ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಸ್ಓ ಪಡೆದ ರಾಜ್ಯದ ಮೊದಲ ಲೈಲಾ ಗ್ರಾಮ ಪಂಚಾಯಿತಿ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಡಿಸೆಂಬರ್. 25 : ಗ್ರಾಮಸ್ಥನೊಬ್ಬ ಪಂಚಾಯಿತಿಗೆ ಬಂದೊಡನೆ ಎಲ್ಲ ರೀತಿಯ ಸೇವೆಗಳು ದೊರೆಕುವಂತೆ ಮಾಡುವಲ್ಲಿ ಸಫಲವಾದ ಬೆಳ್ತಂಗಡಿಯ ಲೈಲಾ ಗ್ರಾಮ ಪಂಚಾಯಿತಿಗೆ ಅಂತಾರಾಷ್ಟ್ರೀಯ ಸ್ಟಾಂಡರ್ಡ್ ಆರ್ಗನೈಸೇಷನ್(ಐಎಸ್ಓ)ನ ಪ್ರಶಸ್ತಿ ಪತ್ರ ದೊರೆತಿದೆ.

ಈ ಮೂಲಕ ಐಎಸ್ಓ ಮಾನ್ಯತೆ ಪಡೆದ ರಾಜ್ಯದ ಪ್ರಥಮ ಪಂಚಾಯತ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಆಸನಗಳ ವ್ಯವಸ್ಥೆ ಸರ್ವಜನಿಕರ ಸೇವೆ, ಕುಡಿಯುವ ನೀರು, ಶೌಚಾಲಯ, ದಿನಪತ್ರಿಕೆ, ಗ್ರಂಥಾಲಯ, ಸಭಾಂಗಣ ಮುಂತಾದ ಗುಣಮಟ್ಟವನ್ನು ಪರಿಗಣಿಸಿ ಈ ಪ್ರಶಸ್ತಿ ಪತ್ರ ನೀಡಲಾಗಿದೆ.

ಲೈಲಾ ಪಂಚಾಯತ್ ಗೆ ಇದನ್ನು ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಫಾರಸ್ಸು ಮಾಡಿತ್ತು. ದ.ಕದ ಬಹುತೇಕ ಪಂಚಾಯತ್ ಗಳು ಈ ಮಾನ್ಯತೆಯ ಅರ್ಹತೆ ಪಡೆದಿವೆ.

First in state: Belthangady taluk Laila Gram Panchayat gets ISO certification

ಕೇರಳದ ಶೇ. 50ರಷ್ಟು ಪಂಚಾಯಿತಿಗಳು ಇಂತಹ ಮಾನ್ಯತೆ ಪಡೆದಿರುವುದು ವಿಶೇಷವಾಗಿದೆ. ಸಾಮ್ಯಾನವಾಗಿ ಕಂಪನಿಗಳು ತಮ್ಮ ಗುಣಮಟ್ಟ ಉತ್ತಮವಾದದು ಎಂದು ಪ್ರಮಾಣೀಕರಿಸಲು ಅಂತಾರಾಷ್ಟ್ರೀಯ ಗುಣಮಟ್ಟದ ಮಾನ್ಯತೆಯನ್ನು ಪಡೆಯುತ್ತವೆ.

ಆದರೆ, ಸ್ಥಳೀಯಾಡಳಿತ ಸಂಸ್ಥೆ ಇಂತಹ ಮಾನ್ಯತೆಗೆ ಪಾತ್ರವಾಗುತ್ತಿರುವುದು ವಿರಳ. ಬೆಳ್ತಂಗಡಿ ಸೇರಿದಂತೆ ದ.ಕ ಜಿಲ್ಲೆಯ ಪೊಲೀಸ್ ಠಾಣೆಗಳು ಪಡೆದಿವೆ. ಆದರೆ ಪಂಚಾಯಿತಿಗಳು ಇದು ವರೆಗೆ ಪಡೆದಿಲ್ಲ.

ಒಂದು ಕಾರ್ಪೊರೇಟ್ ಸಂಸ್ಥೆಗೆ ಭೇಟಿ ಕೊಟ್ಟಂತೆ ಪಡಸಾಲೆ, ಆಸನಗಳ ವ್ಯವಸ್ಥೆ, ಸರ್ವಜನಿಕರ ಸೇವೆ, ಕುಡಿಯುವ ನೀರು, ಶೌಚಾಲಯ, ದಿನಪತ್ರಿಕೆ, ಗ್ರಂಥಾಲಯ, ಸಭಾಂಗಣ ಇತ್ಯಾದಿಗಳು ಇಲ್ಲಿವೆ. ವಿದ್ಯುತ್, ದೂರವಾಣಿ ಬಿಲ್ಲುಗಳನ್ನು ಕೂಡ ಇಲ್ಲಿ ಸ್ವೀಕರಿಸಲಾಗುತ್ತದೆ.

English summary
Laila Panchayat in Belthangady taluk which has been successful in providing all services expeditiously to the members of the general public, has secured ISO Certification and has become the first panchayat in the state to receive this honour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X