ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಆಘಾತ: ಕುದುರೆಮುಖ ಅರಣ್ಯದಿಂದ ಒಕ್ಕಲೆಬ್ಬಿಸಲು ಸೂಚನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಪುತ್ತೂರು, ಏಪ್ರಿಲ್ 24: ಕೊರೊನಾ ಸಂಕಷ್ಟದ ನಡುವೆ ರಾಜ್ಯ ಸರ್ಕಾರದ ಜನರಿಗೆ ಮತ್ತೊಂದು ಗುನ್ನ ನೀಡಲು ಸಿದ್ಧತೆ ಮಾಡಿಕೊಂಡಿದೆ. ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಒಳಭಾಗದಲ್ಲಿ ವಾಸಿಸುತ್ತಿರುವ ಜನರು ಆದಷ್ಟು ಬೇಗ ಮನೆಗಳನ್ನು ತೆರವುಗೊಳಿಸಬೇಕು ಅಂತಾ ಅರಣ್ಯ ಸಚಿವ ಅರಂವಿದ ಲಿಂಬಾವಳಿ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅರವಿಂದ ಲಿಂಬಾವಳಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಒಟ್ಟು 1346 ಕುಟುಂಬಗಳು ವಾಸಿಸುತ್ತಿದೆ. ಇದರಲ್ಲಿ 626 ಕುಟುಂಬಗಳು ಈಗಾಗಲೇ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿವೆ. 720 ಕುಟುಂಬಗಳು ಒಪ್ಪಿಗೆ ನೀಡಲು ಇನ್ನೂ ಬಾಕಿ ಇದೆ.

ಕುಟುಂಬಗಳ ಮನವೊಲಿಸಲು ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳು ನಿರಂತರ ಕಾರ್ಯಕ್ರಮ ಗಳನ್ನು ಮಾಡುತ್ತಿದ್ದಾರೆ. ನಾಲ್ಕು ಜಿಲ್ಲೆಗಳ ವ್ಯಾಪ್ತಿಯ ಜನರು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಇದ್ದಾರೆ. ಎಲ್ಲರನ್ನೂ ಶೀಘ್ರದಲ್ಲೇ ಸ್ಥಳಾಂತರ ಮಾಡಲಾಗುವುದು ಅಂತಾ ಅರವಿಂದ ಲಿಂಬಾವಳಿ ಹೇಳಿದ್ದಾರೆ..

Forest Minister Arvind Limbavali gives shock to Kudremukh Residents

ಕಾಡುಗಳು ಇಲ್ಲದ ಡೀಮ್ಡ್ ಫಾರೆಸ್ಟ್ ಗಳನ್ನು ಜನರ ಉಪಯೋಗಕ್ಕೆ ನೀಡುವ ಯೋಜನೆಗಳು ಸರ್ಕಾರದ ಮುಂದಿದೆ. ಜನರ ಅವಶ್ಯಕತೆಗೆ ತಕ್ಕಂತೆ ಈ ಯೋಜನೆಗಳು ಜಾರಿಗೆ ಬರಲಿದೆ. ದಟ್ಟ ಕಾಡುಗಳಿರುವ ಪ್ರದೇಶಗಳನ್ನು ಉಳಿಸುವ ಪ್ರಯತ್ನಗಳು ನಡೆಯಲಿದೆ. ರಾಜ್ಯದ ಕಾಂಡ್ಲಾ ಕಾಡುಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲೂ ಯೋಜನೆ ಹಾಕಿಕೊಳ್ಳಲಾಗಿದೆ ಅಂತಾ ಅರವಿಂದ ಲಿಂಬಾವಳಿ ಹೇಳಿದ್ದಾರೆ..

Recommended Video

IPL ಗೆ ಗುಡ್ ಬೈ ಹೇಳಿದ T Natarajan | Oneindia Kannada

ಅರಣ್ಯ ಸಚಿವರ ಈ ಹೇಳಿಕೆ ಮೂಲ ನಿವಾಸಿಗಳಲ್ಲಿ ಆತಂಕವನ್ನು ಸೃಷ್ಟಿ ಮಾಡಿದ್ದು, ಒಕ್ಕಲೆಬ್ಬಿಸುವ ಭೂತ ಮತ್ತೆ ಕಾಡುವ ಭಯ ಜನರದ್ದಾಗಿದೆ. ಕೊರೊನಾ ತಂದ ಸಂಕಷ್ಟದಿಂದ ಮೇಲೆ ಬರಲು ಯತ್ನಿಸುವಾಗಲೇ ಸರ್ಕಾರದ ಈ ಗಧಾಪ್ರಹಾರ ಅರಣ್ಯವಾಸಿಗಳನ್ನು ದಿಕ್ಕೆಟ್ಟಿಸುವಂತೆ ಮಾಡಿದೆ.

English summary
Forest Minister Arvind Limbavali gives shock to Kudremukh Residents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X