ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರೀ ದರ ಏರಿಕೆ, ಮಾಂಸ ಪ್ರಿಯರ ಕೈಗೆಟುಕದ ಕರಾವಳಿಯ ಮೀನು

|
Google Oneindia Kannada News

ಮಂಗಳೂರು: ಮತ್ಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಕರ್ನಾಟಕದ ಕರಾವಳಿಯಲ್ಲಿ ಮೀನುಗಳ ದರ ಮಾರುಕಟ್ಟೆಯಲ್ಲಿ ಗಗನಮುಖಿಯಾಗಿ ಏರುತ್ತಿದೆ. ಮೀನುಗಾರಿಕೆಗೆ ಸ್ಥಗಿತಗೊಂಡಿರುವುದರಿಂದ ಮಾರುಕಟ್ಟೆಗೆ ಮೀನುಗಳ ಪೂರೈಕೆ ನಿಂತಿದೆ. ಕೇರಳ, ತಮಿಳುನಾಡು ಮತ್ತು ಆಂಧ್ರ ಕರಾವಳಿಯಿಂದ ಬರುವ ಮೀನುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ದಿನದಿಂದ ದಿನಕ್ಕೆ ಬೆಲೆ ಹೆಚ್ಚಾಗುತ್ತಿದೆ.

ಈ ವರ್ಷದ ಆರಂಭದಿಂದಲೇ ಮೀನು ದರ ಏರುಗತಿಯಲ್ಲೇ ಸಾಗಿತ್ತು. ಇದರ ಮಧ್ಯೆ ಜೂನ್ 1ರಿಂದ ಮೀನುಗಾರಿಕೆಗೆ 61 ದಿನಗಳ ನಿಷೇಧ ಹೇರಿರುವುದರಿಂದ ಮೀನುಗಳ ದರ ಮತ್ತಷ್ಟು ಏರಿಕೆಯಾಗಿದೆ. ಈ ನಿಷೇಧ ಆಗಸ್ಟ್ ಮೊದಲ ವಾರದವರೆಗೆ ಇದ್ದು, ದರ ಏರಿಕೆ ಕೂಡ ಅಷ್ಟರವರೆಗೆ ಮುಂದುವರಿಯಲಿದೆ.

Fish prices spike to all-time high in Dakshina Kannada due to closure of Harbor

ಬಂಗುಡೆ, ಬೂತಾಯಿ, ಮಾಂಜಿ, ಅಂಜಲ್ ಮೊದಲಾದ ಪ್ರಮುಖ ಮೀನುಗಳ ದರ ಈಗಾಗಲೇ ಗಗನಮುಖಿಯಾಗಿ ಏರಿದ್ದು, ಮಾಂಜಿಗೆ ದರ ಕೆಜಿಗೆ ರೂ. 1,300ರಿಂದ ರೂ. 1,500ವರೆಗೆ ಏರಿಕೆಯಾಗಿದೆ.

ನಗರದ ಕೆಎಫ್'ಡಿಸಿ ಮಳಿಗೆಯಲ್ಲಿ ಅಂಜಲ್ ಮೀನಿನ ದರ ಕೇಜಿಗೆ ರೂ 1000 ಇದೆ. ಕಳೆದ ವರ್ಷದ ನವೆಂಬರ್ ಅಂತ್ಯಕ್ಕೆ ಅಂಜಲ್ ಮೀನಿನ ದರ ಕೇಜಿಗೆ ರೂ 480 ಮತ್ತು ಈ ವರ್ಷದ ಜನವರಿ ತಿಂಗಳಲ್ಲಿ ರೂ 730 ಇತ್ತು.

Fish prices spike to all-time high in Dakshina Kannada due to closure of Harbor

ಸಣ್ಣ ಗಾತ್ರದ ಅಂಜಲ್ ಮೀನಿಗೆ ಕೇಜಿಗೆ ರೂ 560 ದರ ಇದೆ. ಅದೇ ರೀತಿ ಬಿಳಿ ಮಾಂಜಿ ಕೇಜಿಗೆ ರೂ 1,300 ಇದ್ದದ್ದು ರೂ 1,500ಕ್ಕೆ ಏರಿದೆ. ಕಳೆದ ನವೆಂಬರ್ ತಿಂಗಳಲ್ಲಿ ರೂ 750 ಮತ್ತು ಜನವರಿಯಲ್ಲಿ ರೂ 960 ದರ ಇತ್ತು. ಕಡಿಮೆ ಆಕರ್ಷಣೆಯ ಕಪ್ಪು ಮಾಂಜಿ ಕೇಜಿಗೆ ರೂ 700 ರಿಂದ 800 ಬೆಲೆ ಹೊಂದಿದೆ.

ಮೀನಿನ ಬೆಲೆ ಏರಿಕೆಯ ಮಧ್ಯೆಯೂ ದೊಡ್ಡ ಸೀಗಡಿಗಳು ಸ್ವಲ್ಪ ಕೈಗೆಟಕುವ ದರದಲ್ಲಿದೆ. ಗಾತ್ರಕ್ಕನುಗುಣವಾಗಿ ರೂ 400ರಿಂದ 600 ದರ ಹೊಂದಿದೆ. ಏಡಿಗಳು ಕೂಡ ಕೇಜಿಗೆ ರೂ 300ರಿಂದ ರೂ 330 ಆಗಿದೆ. ಬಂಗುಡೆ ಕೇಜಿಗೆ ರೂ 155 ಆಗಿದೆ.

Fish prices spike to all-time high in Dakshina Kannada due to closure of Harbor

ಮೀನುಗಾರಿಕೆ ನಿಷೇಧ ಮತ್ತು ಕರಾವಳಿಯಲ್ಲಿ ಮೀನಿಗೆ ಹೆಚ್ಚಿರುವ ಬೇಡಿಕೆ ಮೀನಿನ ದರವನ್ನು ಮತ್ತಷ್ಟು ಏರಿಸಲಿದೆ.

English summary
The Fish prices in Dakshina Kannada have spike to all-time high due to closure of Harbor due to heavy rains in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X