ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಣ್ಣನ ಬಜೆಟ್ ಬಗ್ಗೆ ಅಸಮಾಧಾನ ಹೊರಹಾಕಿದ ಮೀನುಗಾರರು

|
Google Oneindia Kannada News

Recommended Video

Karnataka Budget 2019: ಕುಮಾರಣ್ಣನ ಬಜೆಟ್ ಬಗ್ಗೆ ಅಸಮಾಧಾನ ಹೊರಹಾಕಿದ ಮೀನುಗಾರರು | Oneindia Kannada

ಮಂಗಳೂರು, ಫೆಬ್ರವರಿ 08: ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ವಿಧಾನ ಸೌಧದಲ್ಲಿ 2019-20 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಆದರೆ ಬಜೆಟ್ ನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಅಭಿವೃಧ್ಧಿಗೆ 125 ಕೋಟಿ ರೂಪಾಯಿ ಅನುದಾನ ಹೊರತುಪಡಿಸಿದರೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕವಾಗಿ ಯಾವುದೇ ಹೊಸ ಯೋಜನೆ ಘೋಷಣೆ ಅಗಿಲ್ಲದಿರುವುದು ದಕ್ಷಿಣ ಕನ್ನಡದ ಜನರಲ್ಲಿ ನಿರಾಶೆ ಮೂಡಿಸಿದೆ.

ಇಂದು ಮಂಡಿಸಿದ ಬಜೆಟ್ ನಲ್ಲಿ ಕರಾವಳಿ ಮೀನುಗಾರರಿಗೂ ಕೆಲ ಯೋಜನೆಗಳನ್ನು ಘೋಷಿಸಲಾಗಿದೆ. ಮೀನುಗಾರಿಕಾ ದೋಣಿಗಳಿಗೆ ಇಸ್ರೋ ಅಧಿಕೃತಗೊಳಿಸಿರುವ ಡಿಎಟಿ ಉಪಕರಣ ಅಳವಡಿಸಿಕೊಳ್ಳಲು ಶೇ.50ರಷ್ಟು ಸಹಾಯಧನ. ಅದಕ್ಕಾಗಿ 3 ಕೋಟಿ ರೂಪಾಯಿ ಅನುದಾನ. ಮತ್ಸ್ಯಾಶ್ರಯ ಯೋಜನೆ ಮುಂದುವರಿಕೆ, ಪ್ರಗತಿಯಲ್ಲಿರುವ 2,500 ಮನೆಗಳನ್ನು ಪೂರ್ಣಗೊಳಿಸಲು ಕ್ರಮ.

ಕುಮಾರಸ್ವಾಮಿ ಬಜೆಟ್: ಸಾಲಮನ್ನಾ ಯೋಜನೆಗೆ 12,650 ಕೋಟಿಕುಮಾರಸ್ವಾಮಿ ಬಜೆಟ್: ಸಾಲಮನ್ನಾ ಯೋಜನೆಗೆ 12,650 ಕೋಟಿ

ಉಡುಪಿ ಜಿಲ್ಲೆಯ ಮಲ್ಪೆ ಕಡಲ ತೀರದ ಮೀನುಗಾರಿಕೆ ಚಟುವಟಿಕೆಗೆ ಜೆಟ್ಟಿ ನಿರ್ಮಾಣ , ತ್ಯಾಜ್ಯ ನಿರ್ವಹಣಾ ಘಟಕ ಹಾಗು ಇತರೆ ನೈರ್ಮಲ್ಯ ಸೌಲಭ್ಯಗಳನ್ನು ಅಭಿವೃದ್ಧಿಗೆ 15 ಕೋಟಿ ರೂಪಾಯಿ ಅನುದಾನ. ರಾಜ್ಯದಲ್ಲಿ ಡೀಸೆಲ್ ಮತ್ತು ಸಿಮೆಎಣ್ಣೆ ಪಾಸ್ ಬುಕ್ ಪಡೆದಿರುವ ದೋಣಿಗಳಿಗೆ ಡೀಸೆಲ್ ಮತ್ತು ಸಿಮೆಎಣ್ಣೆ ಸಬ್ಸಿಡಿ ನೀಡಲು 148.5 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ.

