ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸತೀಶ್ ಜಾರಕಿಹೊಳಿ ಬಗ್ಗೆ ಸಿದ್ದರಾಮಯ್ಯ ಕೊಟ್ಟ ಪ್ರತಿಕ್ರಿಯೆ ಇದು

|
Google Oneindia Kannada News

Recommended Video

ಸತೀಶ್ ಜಾರಕಿಹೊಳಿ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ | Oneindia Kannada

ಮಂಗಳೂರು, ಡಿಸೆಂಬರ್ 04: ಬಿಜೆಪಿಯವರು ವಾಮಮಾರ್ಗದಲ್ಲಿ ಅಧಿಕಾರ ಹಿಡಿಯೋಕೆ ಯತ್ನಿಸುತ್ತಿದ್ದಾರೆ. ಈಗಾಗಲೇ ಒಂದು ಸಾರಿ ಫೇಲ್ ಆಗಿದ್ದಾರೆ. ಈಗ ಮತ್ತೊಮ್ಮೆ ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ 104 ಸ್ಥಾನ ಇಟ್ಟುಕೊಂಡು ಮೆಜಾರಿಟಿ ಪ್ರೂವ್ ಮಾಡಕ್ಕಾಗಿಲ್ಲ . ಈಗ ಮತ್ತೆ ಪ್ರಯತ್ನ ಮಾಡ್ತಿದಾರೆ. ಜನ ಪಾಠ ಕಲಿಸ್ತಾರೆ . 25 ಕೋಟಿ ಕೊಡ್ತಾರಂತೆ, ಅಧಿಕಾರ ಕೊಡುತ್ತಾರಂತೆ , ಎಲ್ಲಿಂದ ಬಂತು ಹಣ ಇವರಿಗೆ? ಭ್ರಷ್ಟಾಚಾರದ ಹಣವದು . ನಾಚಿಕೆಯಾಗಲ್ವೇ ಇವರಿಗೆ ಸರಕಾರ ಬೀಳಿಸ್ತೇನೆ ಅನ್ನೋದಕ್ಕೆ ಎಂದು ಕಿಡಿಕಾರಿದರು.

ಆಪರೇಷನ್ ಕಮಲ : ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ!ಆಪರೇಷನ್ ಕಮಲ : ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ!

ಸತೀಶ್ ಜಾರಕಿಹೊಳಿ ರೆಸಾರ್ಟ್ ಗೆ ತೆರಳಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಜಾರಕಿಹೊಳಿಯವರು ರೆಸಾರ್ಟಿಗೆ ಹೋಗ್ಲೇ ಬಾರದೇ ? ಎಂದು ಪ್ರಶ್ನಿಸಿದರು. ಬಿಜೆಪಿಯವರು ಯಾವುದೇ ರೆಸಾರ್ಟಿಗೆ ಹೋಗಲ್ವೇ ? ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗೋದಿಲ್ಲ. ನಮ್ಮಲ್ಲಿ ಯಾವುದೇ ಶಾಸಕರಿಗೆ ಅಸಮಾಧಾನ ಇಲ್ಲ. ಎಲ್ಲರೂ ಒಗ್ಗಟ್ಟಿನಲ್ಲೇ ಇದ್ದೇವೆ. ಆದರೆ ನಿನ್ನೆ ಸೋಮವಾರ (ಡಿಸೆಂಬರ್ 03) ಜಾರಕಿಹೊಳಿ ಕೊಟ್ಟ ಹೇಳಿಕೆ ಸುಳ್ಳು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಅಸಮಾಧಾನ ಇರುವುದು ಸಾಮಾನ್ಯ

ಅಸಮಾಧಾನ ಇರುವುದು ಸಾಮಾನ್ಯ

ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಪಕ್ಷದ ಕೆಲವು ಶಾಸಕರಲ್ಲಿ ಅಸಮಾಧಾನ ಇರುವುದು ಸಾಮಾನ್ಯ. ಇದು ಎಲ್ಲಾ ಮುಖ್ಯಮಂತ್ರಿಗಳ ಸಮಯದಲ್ಲೂ ಇರುತ್ತದೆ ಅಷ್ಟೇ. ಆದರೆ ಸಿದ್ದರಾಮಯ್ಯ ಅವರ ಮೇಲೆ ಹೈಕಮಾಂಡ್ ಗೆ ದೂರು ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದರು.

