ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬುಡಮೇಲಾದ ಮೀನು ವ್ಯಾಪಾರ: ಸಾಮಾಜಿಕ ಜಾಲತಾಣದ ಮೊರೆಹೋದ ಮಹಿಳೆಯರು

|
Google Oneindia Kannada News

ಮಂಗಳೂರು, ಆಗಸ್ಟ್ 3: ಮೀನು ವ್ಯಾಪಾರ ಹಠಾತ್ ಕುಸಿತ ಕಂಡು ಆತಂಕಿತರಾದ ಮೀನುಗಾರ ಮಹಿಳೆಯರು ತಂತ್ರಜ್ಞಾನದ ಮೊರೆಹೋಗಿದ್ದಾರೆ. ವ್ಯಾಪಾರ ಕುಸಿತ ದಿಂದ ತಾವು ಅನುಭವಿಸುತ್ತಿರುವ ಕಷ್ಟ, ಎದುರಿಸುತ್ತಿರುವ ಸಮಸ್ಯೆ, ತಮ್ಮ ದುಗುಡಗಳನ್ನು ಮೀನುಗಾರ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ತಮ್ಮ ದುಗುಡವನ್ನು ವಿವರಿಸಿರುವ ವಿಡಿಯೋವನ್ನು ವಾಟ್ಸ್ ಅಪ್ ಮೂಖಾಂತರ ತಿಳಿಸುವ ಪ್ರಯತ್ನ ಪಟ್ಟಿದ್ದಾರೆ. ಮೀನುಗಾರ ಮಹಿಳೆಯರು ಇದೇ ಮೊದಲಬಾರಿಗೆ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಕರಾವಳಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮೀನುಗಳಿಗೆ ರಾಸಾಯನಿಕ ಲೇಪನವಾಗುತ್ತಿರುತ್ತಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಕರಾವಳಿಯಲ್ಲಿ ಮೀನು ವ್ಯಾಪಾರವೇ ಬುಡಮೇಲಾಗಿದೆ.

ಕರಾವಳಿಯ ಆಳ ಸಮುದ್ರದಲ್ಲಿ ಮತ್ತೆ ಕಡಲ ಮಕ್ಕಳ ಕಲರವ ಆರಂಭಕರಾವಳಿಯ ಆಳ ಸಮುದ್ರದಲ್ಲಿ ಮತ್ತೆ ಕಡಲ ಮಕ್ಕಳ ಕಲರವ ಆರಂಭ

ಮಳೆಗಾಲದ 2 ತಿಂಗಳ ಮೀನುಗಾರಿಕಾ ರಜೆಯ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ ದೋಣಿಗಳು ಸಮುದ್ರಕ್ಕೆ ಇಳಿದಿರಲಿಲ್ಲ. ಪರಿಣಾಮ ಮಳೆಗಾಲದಲ್ಲಿ ಮೀನಿನ ಅಭಾವದಿಂದಾಗಿ ದೂರದ ತಮಿಳುನಾಡು, ಕೇರಳ ಹಾಗೂ ಮಹರಾಷ್ಟ್ರದಿಂದ ಸಂಸ್ಕೃರಿಸಿ ಇಡಲಾಗಿದ್ದ ಮೀನುಗಳು ಕರಾವಳಿಯ ಮಾರುಕಟ್ಟೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು.

Fisher woman in Social Media

ಹೀಗೆ ಸಂಸ್ಕರಿಸಿ ಇಡಲಾದ ಮೀನುಗಳನ್ನು ಶವಾಗಾರದಲ್ಲಿ ಮನುಷ್ಯರ ಮೃತ ದೇಹ ಕೆಡದಂತೆ ಇಡಲು ಲೇಪಿಸಲಾಗುವ ಫಾರ್ಮಾಲಿನ್ ಎಂಬ ಲೇಪಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಪುಕಾರು ದಟ್ಟವಾಗಿ ಹರಡಿತ್ತು.

