ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದುವೆಯಾಗುವುದಾಗಿ ನಂಬಿಸಿ ವಂಚನೆ; ಯುವತಿ ದೂರು

|
Google Oneindia Kannada News

ಮಂಗಳೂರು, ಜೂನ್ 27: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ನನಗೆ ವಂಚಿಸಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಯೋಧನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕೊಡಗು ಜಿಲ್ಲೆಯ ಮೈತಾಡಿ ನಿವಾಸಿ ಸ್ವಪ್ನ ಪದ್ಮಿನಿ ತನ್ನ ಪ್ರಿಯಕರ ಕಗ್ಗೊಡು ನಿವಾಸಿ ಭುವನ್ ಎಂಬಾತನ ಮೇಲೆ ದೂರು ನೀಡಿದ್ದಾರೆ. ಭುವನ್ ಹಾಗೂ ಪದ್ಮಿನಿ ಒಂದು ವರ್ಷದಿಂದ ಪ್ರೀತಿಸುತ್ತಿದ್ದು, ಭುವನ್ ಪದ್ಮಿನಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 ಕ್ರಿಕೆಟ್ ಬೆಟ್ಟಿಂಗ್; ಮಂಗಳೂರಿನಲ್ಲಿ ನಾಲ್ವರ ಬಂಧನ, 54 ಲಕ್ಷ ರೂಪಾಯಿ ವಶ ಕ್ರಿಕೆಟ್ ಬೆಟ್ಟಿಂಗ್; ಮಂಗಳೂರಿನಲ್ಲಿ ನಾಲ್ವರ ಬಂಧನ, 54 ಲಕ್ಷ ರೂಪಾಯಿ ವಶ

ಇಂದು ಭುವನ್ ಮದುವೆ ಬೇರೆ ಯುವತಿಯೊಂದಿಗೆ ಧರ್ಮಸ್ಥಳದ ಶಿವಪಾರ್ವತಿ ಸಭಾಂಗಣದಲ್ಲಿ ನಡೆಯಲು ನಿಶ್ಚಯವಾಗಿದ್ದು, ಈ ಹಿನ್ನೆಲೆಯಲ್ಲಿ ಪದ್ಮಿನಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

fraud case against soldier in dharmashala

ಭುವನ್ ತನ್ನನ್ನು ಒಂದು ವರ್ಷದಿಂದ ಪ್ರೀತಿಸಿ, ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ ಎಂದು ಆರೋಪಿಸಿರುವ ಪದ್ಮಿನಿ, ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಈ ಹಿಂದೆಯೇ ದೂರು ನೀಡಿದ್ದಾರೆ. ಪ್ರಕರಣ ನ್ಯಾಯಾಲಯದ ಮುಂದಿದ್ದರೂ ಮದುವೆಯಾಗುತ್ತಿರುವ ಆರೋಪಿ ಭುವನ್ ವಿರುದ್ಧ ಇಂದು ಮತ್ತೆ ದೂರು ದಾಖಲಿಸಲಾಗಿದೆ.

English summary
A lady filed fraud case against soldier in Dharmasthala police station. Accused Bhuvan cheated padmini in the name of marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X