ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದಲ್ಲಿ ವಿದೇಶಿ ಬೃಹತ್ ಹಡಗುಗಳಿಗೆ ಮೀನುಗಾರಿಕೆ ಅನುಮತಿ?

|
Google Oneindia Kannada News

ಮಂಗಳೂರು, ಜುಲೈ 30: ಭಾರತೀಯ ಮೀನುಗಾರಿಕಾ ಕ್ಷೇತ್ರಕ್ಕೆ ಭಾರೀ ಸಂಕಷ್ಟ ಎದುರಾಗುವ ಸೂಚನೆ ದೊರೆತಿದೆ. ಮೊದಲೇ ನಷ್ಟದೊಂದಿಗೆ ದಿನ ದೂಡುತ್ತಿರುವ ಮೀನುಗಾರರ ಗಾಯದ ಮೇಲೆ ಬರೆ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬೆಳವಣಿಗೆ ಮೀನುಗಾರಿಕಾ ಕ್ಷೇತ್ರಕ್ಕೆ ಮಾತ್ರವಲ್ಲದೇ, ದೇಶದ ಆಂತರಿಕ ಭದ್ರತೆಗೂ ಭಾರೀ ಆತಂಕ ತರುವ ಅಭಿಪ್ರಾಯ ವ್ಯಕ್ತವಾಗಿದೆ.

ಮುಂಬರುವ ದಿನಗಳಲ್ಲಿ ವಿದೇಶಿ ಬೃಹತ್ ಬೋಟ್‌ಗಳು ಭಾರತೀಯ ಸಮುದ್ರ ಸರಹದ್ದಿನೊಳಗೆ ಮೀನುಗಾರಿಕೆ ನಡೆಸಲಿರುವ ಸಂಗತಿ ಈ ಆತಂಕಕ್ಕೆ ಕಾರಣವಾಗಿದೆ. ಕೇಂದ್ರದಿಂದ 148 ವಿದೇಶಿ ಬೃಹತ್ ಬೋಟ್‌ಗಳಿಗೆ ಭಾರತೀಯ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸಲು ಅನುಮತಿ ದೊರಕಿದೆ. ಜಪಾನ್, ತೈವಾನ್‌ ಮುಂತಾದ ದೇಶಗಳಿಗೆ ಈ ಅನುಮತಿ ದೊರಕಿದ್ದು, 100 ಬೋಟ್‌ಗಳು ವಿಶಾಖಪಟ್ಟಣದಿಂದ ಹಾಗೂ ಉಳಿದವು ಮದ್ರಾಸ್ ಮತ್ತು ಒಡಿಶಾ ಬಂದರಿನಿಂದ ಕಾರ್ಯನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.

 ಕರಾವಳಿಯಲ್ಲಿ ಅವಧಿಗೂ ಮುನ್ನವೇ ದಡ ಸೇರಿದ ಮೀನುಗಾರಿಕಾ ದೋಣಿಗಳು! ಕರಾವಳಿಯಲ್ಲಿ ಅವಧಿಗೂ ಮುನ್ನವೇ ದಡ ಸೇರಿದ ಮೀನುಗಾರಿಕಾ ದೋಣಿಗಳು!

ಈ ವಿಷಯ ಭಾರತೀಯ ಮೀನುಗಾರರ ಕಣ್ಣು ಕೆಂಪಾಗಿಸಿದೆ. ಮೀನುಗಾರರು ಮೊದಲೇ ನಷ್ಟದಲ್ಲಿದ್ದಾರೆ. ಇನ್ನು ವಿದೇಶಿ ಬೋಟ್‌ಗಳಿಗೆ ಎಂಟ್ರಿ ಕೊಟ್ರೆ ಭಾರತೀಯ ಮೀನುಗಾರರ ಗತಿಯೇನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Foreign Fishing Boats In India