ಈ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಭಾರೀ ಕುಸಿತ ಕಂಡಿತ್ತು. ಮೀನುಗಾರಿಕಾ ಇಲಾಖೆ ಹಾಗೂ ಆಹಾರ ಇಲಾಖೆ ಮೀನುಗಳಲ್ಲಿ ರಾಸಾಯನಿಕ ಲೇಪನ ಮಾಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರೂ ಮೀನು ವ್ಯಾಪಾರ ಚೇತರಿಸಿಕೊಳ್ಳಲಿಲ್ಲ.

ಈಗ ಮತ್ತೇ ಮೀನುಗಾರಿಕಾ ಋತು ಆರಂಭವಾಗಿದೆ. ಮತ್ತೆ ಕಡಲ ಮಕ್ಕಳು ದೋಣಿಗಳನ್ನು ಸಮುದ್ರಕ್ಕೆ ಇಳಿಸಿದ್ದಾರೆ. ಆಳ ಸಮುದ್ರ ಮೀನುಗಾರಿಕೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಮಾರುಕಟ್ಟೆಗೆ ವಿಧ ವಿಧದ ತಾಜಾ ಮೀನುಗಳು ಬರುತ್ತಿವೆ. ಆದರೆ ಜನರು ಮಾತ್ರ ಮಾರುಕಟ್ಟೆಯಲ್ಲಿ ದೊರಕುತ್ತಿರುವ ಮೀನುಗಳ ಬಗ್ಗೆ ಸಂಶಯ ಪಡುತ್ತಲೇ ಇದ್ದಾರೆ.

ಮೀನುಗಳಿಗೆ ರಾಸಾಯನಿಕ ಲೇಪನದ ಆತಂಕದಿಂದ ಹೊರ ಬರದ ಹೆಚ್ಚಿನ ಜನರು ಮೀನು ಮಾರುಕಟ್ಟೆಯತ್ತ ತಲೆ ಹಾಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜೀವನ ನಿರ್ವಹಣೆಗೆ ಮೀನು ವ್ಯಾಪಾರವನ್ನೇ ನಂಬಿಕೊಂಡಿರುವ ಮೀನುಗಾರ ಮಹಿಳೆಯರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.

ನಷ್ಟ ದಿಂದ ಕಂಗೆಟ್ಟಿರುವ ಮೀನುಗಾರ ಮಹಿಳೆಯರು ತಮ್ಮ ನೋವನ್ನು ತಾವು ಅನುಭವಿಸುತ್ತಿರುವ ಸಮಸ್ಯೆ, ತಮಗಾಗುತ್ತಿರುವ ನಷ್ಟವನ್ನು ವಿವರಿಸಲು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಮೊದಲ ಬಾರಿಗೆ ಮೀನುಗಾರ ಮಹಿಳೆಯರು ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ದುಗುಡವನ್ನು ಜನರ ಮುಂದೆ ಇರಿಸಿದ್ದಾರೆ. ತಾವು ಮಾರುಕಟ್ಟೆಗೆ ತರುವ ಮೀನುಗಳಲ್ಲಿ ರಾಸಾಯನಿಕ ಲೇಪನ ಮಾಡಲಾಗಿಲ್ಲ.

ಮೀನುಗಾರಿಕಾ ಋತು ಆರಂಭವಾಗಿದ್ದು, ಮೀನುಗಾರರು ಹಿಡಿದುತರುವ ತಾಜಾ ಮೀನುಗಳನ್ನು ತಂದು ಮಾರಾಟ ಮಾಡುತ್ತಿದ್ದರೂ ಜನರು ಮಾತ್ರ ಮೀನು ಖರೀದಿಗೆ ಮುಂದಾಗದಿರುವುದರ ಕುರಿತು ವಿಷಾಧ ವ್ಯಕ್ತಪಡಿಸಿದ್ದಾರೆ. ತಾವು ತರುವ ತಾಜಾ ಮೀನುಗಳನ್ನು ಖರೀದಿಸುವಂತೆ ವಿನಂತಿಸಿದ್ದಾರೆ. ತುಳು ಭಾಷೆಯಲ್ಲಿ ಈ ವಿಡಿಯೋ ಚಿತ್ರಿಕರಿಸಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

English summary
Video of Fisher woman viral in Social media. In This video fisher woman explain their problems, loss due to market collapse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X