ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದೀನಾ ತಲುಪಿದ ರಾಜ್ಯದ ಮೊದಲ ಹಜ್ ಯಾತ್ರಿಕರ ತಂಡ

|
Google Oneindia Kannada News

ಮಂಗಳೂರು / ಮದೀನಾ, ಜುಲೈ 26: ಪವಿತ್ರ ಹಜ್ ಯಾತ್ರೆ ನಿರ್ವಹಿಸಲು ಮಂಗಳೂರಿನಿಂದ ಹೊರಟ ರಾಜ್ಯದ ಮೊದಲ ವಿಮಾನವು ಮಂಗಳವಾರ ಬೆಳಗ್ಗಿನ ಜಾವ ಮದೀನಾ ತಲುಪಿದೆ. ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಕಾರ್ಯಕರ್ತರು ಹಾಗೂ ಸೌದಿ ಪ್ರಜೆಗಳು ಹಾಜಿಗಳನ್ನು ಆದರದಿಂದ ಬರಮಾಡಿಕೊಂಡರು.

ಮಂಗಳೂರಿನಿಂದ ಆಗಮಿಸಿದ್ದ ವಿಮಾನದಲ್ಲಿ ಒಟ್ಟು 159 ಹಾಜಿಗಳು ಆಗಮಿಸಿದ್ದು, ಕೆಸಿಎಫ್ ಹಜ್ ವಾಲೇಂಟಿಯರ್ ಕೋರ್ ಸದಸ್ಯರು ಹಾಜಿಗಳಿಗೆ ನೀರು, ಖರ್ಜೂರ ಹಾಗೂ ಜಪಮಾಲೆ ನೀಡಿ ಸ್ವಾಗತಿಸಿದರು.
ಈ ವೇಳೆ ಅಬ್ದುಲ್ ಕರೀಂ ಚನ್ನಾವರ ಮಾತನಾಡಿ, "ಹಜ್ಜ್ ನಿರ್ವಹಿಸಲು ಆಗಮಿಸಿದ ನಮಗೆ ಯಾವುದೇ ತೊಂದರೆಯಾಗಿಲ್ಲ ಪ್ರಯಾಣದ ವೇಳೆ ಉತ್ತಮ ಸೌಕರ್ಯ ದೊರಕಿವೆ. ವಿಮಾನ ನಿಲ್ದಾಣದಲ್ಲಿ ಎರಡರಿಂದ ನಾಲ್ಕು ಗಂಟೆಗಳ ಕಾಲ ಕಾಯಿಸಿದರೂ ಬೇಸರವಾಗಿಲ್ಲ. ನಮಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕೆಸಿಎಫ್ ಕಾರ್ಯಕರ್ತರು ಮಾಡುತ್ತಾರೆ ಎಂಬ ಭರವಸೆಯಿತ್ತು. ಅದರಂತೆ ವಯಸ್ಕರು ಮಹಿಳೆಯರಿಗೆ ಸಹಾಯ ಮಾಡುತ್ತಿದ್ದು ಕೆಸಿಎಫ್ ಕಾರ್ಯಕರ್ತರ ಸೇವೆಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ," ಎಂದು ತಿಳಿಸಿದರು.

First batch of Mangaluru pilgrims arrive in holy city Madina

ಇದೇ ವೇಳೆ ದಾರುಲ್ ಇರ್ಶಾದ್ ಎಜುಕೇಶನ್ ಸೆಂಟರ್ ಮಾಣಿ ಇದರ ಸ್ಥಾಪಕಾಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರನ್ನು ದಾರುಲ್ ಇರ್ಶಾದ್ ಮದೀನಾ ಘಟಕ ವತಿಯಿಂದ ಸ್ವಾಗತಿಸಲಾಯಿತು.

First batch of Mangaluru pilgrims arrive in holy city Madina

ಚಿತ್ರ ಕೃಪೆ: ಹಕೀಮ್ ಬೋಳಾರ್, ಮದೀನಾ

English summary
First batch of Haj pilgrims from Mangaluru touched down here in the early hours of Tuesday July 25 at Madina. Volunteers of Karnataka Cultural Foundation (KCF) welcomed pilgrims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X