ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಯ್! ಮಂಗಳೂರಿನಲ್ಲಿ ಮೀನು ತುಂಬಾ ಅಗ್ಗ ಮಾರ್ರೆ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 16: ಕರಾವಳಿಗೆ ಹೋಗುವವರು ಮೊದಲು ಪ್ಲಾನ್ ಮಾಡೋದು ಮಂಗಳೂರಿಗೆ ಹೋಗಿ ಸಖತ್ತಾಗಿ ಮೀನೂಟ ಮಾಡಬೇಕು ಅಂತಾ. ನೀವೇನಾದರೂ ಈಗ ಮಂಗಳೂರಿಗೆ ಹೋದರೆ ಇದುವೇ ರೈಟ್ ಟೈಮ್. ಮೀನೂಟ ಪ್ರಿಯರಿಗೆ ಸಂತಸದ ಸುದ್ದಿ ಮಂಗಳೂರಿನಲ್ಲಿ ಕಾಯುತ್ತಿದೆ.

ಇಷ್ಟು ದಿನ ಗಗನೆಕ್ಕೆರಿದ ತಾಜಾ ಮೀನಿನ ದರದಲ್ಲಿ ಸದ್ಯ ಭಾರೀ ಇಳಿಕೆಯಾಗಿದೆ. ತಾಜಾ ಮೀನುಗಳು ಅಗ್ಗದ ದರದಲ್ಲಿ ಮಂಗಳೂರಿನಲ್ಲಿ ದೊರಕುತ್ತಿದೆ. ಮೀನು ಪ್ರಿಯರ ಜೊತೆಗೆ, ಮೀನು ಮಾರಾಟಗಾರರು, ಮೀನು ಖರೀದಿದಾರರು ಫುಲ್ ಖುಷ್ ಆಗಿದ್ದಾರೆ. ಮೀನು ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣವಿದೆ.

'ಅಂಜಲ್, ಮಾಂಜಿ, ಮದಿಮಾಲ್, ಡಿಸ್ಕೋ, ಬಂಗುಡೆ. ಭಲೇ ಅಣ್ಣ, ಭಲೇ ಅಕ್ಕ. ಮೀನ್‌ಗ್ ರೇಟ್ ಭಾರೀ ಅಗ್ಗ ಉಂಡು..' ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಒಂದು ಸುತ್ತು ಬಂದರೆ ಈ ಮಾತು ಕೇಳುತ್ತಿರುತ್ತದೆ. ಕಡಲಿನಿಂದ ಬೋಟ್‌ಗಳು ಹೇರಿ ಬಂದ ರಾಶಿ ರಾಶಿ ತಾಜಾ ಮೀನುಗಳು, ಮಂಗಳೂರು ಕಡಲತಡಿಯಲ್ಲಿ ಮೀನುಗಳ ಸುಗ್ಗಿಯ ಕಾಲ ತಂದಿದೆ.

Fresh Fish Prices Decreased In Mangaluru Market

ಸದ್ಯ ಕರಾವಳಿಯಲ್ಲಿ ಮತ್ಸ್ಯ ಬೇಟೆ ಭರ್ಜರಿಯಾಗಿ ನಡೆಯುತ್ತಿದೆ. ಫಿಶಿಂಗ್ ಚೆನ್ನಾಗಿ ನಡೆದು ಕಡಲ ಕುವರರು ಸಂತಸಗೊಂಡಿದ್ದಾರೆ. ರಾಶಿ ರಾಶಿ ಮೀನು ಹೆಚ್ಚಾಗಿ ಸಿಗುವ ಕಾರಣ, ಪೂರೈಕೆ ಹೆಚ್ಚಾಗಿ ದರದಲ್ಲಿ ಇಳಿಮುಖವಾಗಿದೆ. ಕೇರಳಕ್ಕೆ ಸದ್ಯ ಮೀನು ಸಾಗಾಟ ಆಗ್ತಾ ಇಲ್ಲ. ಹೀಗಾಗಿ ಸಹಜವಾಗಿಯೇ ಮೀನಿನ ದರದಲ್ಲಿ ಇಳಿಕೆಯಾಗಿದೆ. ಮೀನುಗಾರಿಕಾ ಋತು ಆರಂಭದಿಂದಲೇ ಕಡಲಿನಲ್ಲಿ ಮೀನಿನ ಬೇಟೆ ಭರ್ಜರಿಯಾಗಿಯೇ ಆಗುತ್ತಿದೆ. ಇದರಿಂದ ರಾಶಿ ರಾಶಿ ಮೀನುಗಳು ಮೀನುಗಾರಿಕಾ ಬಂದರನ್ನು ಸೇರುತ್ತಿದೆ.