ರೆಸಾರ್ಟ್ ಗೆ ಭೇಟಿ ನೀಡಿದ್ದು ನಿಜ

ರೆಸಾರ್ಟ್ ಗೆ ಭೇಟಿ ನೀಡಿದ್ದು ನಿಜ

ಬೆಳಗಾವಿ ರೆಸಾರ್ಟ್ ಗೆ ಭೇಟಿ ನೀಡಿದ್ದರ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ ರೆಸಾರ್ಟ್ ಗೆ ಭೇಟಿ ನೀಡಿದ್ದು ನಿಜ. ಮುಂದಿನ ದಿನಗಳಲ್ಲಿ ನಮ್ಮ ಶಾಸಕರನ್ನು ಕರೆದ್ಯೊಯವ ಉದ್ದೇಶದಿಂದ ಭೇಟಿ ನೀಡಲಾಗಿತ್ತು ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದ್ದರು.

ಸರ್ಕಾರ ಟೇಕ್ ಆಫ್ ಆಗಿಲ್ಲ ಅಂದಿದ್ದು ಆ ಅರ್ಥದಲ್ಲಿ ಅಲ್ಲ: ಸತೀಶ್ ಜಾರಕಿಹೊಳಿಸರ್ಕಾರ ಟೇಕ್ ಆಫ್ ಆಗಿಲ್ಲ ಅಂದಿದ್ದು ಆ ಅರ್ಥದಲ್ಲಿ ಅಲ್ಲ: ಸತೀಶ್ ಜಾರಕಿಹೊಳಿ

ಟೂರ್ ಮಾಡಲಿಕ್ಕೆ ನೋಡಿಕೊಂಡು ಬಂದೆ

ಟೂರ್ ಮಾಡಲಿಕ್ಕೆ ನೋಡಿಕೊಂಡು ಬಂದೆ

ಬೆಳಗಾವಿಯ ಸಾತೇರಿ ರೆಸಾರ್ಟ್ ಗೆ ಹೋಗಿದ್ದನ್ನು ಒಪ್ಪಿಕೊಂಡ ಸತೀಶ್ ಜಾರಕಿಹೊಳಿ, ಮುಂದೇ ನಮ್ಮ ಶಾಸಕರನ್ನುಟೂರ್ ಮಾಡಲಿಕ್ಕೆ ರೆಸಾರ್ಟ್ ನೋಡಿಕೊಂಡು ಬಂದಿದ್ದೆನೆ ವಿನಾಃ ಪಕ್ಷಾಂತರ ಮಾಡಲು ಕರೆದುಕೊಂಡು ಹೋಗುವುದಿಲ್ಲ ಎಂದು ಹೇಳಿದ್ದರು.

ಈಶ್ವರಪ್ಪ ಒಬ್ಬ ಮಹಾಪೆದ್ದ

ಈಶ್ವರಪ್ಪ ಒಬ್ಬ ಮಹಾಪೆದ್ದ

'ಸಿದ್ಧರಾಮಯ್ಯ ಅವಕಾಶವಾದಿ. ಬಿಜೆಪಿಗೆ ಬರ್ತಾರೆಂದು' ಈಶ್ವರಪ್ಪ ಹೇಳಿಕೆ ವಿಚಾರದ ಬಗ್ಗೆ ಮಂಗಳೂರಿನಲ್ಲಿ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ ಅವರು ಈಶ್ವರಪ್ಪನಿಗೆ ಮೆದುಳಿಲ್ಲ, ಬ್ರೈನ್ ಲೆಸ್ ಮ್ಯಾನ್. ಅವರ ಬಗ್ಗೆ ಏನೂ ಮಾತನಾಡಲ್ಲ. ಈಶ್ವರಪ್ಪ ಒಬ್ಬ ಮಹಾಪೆದ್ದ ಎಂದು ಛೇಡಿಸಿದರು.

ಬಿಜೆಪಿಗೆ ಕಷ್ಟ ಬಂದಾಗ ರಾಮ ನೆನಪಾಗುತ್ತಾನೆ: ಸಿದ್ದರಾಮಯ್ಯ ಬಿಜೆಪಿಗೆ ಕಷ್ಟ ಬಂದಾಗ ರಾಮ ನೆನಪಾಗುತ್ತಾನೆ: ಸಿದ್ದರಾಮಯ್ಯ

English summary
Former Chief Minister Siddaramaiah slams BJP over operation Kamala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X