ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ನಿಲ್ಲದ ನೈತಿಕ ಪೊಲೀಸ್ ಗಿರಿ

By ಐಸಾಕ್ ರಿಚರ್ಟ್, ಮಂಗಳೂರು
|
Google Oneindia Kannada News

ಮಂಗಳೂರು, ಅಕ್ಟೋಬರ್ 07 : ಸ್ಮಾರ್ಟ್ ಸಿಟಿಯಾಗುತ್ತಿರುವ ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿಗೆ ತಡೆ ಬೀಳುವ ಲಕ್ಷಣಗಳು ಕಾಣುತ್ತಿಲ್ಲ. ಉಳ್ಳಾಲ ಕಡೆಗೆ ವಿಹಾರಕ್ಕೆ ತೆರಳಿದ ಮಂಗಳೂರು ವಿವಿಯ ವಿದ್ಯಾರ್ಥಿಗಳನ್ನು ಹಿಂಬಾಲಿಸಿ ಅವರ ಮೇಲೆ ಹಲ್ಲೆ ನಡೆಸುತ್ತಿದ್ದ ಐದು ಜನರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾದ ಬಳ್ಳಾರಿ ಮೂಲದ ರಮೇಶ, ಪುತ್ತೂರು ನಿವಾಸಿ ಶಫೀವುಲ್ಲಾ ಸೇರಿದಂತೆ ಇಬ್ಬರು ಹಿಂದು ಹಾಗೂ ಒಬ್ಬಳು ಮುಸ್ಲಿಂ ವಿದ್ಯಾರ್ಥಿನಿ ಮಂಗಳವಾರ ಉಳ್ಳಾಲ ಕಡೆಗೆ ವಿಹಾರಕ್ಕೆಂದು ತೆರಳಿದ್ದರು. [ನೈತಿಕ ಪೊಲೀಸ್ ಗಿರಿ ವಿರುದ್ಧ ಮಂಗಳೂರಲ್ಲಿ ಜಾಥಾ]

moral policing

ಸೋಮೇಶ್ವರ ದೇವಸ್ಥಾನ, ಉಳ್ಳಾಲ ದರ್ಗಾ ಮತ್ತು ಮೊಗವೀರಪಟ್ಣ ಸಮುದ್ರ ತೀರಕ್ಕೆ ವಿದ್ಯಾರ್ಥಿಗಳು ವಿಹಾರಕ್ಕೆ ತೆರಳಿದ್ದರು. ಅಲ್ಲಿ ಎಲ್ಲರೂ ಜತೆಯಾಗಿ ಆಟವಾಡುತ್ತಾ, ಸೆಲ್ಫೀ ಕ್ಲಿಕ್ಕಿಸುವಲ್ಲಿ ನಿರತರಾಗಿದ್ದರು. ಇದನ್ನು ಸ್ಥಳೀಯ ಯುವಕರು ಗಮನಿಸಿದ್ದರು. ಅಲ್ಲದೆ ತಂಡದಲ್ಲಿ ಮುಸ್ಲಿಂ ಯುವಕರು ಇರುವ ಬಗ್ಗೆಯೂ ಯುವಕರಿಗೆ ಮಾಹಿತಿ ತಿಳಿದಿತ್ತು. [ಮಂಗಳೂರಿನಲ್ಲಿ ಫೇಸ್ ಬುಕ್ ಉಗ್ರರು!]

ಈ ವಿದ್ಯಾರ್ಥಿಗಳ ತಂಡವನ್ನು ಯುವಕರ ಗುಂಪು ಹಿಂಬಾಲಿಸಲು ಆರಂಭಿಸಿತು. ಇದರಿಂದ ಗಾಬರಿಗೊಂಡ ಅವರು ಬಸ್ ಹತ್ತಿ ವಿವಿಗೆ ತೆರಳಿದರು. ಆದರೆ, ಪಟ್ಟುಬಿಡದ ಯುವಕರ ಗುಂಪು ಆಟೋ ಏರಿ ಅವರನ್ನು ಹಿಂಬಾಲಿಸಿದರು. ವಿದ್ಯಾರ್ಥಿಗಳ ತಂಡದಲ್ಲಿದ್ದ ರಮೇಶನನ್ನು ಹಿಡಿದ ಗುಂಪು ಶಫೀವುಲ್ಲಾ ಇರುವ ರೂಮು ತೋರಿಸುವಂತೆ ಕರೆದುಕೊಂಡು ಬಂದಿದ್ದಾರೆ.

ಕ್ಯಾಂಪಸ್‌ನಲ್ಲಿ ಸಿಕ್ಕ ಶಫೀವುಲ್ಲಾಗೆ ಯುವಕರ ತಂಡ ಥಳಿಸಲು ಆರಂಭಿಸಿದೆ. ಇದನ್ನು ನೋಡಿದ ಇತರ ವಿದ್ಯಾರ್ಥಿಗಳು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೊಗವೀರಪಟ್ಣದ ನಿವಾಸಿಗಳಾದ ಸುಹಾನ್, ಸುನಿಲ್, ಪ್ರಜ್ವಲ್, ಅಭಿಲಾಷ್, ಚಂದ್ರ ಎಂಬುವವರನ್ನು ಬಂಧಿಸಿದ್ದಾರೆ.

English summary
In a immoral rowdyism, a group of postgraduate students of Mangaluru university were reportedly chased and one of them beaten up by a gang of five members on October 6. Konaje police arrested five members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X