• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಳಿನ್ ಕುಮಾರ್ ನಗುವನ್ನು ಮಿಮಿಕ್ರಿ ಮಾಡೋಕೆ ಸಾಧ್ಯವೇ ಇಲ್ಲ; ಬಿ. ರಮಾನಾಥ್ ರೈ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 20: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರದ್ದು ಎನ್ನಲಾದ ಆಡಿಯೋ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದರೆ, ಕಾಂಗ್ರೆಸ್ ಮಾತ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿದೆ.

ನಳಿನ್ ಕುಮಾರ್ ಕಟೀಲ್‌ರದ್ದು ಎನ್ನಲಾದ ಆಡಿಯೋ ಬಗ್ಗೆ ಕರಾವಳಿಯಲ್ಲಿ ಕಟೀಲ್‌ರವರ ರಾಜಕೀಯ ವೈರಿ ಅಂತಾನೇ ಗುರುತಿಸಿರುವ ಮಾಜಿ ಸಚಿವ ಬಿ. ರಮಾನಾಥ್ ರೈ ಪ್ರತಿಕ್ರಿಯೆ ನೀಡಿದ್ದಾರೆ.

 ಸಿಎಂ ಯಡಿಯೂರಪ್ಪ ಬದಲಾವಣೆಗೆ ಮುರುಘಾ ಶರಣರ ಆಕ್ಷೇಪ ಸಿಎಂ ಯಡಿಯೂರಪ್ಪ ಬದಲಾವಣೆಗೆ ಮುರುಘಾ ಶರಣರ ಆಕ್ಷೇಪ

ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮಾನಾಥ್ ರೈ, "ಪತ್ರಕರ್ತರು ಆಡಿಯೋ ಬಗ್ಗೆ ಕೇಳಿದ ಪ್ರಶ್ನೆಗೆ ಪತ್ರಕರ್ತರನ್ನೇ ಪ್ರಶ್ನಿಸಿದ ರಮಾನಾಥ್ ರೈ, ನೀವೆಲ್ಲಾ ಮಂಗಳೂರಿನವರಲ್ಲವಾ? ಅವರ ಧ್ವನಿ ನಿಮಗೆ ಗೊತ್ತಿಲ್ಲವಾ?,'' ಅಂತಾ ಹೇಳಿದ್ದಾರೆ.

"ನಳಿನ್ ಕುಮಾರ್ ಕಟೀಲ್ ಧ್ವನಿ ಮಿಮಿಕ್ರಿ ಮಾಡುವ ಎಕ್ಸ್‌ಪರ್ಟ್ ನಮ್ಮಲ್ಲಿ ಇದ್ದಾರಾ? ಏನೇ ಮಿಮಿಕ್ರಿ ಮಾಡಿದರೂ ನಳಿನ್ ಕುಮಾರ್ ಕಟೀಲ್ ನಗು ಮಾತ್ರ ಮಿಮಿಕ್ರಿ ಮಾಡುವುದಕ್ಕೆ ಸಾಧ್ಯವೇ ಇಲ್ಲ,'' ಎಂದು ರಮಾನಾಥ್ ರೈ ಲೇವಡಿ ಮಾಡಿದ್ದಾರೆ.

English summary
Congress Leader and Former Minister B Ramanath Rai responded in Mangaluru about Nalin Kumar Kateel alleged Viral audio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X