ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ: ಪ್ರಶಂಸಿಸಿದ ಮೀನುಗಾರ ಮುಖಂಡರು

|
Google Oneindia Kannada News

ಮಂಗಳೂರು, ಫೆಬ್ರವರಿ 01: ಇಂದಿನ ಕೇಂದ್ರ ಬಜೆಟ್ ಮಂಡನೆಯಲ್ಲಿ ಹಣಕಾಸು ಸಚಿವ ಪಿಯೂಶ್ ಗೋಯಲ್ ಮೀನುಗಾರಿಕಾ ವಲಯಕ್ಕೆ ಪ್ರತ್ಯೇಕ ಇಲಾಖೆ ಘೋಷಿಸಿದ್ದಾರೆ. ಕೇಂದ್ರದ ಈ ನಡೆ ಮೀನುಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ದೇಶದ 9 ರಾಜ್ಯಗಳಲ್ಲಿನ 8 ಕೋಟಿಗೂ ಅಧಿಕ ಮೀನುಗಾರರ ಸಮಸ್ಯೆಗೆ ಇದರಿಂದ ಪರಿಹಾರ ದೊರಕಲಿದೆ ಎಂದು ಅಂದಾಜಿಸಲಾಗಿದೆ.

ಕೇಂದ್ರದಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಸೃಷ್ಟಿಸುವ ಕುರಿತು ಮೀನುಗಾರ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಮೀನುಗಾರಿಕಾ ಫೆಡರೇಷನ್ ನ ಸದಸ್ಯ ವಾಸುದೇವ ಬೋಳೂರು ಕೇಂದ್ರದ ನಿರ್ಧರವನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.

ಆದಾಯ ತೆರಿಗೆ ಮಿತಿ ಏರಿಕೆ: ಮಧ್ಯಮ ವರ್ಗ ಫುಲ್ ಜೋಶ್!ಆದಾಯ ತೆರಿಗೆ ಮಿತಿ ಏರಿಕೆ: ಮಧ್ಯಮ ವರ್ಗ ಫುಲ್ ಜೋಶ್!

ಕೇಂದ್ರ ದಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಸ್ಥಾಪಿಸುವ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದೇವೆ. ಈ ಬಗ್ಗೆ ಹೋರಾಟ ಕೂಡ ನಡೆಸಿದ್ದೇವೆ . ಹಲವಾರು ವರ್ಷಗಳ ಮೀನುಗಾರರ ಕನಸು ಈಗ ನನಸಾಗಿದೆ ಎಂದು ತಿಳಿಸಿದ್ದಾರೆ.

Fisherman happy about central fisheries department

ಕೇಂದ್ರ ದಲ್ಲಿ ಪ್ರತ್ಯೇಕ ಮೀನುಗಾರಿಕಾ ಇಲಾಖೆ ಸ್ಥಾಪನೆ ಕುರಿತು ಮೀನುಗಾರಿಕಾ ಮುಖಂಡ ರಾಜರತ್ನ ಸನಿಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಈ ನಿರ್ಧಾರ ಒಂದು ಉತ್ತಮ ಹೆಜ್ಜೆ . ಇದು ಎಲ್ಲಾ ರೀತಿಯಲ್ಲೂ ದೇಶದ ಮೀನುಗಾರರಿಗೆ ಸಹಕಾರಿಯಾಗಲಿದೆ.

ಕೇಂದ್ರ ಬಜೆಟ್ 2019: ಪಶುಸಂಗೋಪನೆ, ಮೀನುಗಾರಿಕೆಗೂ ಕೊಡುಗೆ

ಉದಾಹರಣೆಗೆ ಇತ್ತೀಚೆಗೆ ಕಣ್ಮರೆಯಾಗಿರುವ ಮಲ್ಪೆ ಮೀನುಗಾರರ ವಿಚಾರ ಇರಬಹುದು ಮತ್ತು ಲೈಟ್ ಫಿಶಿಂಗ್ , ಬುಲ್ ಟ್ರಾಲ್ ಫಿಶಿಂಗ್ ವಿಚಾರದಲ್ಲಿ ಭಾರೀ ಗೊಂದಲ ಏರ್ಪಟ್ಟಿದೆ. ಕರ್ನಾಟಕ ಹೊರತು ಪಡಿಸಿ ಕೇರಳ , ಗೋವಾ , ಮಹಾರಾಷ್ಟ್ರ ದಲ್ಲಿ ಲೈಟ್ ಫಿಶಿಂಗ್ ಮತ್ತು ಬುಲ್ ಟ್ರಾಲ್ ಫಿಶಿಂಗ್ ನಡೆಯುತ್ತಿದೆ.

ಮೋದಿ ಸರಕಾರದಿಂದ ಮಧ್ಯಮ ವರ್ಗೀಯ ಆದಾಯ ತೆರಿಗೆದಾರರಿಗೆ ಸೂಪರ್ ಗಿಫ್ಟ್ಮೋದಿ ಸರಕಾರದಿಂದ ಮಧ್ಯಮ ವರ್ಗೀಯ ಆದಾಯ ತೆರಿಗೆದಾರರಿಗೆ ಸೂಪರ್ ಗಿಫ್ಟ್

ಕರ್ನಾಟಕ ಕರಾವಳಿ ಯಲ್ಲಿ ಇದಕ್ಕೆ ಅನುಮತಿ ಇಲ್ಲ . ನಾವು ನಷ್ಟಮಾಡಿಕೊಂಡು ತಿರುಗುತ್ತಿದ್ದೆವೆ. ಕೇಂದ್ರ ದಲ್ಲಿ ಪ್ರತ್ಯೇಕ ಮೀನುಗಾರಿಕಾ ಇಲಾಖೆ ಸ್ಥಾಪಿಸಿದಲ್ಲಿ ಅವರು ರೂಪಿಸುವ ನಿರ್ಧಾರಗಳು ದೇಶದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗಲಿದೆ.ಮೀನುಗಾರರು ಎದುರಿಸುತ್ತಿರುವ ಸಮಸ್ಯೆ ನಿವಾರಣೆಗೆ ಈ ಇಲಾಖೆ ವೇದಿಗೆ ಕಲ್ಪಿಸಲಿದೆ ಎಂದು ರಾಜರತ್ನ ಸನಿಲ್ ಅಭಿಪ್ರಾಯ ಪಟ್ಟಿದ್ದಾರೆ.

English summary
In Union Budget finance minister Piyush Goyal announced separate fisheries department . Mangaluru fisherman leaders happy about separate fisheries department in central.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X