ಆದರೆ ಇಂದಿನ ಬಜೆಟ್ ನಲ್ಲಿ ಮೀನುಗಾರಿಕಾ ಕ್ಷೇತ್ರಕ್ಕೆ ಘೋಷಿಸಲಾದ ಯೋಜನೆಯ ಬಗ್ಗೆ ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮೀನುಗಾರ ಮುಖಂಡರ ಪ್ರತಿಕ್ರಿಯೆ ಹೀಗಿದೆ...

 ಕೃಷಿ ಇಲಾಖೆ ವ್ಯಾಪ್ತಿಗೆ ತರಬೇಕಿತ್ತು

ಕೃಷಿ ಇಲಾಖೆ ವ್ಯಾಪ್ತಿಗೆ ತರಬೇಕಿತ್ತು

ಮೀನುಗಾರ ಮುಖಂಡ ರಾಜರತ್ನ ಸನೀಲ್ ಇಂದಿನ ಬಜೆಟ್ ಸಾಧಾರಣ ಬಜೆಟ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೀನುಗಾರಿಕಾ ದೋಣಿಗಳಿಗೆ ಇಸ್ರೋ ಅಧಿಕೃತಗೊಳಿಸಿರುವ ಡಿಎಟಿ ಉಪಕರಣ ಅಳವಡಿಸಿಕೊಳ್ಳಲು ಶೇ. 50ರಷ್ಟು ಸಹಾಯಧನ ನೀಡುವ ಯೋಜನೆ ಒಳ್ಳೆಯ ನಿರ್ಧಾರ. ಆದರೆ ಜನರಿಗೆ ಅತ್ಯಂತ ಹೆಚ್ಚಿನ ಪೌಷ್ಟಿಕಾಂಶವುಳ್ಳ ಮೀನಿನಂತಹ ಆಹಾರ ಒದಗಿಸುವವರು ಮೀನುಗಾರರರು. ಈ ಹಿನ್ನೆಲೆಯಲ್ಲಿ ಮೀನುಗಾರಿಕಾ ಕ್ಷೇತ್ರವನ್ನು ಕೃಷಿ ಇಲಾಖೆ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆ ಇಡಲಾಗಿತ್ತು. ಸಾಲ ಮನ್ನಾ ಯೋಜನೆ ಕೇವಲ ಕೃಷಿ ಚಟುವಟಿಕೆಗೆ ಮಾತ್ರ ಸೀಮಿತವಾಗಿದೆ. ಈ ಸಾಲ ಮನ್ನಾ ಯೋಜನೆ ಮೀನುಗಾರಿಕಾ ಕ್ಷೇತ್ರಕ್ಕೂ ವಿಸ್ತರಿಸಬೇಕು ಎಂಬ ಬೇಡಿಕೆ ಇಡಲಾಗಿತ್ತು. ಆದರೆ ಈ ಬಜೆಟ್ ನಲ್ಲಿ ಈ ಬೇಡಿಕೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಸೀಮೆಎಣ್ಣೆ ಸಬ್ಸಿಡಿ ಬೇಡಿಕೆ ಈಡೇರಿಲ್ಲ