ಅರಬ್ಬೀ ಸಮುದ್ರದಲ್ಲಿ 200 ನಾಟೇಕಲ್ ಮೈಲ್‌ನಷ್ಟು ದೂರಕ್ಕೆ ಭಾರತೀಯ ಮೀನುಗಾರರಿಗೆ ಮೀನುಗಾರಿಕೆಗೆ ಅವಕಾಶವಿದೆ.‌ ನಂತರ ಅಂತರಾಷ್ಟ್ರೀಯ ಗಡಿಯಾಗಿರುವುದರಿಂದ ಭಾರತೀಯ ಮೀನುಗಾರರು ಅದನ್ನು ದಾಟುವ ಹಾಗಿಲ್ಲ. ಇತರ ದೇಶಗಳ ಮೀನುಗಾರರು ಕೂಡ ಭಾರತದ 200 ನಾಟೇಕಲ್ ಮೈಲ್ ಒಳಗೆ ಪ್ರವೇಶ ಮಾಡುವಂತಿಲ್ಲ. ಇಷ್ಟು ದೂರಕ್ಕೆ ತೆರಳುವುದು ಅಪಾಯವಾದ್ದರಿಂದ, ಭಾರತೀಯ ಮೀನುಗಾರರು ಈ ವ್ಯಾಪ್ತಿಯ ಒಳಗೆಯೇ ಮೀನುಗಾರಿಕೆ ನಡೆಸಿ‌ ಹಿಂತಿರುಗುತ್ತಾರೆ. ವಿದೇಶಿ ಬೋಟ್ ಗಳು ಹೆಚ್ಚು ಮೀನುಗಳನ್ನು ಹಿಡಿಯುವಲ್ಲಿ ಸಫಲವಾಗಬಹುದು.

ಭಾರತೀಯ ವ್ಯಾಪ್ತಿಯ ಆಳ ಸಮುದ್ರದಲ್ಲಿ ಶಾರ್ಕ್, ಕಿಂಗ್ ಫಿಶ್, ಟ್ಯೂನಾ ಮುಂತಾದ ದೊಡ್ಡ ಹಾಗೂ ಬೆಲೆ ಬಾಳುವ ಮೀನುಗಳನ್ನು ಹಿಡಿದು, ಸಮುದ್ರದ ನಡುವೆಯೇ ಅವುಗಳನ್ನು ಪ್ರೊಸೆಸಿಂಗ್ ನಡೆಸಿ, ಅಲ್ಲಿಂದಲೇ ರಫ್ತು ನಡೆಸಲಾಗುತ್ತದೆ.

ಮೀನುಗಾರಿಕೆಗೆ ವಿದಾಯ : ಕರ್ನಾಟಕ ಕರಾವಳಿಯ ಪಾಲಿಗೆ ಕರಾಳ ವರ್ಷ!ಮೀನುಗಾರಿಕೆಗೆ ವಿದಾಯ : ಕರ್ನಾಟಕ ಕರಾವಳಿಯ ಪಾಲಿಗೆ ಕರಾಳ ವರ್ಷ!

ಜಪಾನ್ ಹಾಗೂ ತೈವಾನ್ ದೇಶಗಳಿಗೆ ಅನುಮತಿ ದೊರಕಿರುವಂತೆ ಚೀನಾದ 8 ಬೃಹತ್ ಬೋಟ್‌ಗಳು ಕೂಡಾ ಪ್ರವೇಶ ಪಡೆಯುತ್ತಿರುವ ಮಾಹಿತಿಯಿದೆ. ಈ ಬಗ್ಗೆ ಕೇಂದ್ರದ ಸಂಬಂಧಪಟ್ಟ ಇಲಾಖೆಯಲ್ಲಿ ಪ್ರಶ್ನಿಸಿದಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಕರಾವಳಿಯಲ್ಲಿ ಲೈಟ್ ಫಿಶಿಂಗ್ ನಿಷೇಧ, ನಿರಾಳರಾದ ಪಾರಂಪರಿಕ ಮೀನುಗಾರರುಕರಾವಳಿಯಲ್ಲಿ ಲೈಟ್ ಫಿಶಿಂಗ್ ನಿಷೇಧ, ನಿರಾಳರಾದ ಪಾರಂಪರಿಕ ಮೀನುಗಾರರು

ಆದರೆ ಯಾವುದೇ ವಿದೇಶಿ ಬೋಟ್‌ಗಳು ಭಾರತದ ಸಮುದ್ರ ಪ್ರವೇಶಿಸಿ ಇಲ್ಲಿನ ಬಂದರಿನಿಂದ ಕಾರ್ಯನಿರ್ವಹಿಸಿದಲ್ಲಿ ಇಲ್ಲಿನ ಸುರಕ್ಷತೆಗೆ ಸಂಬಂಧಿಸಿದಂತೆ ಅತಿ ಸೂಕ್ಷ್ಮ ಮಾಹಿತಿಗಳು ಶತ್ರು ರಾಷ್ಟ್ರಗಳಿಗೆ ಸುಲಭವಾಗಿ ದೊರಕಲಿದೆ ಎಂಬ ಕಳವಳ ವ್ಯಕ್ತವಾಗಿದೆ.

English summary
Foreign boats will be fishing in the Indian Ocean in the coming days. So the Indian fishery industry may face problems due to this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X