ಕೋಳಿ, ಕುರಿಗಿಂತ ತಾಜಾ, ಯಾವುದೇ ಕಲಬೆರಕೆಯಿಲ್ಲ. ಮೀನು ಆರೋಗ್ಯಕ್ಕೆ ಒಳ್ಳೆಯದು ಅನ್ನುವ ಅಭಿಪ್ರಾಯ ಗ್ರಾಹಕರದ್ದು. ಹೀಗಾಗಿ ಬೆಳಗ್ಗೆ ಬೇಗನೇ ಮೀನುಗಾರಿಕಾ ಬಂದರಿಗೆ ಬಂದು ತಮಗಿಷ್ಟವಾದ ಮೀನನ್ನು ಖರೀದಿಸುತ್ತಿದ್ದಾರೆ.

Fresh Fish Prices Decreased In Mangaluru Market

ರುಚಿಯಲ್ಲಿ ಮೀನುಗಳ ರಾಜನೇಂದೇ ಕರೆಯಲ್ಪಡುವ ದುಬಾರಿ ಮೀನಾದ ಅಂಜಲ್, ಮಾಂಜಿ ಮೀನಿಗೆ ಈ ಹಿಂದೆ ಕೆ.ಜಿಗೆ ಸಾವಿರದ ದರವಿತ್ತು. ಸದ್ಯ 400, 450 ರೂಪಾಯಿಗೆ ಗ್ರಾಹಕರ ಕೈಗೆ ಸಿಗುತ್ತಿದೆ. ಉಳಿದ ಬಂಗುಡೆ, ಬೂತಾಯಿ, ಮದಿಮಾಲ್, ಮುರು ಮೀನುಗಳು ಸಿಕ್ಕಾಪಟ್ಟೆ ಕಡಿಮೆ ದರಕ್ಕೆ ಸಿಗುತ್ತಾ ಇದೆ. ಇದರಿಂದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. ವಿಧವಿಧವಾದ ಮೀನನ್ನು ಮನೆಗೆ ತಗೊಂಡು ಮಸಾಲೆ ಬೆರೆಸಿ ತಮಗಿಷ್ಟವಾದ ಖಾದ್ಯ ತಯಾರಿಸಿ ಮೀನಿನ ರುಚಿ ಸವಿಯುತ್ತಿದ್ದಾರೆ.
Fresh Fish Prices Decreased In Mangaluru Market

ಒಟ್ಟಿನಲ್ಲಿ ಇಷ್ಟು ದಿನ ಮತ್ಸ್ಯ ಕ್ಷಾಮ, ಕೊರೊನಾ ಅದು ಇದು ಅಂತ ಮೀನಿನ ದರ ಗಗನಕ್ಕೇರಿತ್ತು. ಸದ್ಯ ಮೀನಿನ ದರದಲ್ಲಿ ಭಾರೀ ಇಳಿಕೆಯಾಗಿದೆ. ಇನ್ಯಾಕ್ ತಡ ನಿಮ್ಗೂ ತಾಜಾ ಮೀನುಗಳು ಬೇಕು ಅಂದ್ರೆ ಮೀನ್ ಮಾರುಕಟ್ಟೆಗೆ ಹೋಗಿ. ಮೀನು ತಿನ್ನಬೇಕು ಅನ್ನಿಸಿದರೆ ಮಂಗಳೂರು ‌ಕಡೆ ಹೊರಡಿ.

English summary
Fresh fishes is getting cheaper in Mangaluru and the fish market has a festive atmosphere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X