನಕ ಇದಾಗಿದ್ದು, ಕಳೆದ ಮೇ 6 ರಂದು ಕುವೈತ್ ನ ಶುವಾಯ್ಕ್ ಬಂದರಿನಿಂದ ನೌಕೆಗಳು ಹೊರಟಿತ್ತು. ಇಲ್ಲಿಯವರೆಗ 4 ನೌಕೆಗಳು ಆಮ್ಲಜನಕ ಸಾಗಾಟ ಮಾಡಿದೆ.

ಕುವೈತ್‌ನಿಂದ ಮಂಗಳೂರಿಗೆ ಬಂತು 40 ಮೆಟ್ರಿಕ್ ಟನ್ ಆಕ್ಸಿಜನ್ಕುವೈತ್‌ನಿಂದ ಮಂಗಳೂರಿಗೆ ಬಂತು 40 ಮೆಟ್ರಿಕ್ ಟನ್ ಆಕ್ಸಿಜನ್

From Kuwait 40 MT Oxygen Reaches Mangaluru

ಐಎನ್ಎಸ್ ಕೊಚ್ಚಿ ಮೂಲಕವಾಗಿ 20ಟನ್ ಮೆಟ್ರಿಕ್ ಆಮ್ಲಜನಕ, ಒಂದು ಟನ್‌ನ ಪ್ಯಾಲೆಟ್ ಆಮ್ಲಜನಕ ಮತ್ತು 10 ಲೀಟರ್ ಲಿಕ್ವಿಡ್ ಆಮ್ಲಜನಕವನ್ನು ತರಲಾಗಿದೆ. ಐಎನ್ಎಸ್ ತಬಾರ್ ನೌಕೆಯ ಮೂಲಕ‌ 20 ಮೆಟ್ರಿಕ್ ಟನ್ ಆಮ್ಲಜನಕ, ಮತ್ತು 1 ಟನ್ ಆಕ್ಸಿಜನ್ ಸಿಲಿಂಡರ್ ತರಲಾಗಿದೆ.

ಹಾಸನದಲ್ಲಿ ಆಕ್ಸಿಜನ್ ಘಟಕ, ಜನರೇಟರ್ ಅಳವಡಿಕೆ: ಡಾ.ಕೆ.ಸುಧಾಕರ್ ಹಾಸನದಲ್ಲಿ ಆಕ್ಸಿಜನ್ ಘಟಕ, ಜನರೇಟರ್ ಅಳವಡಿಕೆ: ಡಾ.ಕೆ.ಸುಧಾಕರ್

ಆಮ್ಲಜನಕ ಮತ್ತು ವೈದ್ಯಕೀಯ ಉಪಕರಣಗಳನ್ನು ಹೊಂದಿದ ಎರಡು ನೌಕೆಗಳು ಮಂಗಳೂರು ಬಂದರು ಪ್ರವೇಶಿಸುತ್ತಿದ್ದಂತೆಯೇ ಅಧಿಕಾರಿಗಳು ಬರಮಾಡಿಕೊಂಡಿದ್ದು, ನವಮಂಗಳೂರು ಬಂದರಿನ ಎಲ್ಲಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಆಮ್ಲಜನಕ ಲಿಫ್ಟಿಂಗ್ ಕಾರ್ಯ ಮಾಡಲಾಗಿದೆ‌‌.

ಈ ಸಂಧರ್ಭದಲ್ಲಿ ನೌಕಾಪಡೆ, ಕೋಸ್ಟ್ ಗಾರ್ಡ್, ಕಸ್ಟಮ್ಸ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು. ಆಕ್ಸಿಜನ್ ಗಳನ್ನು ಯಾವ ಜಿಲ್ಲೆಗಳಿಗೆ ಕಳುಹಿಸಬೇಕೆನ್ನುವುದು ರಾಜ್ಯ ಸರ್ಕಾರ ನಿರ್ಧರಿಸಲಿದೆ.

English summary
INS Kolkata reached New Mangalore Port carrying life-saving 40 MT oxygen from Kuwait.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X