ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಳ್ಳಾಲದಲ್ಲಿ ಹಾಕಲಾಗಿದ್ದ ವಿವಾದಿತ ಫ್ಲೆಕ್ಸ್ ತೆರವು:ಪ್ರಕರಣ ದಾಖಲು

|
Google Oneindia Kannada News

ಮಂಗಳೂರು, ಫೆಬ್ರವರಿ 19: ಮಂಗಳೂರು ಹೊರವಲಯದ ಉಳ್ಳಾಲ ಪ್ರದೇಶದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಹಾಕಿದ್ದ ಫ್ಲೆಕ್ಸ್ ಒಂದು ವಿವಾದಕ್ಕೆ ಕಾರಣವಾಗಿದೆ. ವಿವಾದಿತ ಫ್ಲೆಕ್ಸ್ ನ್ನು ಉಳ್ಳಾಲ ಪೊಲೀಸರು ತೆರವುಗೊಳಿಸಿದ್ದು, ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಉಳ್ಳಾಲದ ಬೈಲ್ ನಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳ ಅಳವಡಿಸಿದ ಫ್ಲೆಕ್ಸ್ ನ್ನು ಉಳ್ಳಾಲ ಪೊಲೀಸರು ತೆರವುಗೊಳಿಸಿದ್ದಾರೆ. ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭದ್ರತಾ ಪಡೆಯ ವಾಹನಗಳ ಮೇಲೆ ಉಗ್ರರು ದಾಳಿ ನಡೆಸಿದ್ದ ಕೃತ್ಯಕ್ಕೆ ಸಂಬಂಧಿಸಿ 'ವಿಶ್ವಹಿಂದೂ ಪರಿಷತ್ ಬಜರಂಗದಳ' ಹೆಸರಿನಲ್ಲಿ ಉಳ್ಳಾಲ ಬೈಲ್ ನಲ್ಲಿ ಫ್ಲೆಕ್ಸ್ ಒಂದನ್ನು ಹಾಕಲಾಗಿತ್ತು.

ವಿವಾದಕ್ಕೆ ಗುರಿಯಾದ 'ಅಮ್ಮನೆಡೆಗೆ ನಮ್ಮ ನಡಿಗೆ' ಕಾರ್ಯಕ್ರಮವಿವಾದಕ್ಕೆ ಗುರಿಯಾದ 'ಅಮ್ಮನೆಡೆಗೆ ನಮ್ಮ ನಡಿಗೆ' ಕಾರ್ಯಕ್ರಮ

ಈ ಪ್ಲೆಕ್ಸ್ ನಲ್ಲಿ 'ದೇಶದ ಯೋಧರ ಸಾವಲ್ಲೂ ಅಲ್ಪಸಂಖ್ಯಾತರ ನಗು' ಎಂಬ ಶೀರ್ಷಿಕೆ ಬರೆದಿರುವುದು ವಿವಾದಕ್ಕೆ ಕಾರಣವಾಗಿದೆ. 'ಶತ್ರುಗಳು ದೇಶದ ಹೊರಗಿಲ್ಲ- ದೇಶದ ಒಳಗಡನೇ ಇದ್ದಾರೆ' ಎಂದು ಬರೆಯಲಾಗಿರುವುದು ಭಾರೀ ವಿರೋಧಕ್ಕೆ ಕಾರಣವಾಗಿತ್ತು.

Flex controversy in Ullala

ಇದು ಪರಿಸರದಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ಸ್ಥಳೀಯ ಸಂಘಟನೆಗಳ ಪ್ರಮುಖರು ತಕ್ಷಣ ಉಳ್ಳಾಲ ಪೊಲೀಸರ ಗಮನ ಸೆಳೆದ ಕಾರಣ ಉಳ್ಳಾಲ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಿವಾದಿತ ಫ್ಲೆಕ್ಸ್ ತೆರವುಗೊಳಿಸಿದ್ದಾರೆ.

 ಮೋದಿ ಹೆಸರು ಉಲ್ಲೇಖಿಸಿದ ಯಕ್ಷಗಾನ ಪಾತ್ರಧಾರಿ ವಿರುದ್ಧ ಕಾಂಗ್ರೆಸ್ ಕೆಂಗಣ್ಣು ಮೋದಿ ಹೆಸರು ಉಲ್ಲೇಖಿಸಿದ ಯಕ್ಷಗಾನ ಪಾತ್ರಧಾರಿ ವಿರುದ್ಧ ಕಾಂಗ್ರೆಸ್ ಕೆಂಗಣ್ಣು

ಈ ಪ್ರಚೋದನಾಕಾರಿನ ಫ್ಲೆಕ್ಸ್ ಹಾಕಿದ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಯಲ್ಲಿ ಎಸ್ ಡಿ ಪಿ ಐ ದೂರು ದಾಖಲಿಸಿದೆ. ಫ್ಲೆಕ್ಸ್ ಅಳವಡಿಸಿದವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಎಸ್ ಡಿ ಪಿ ಐ ಒತ್ತಾಯಿಸಿದೆ.

English summary
Flex banner about Pulwama terror attack put up by VHP Bajarangadal now become controversial. This flex banner removed by Ullala police and case registered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X