ಸೀಮೆಎಣ್ಣೆ ಸಬ್ಸಿಡಿ ಬೇಡಿಕೆ ಈಡೇರಿಲ್ಲ

ಡೀಸೆಲ್ ಮತ್ತು ಸೀಮೆಎಣ್ಣೆ ಪಾಸ್ ಬುಕ್ ಪಡೆದಿರುವ ದೋಣಿಗಳಿಗೆ ಡೀಸೆಲ್ ಮತ್ತು ಸೀಮೆಎಣ್ಣೆ ಸಬ್ಸಿಡಿ ವಿಚಾರದಲ್ಲೂ ಬೇಡಿಕೆ ಈಡೇರಿಲ್ಲ ಎಂದು ಹೇಳಿದ ರಾಜರತ್ನ ಸನೀಲ್, ಈಗ ಸಬ್ಸಿಡಿ ದೊರೆಯುತ್ತಿರುವುದು ಕೇವಲ 9 ಸಾವಿರ ಲೀಟರ್ ಡೀಸೆಲ್ ಗೆ ಮಾತ್ರ. ಆದರೆ ನಮ್ಮ ಬೇಡಿಕೆ ಇದ್ದದ್ದು 15 ಸಾವಿರ ಲೀಟರ್ ವರೆಗೆ ಸಬ್ಸಿಡಿ ನೀಡಬೇಕು ಎಂದು. ಆದರೆ ಅದು ಜಾರಿಗೆ ಬಂದಿಲ್ಲ ಎಂಬುದು ವಿಷಾದನೀಯ. ಅದಲ್ಲದೇ ಮಂಗಳೂರಿನ ಮೀನುಗಾರಿಕಾ ಜೆಟ್ಟಿಯಲ್ಲಿ ಮೂಲಭೂತ ಸೌಕರ್ಯ, ನೈರ್ಮಲ್ಯ ಸೌಲಭ್ಯಗಳನ್ನು ಬಜೆಟ್ ನಲ್ಲಿ ನಿರ್ಲಕ್ಷಿಸಿರುವುದು ಬೇಸರ ತಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಬಜೆಟ್ 2019: ಎಚ್.ಡಿ ಕುಮಾರಸ್ವಾಮಿಯವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ..

 ರೈತರ ಮೊಗದಲ್ಲಿ ಮಂದಹಾಸ

ರೈತರ ಮೊಗದಲ್ಲಿ ಮಂದಹಾಸ

ಈ ನಡುವೆ ಬಜೆಟ್ ನಲ್ಲಿ ಕರಾವಳಿ, ಮಲೆನಾಡಿನಲ್ಲಿ ಸೊರಗುತ್ತಿರುವ ಭತ್ತದ ಬೆಳೆಗೆ ಪ್ರೋತ್ಸಾಹ ಧನವಾಗಿ ಪ್ರತಿ ಹೆಕ್ಟೇರ್ ಗೆ 7,500 ರೂಪಾಯಿ ದೊರಕಿರುವುದು ಈ ಭಾಗದ ಭತ್ತ ಬೆಳೆಯುವ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

 ನೀರಾವರಿ ಸೌಲಭ್ಯ ಯೋಜನೆ ಘೋಷಣೆ

ನೀರಾವರಿ ಸೌಲಭ್ಯ ಯೋಜನೆ ಘೋಷಣೆ

ಅದಲ್ಲದೇ, ಈ ಬಾರಿಯ ಬಜೆಟ್ ನಲ್ಲಿ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂಪಾಯಿ, ಉಡುಪಿ ಜಿಲ್ಲೆಯ ಕೆರೆಗಳನ್ನು ತುಂಬಿಸಲು 40 ಕೋಟಿ ರೂಪಾಯಿ ಅನುದಾನ, ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ 1500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ (ಎಣ್ಣೆ ಹೊಳೆ ಯೋಜನೆ) ಯೋಜನೆ ಘೋಷಣೆಯಾಗಿರುವುದು ಕಂಡುಬಂದಿದೆ.

ರಾಜ್ಯ ಬಜೆಟ್: ಸಣ್ಣ ರೈತರಿಗೆ ಸಿಗಲಿದೆ ಆಭರಣಗಳ ಮೇಲೆ ಸಾಲ

English summary
Karnataka budget 2019:Fishermen have expressed dissatisfaction about the HD Kumaraswamy Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X