ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೇಸ್ಬುಕ್ ನಲ್ಲಿ ಕಾರು ಮಾರೋದಾಗಿ ಹೇಳಿ ಪಂಗನಾಮ ಹಾಕಿ ಮಾಯವಾದ

|
Google Oneindia Kannada News

ಮಂಗಳೂರು, ಜುಲೈ 22: ಸಾಮಾಜಿಕ ಜಾಲತಾಣಗಳು ಮಾಹಿತಿ, ಅಭಿಪ್ರಾಯ ಹಂಚಿಕೊಳ್ಳುವ ವೇದಿಕೆಯಾಗಿ ದೊಡ್ಡ ಮಟ್ಟದ ಪರಿವರ್ತನೆಗೆ ಕಾರಣವಾಗಿರುವ ಉದಾಹರಣೆಗಳು ದೊರೆಯುತ್ತವೆ. ಆದರೆ ಇದರ ಜೊತೆಜೊತೆಗೇ ಮೋಸ ಮಾಡಲೂ ಇದು ಉತ್ತಮ ವೇದಿಕೆಯಾಗುತ್ತಿರುವ ನಿದರ್ಶನಗಳು ಈಚೆಗೆ ಸಾಕಷ್ಟು ದೊರೆಯುತ್ತಿವೆ.

ಇದಕ್ಕೆ ಮಂಗಳೂರಿನಲ್ಲಿ ಈಚೆಗೆ ನಡೆದಿರುವ ಒಂದು ಘಟನೆಯೇ ಸಾಕ್ಷಿ.

 ಮಂಗಳೂರನ್ನು 'ಡ್ರಗ್ಸ್ ಫ್ರೀ ಸಿಟಿ' ಮಾಡಲು ಪೊಲೀಸರ ಹದ್ದಿನ ಕಣ್ಣು ಮಂಗಳೂರನ್ನು 'ಡ್ರಗ್ಸ್ ಫ್ರೀ ಸಿಟಿ' ಮಾಡಲು ಪೊಲೀಸರ ಹದ್ದಿನ ಕಣ್ಣು

ನಡೆದಿದ್ದಿಷ್ಟು. ಫೇಸ್‌ಬುಕ್‌ನಲ್ಲಿ ಕಾರು ಮಾರಾಟಕ್ಕಿದೆ ಎಂಬ ಜಾಹೀರಾತು ಕಾಣಿಸಿಕೊಂಡಿದೆ. ಇದನ್ನು ನೋಡಿದ ಸ್ಥಳೀಯ ವ್ಯಕ್ತಿಯೊಬ್ಬರು ಕಾರು ಖರೀದಿಸುವ ಬಗ್ಗೆ ಮರು ಸಂದೇಶ ಕಳುಹಿಸಿದ್ದಾರೆ. ಜೂನ್ 20ರಂದು ಮೀನಾ ದಾಸ್ ಎಂದು ಹೇಳಿಕೊಂಡ ವ್ಯಕ್ತಿ ಕರೆ ಮಾಡಿ, ತಾನು ಸಿಐಎಸ್ ‌ಎಫ್‌ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾನೆ. ತಾನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ.

fraud through facebook in mangaluru

ತನಗೆ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆಗಿದ್ದು, ತನ್ನ ಆಲ್ಟೊ 800 ಕಾರನ್ನು ಮಾರಾಟ ಮಾಡುವುದಾಗಿ ತಿಳಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಗುರುತಿನ ಚೀಟಿ, ಕಾರ್ ಆರ್‌ಡಿಯನ್ನು ವಾಟ್ಸ್ ‌ಆಪ್ ಮೂಲಕ ಕಳುಹಿಸಿದ್ದಾರೆ. ಅದನ್ನು ನಂಬಿದ ಮಂಗಳೂರಿನ ವ್ಯಕ್ತಿ ಅವರಿಗೆ ಆನ್‌ಲೈನ್ ಮೂಲಕ ಹಂತಹಂತವಾಗಿ ಒಟ್ಟು 1,20,000 ರೂಪಾಯಿಯನ್ನು ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ.

ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.

English summary
Social networks acts as a good platform for information and opinions which led to a transformation in society. But there are also a plenty of instances where this platform used for cheating. Mangalore has witnessed such incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X