India
  • search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಮಂಗಳೂರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಶೋ ರೂಂನಲ್ಲಿ ಬೆಂಕಿ

|
Google Oneindia Kannada News

ಮಂಗಳೂರು, ಜೂನ್ 23; ಮಂಗಳೂರು ನಗರದಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕದ್ರಿ ಅಗ್ನಶಾಮಕ ಅಧಿಕಾರಿ ಮತ್ತು ಸಿಬ್ಬಂದಿಗಳು ಬೆಂಕಿ ನಂದಿಸಿದರು.

ಶುಕ್ರವಾರ ಮುಂಜಾನೆ ನಗರದ ನಾಗುರಿ ಪ್ರದೇಶದ ಓಕಿನವ ಎಲೆಕ್ಟ್ರಿಕ್ ಸ್ಕೂಟರ್ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿತು. ನೆಲ ಮಹಡಿಯಲ್ಲಿ ಬೆಂಕಿ ಮೊದಲು ಪತ್ತೆಯಾಗಿತ್ತು.

 Rapido ಬೈಕ್ ಟ್ಯಾಕ್ಸಿ ಲೈಸನ್ಸ್ ವಿವಾದ: ಮಧ್ಯಂತರ ಆದೇಶ ಉಲ್ಲಂಘನೆ ಜಟಾಪಟಿ! Rapido ಬೈಕ್ ಟ್ಯಾಕ್ಸಿ ಲೈಸನ್ಸ್ ವಿವಾದ: ಮಧ್ಯಂತರ ಆದೇಶ ಉಲ್ಲಂಘನೆ ಜಟಾಪಟಿ!

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪಾಂಡೇಶ್ವರ ಹಾಗೂ ಕದ್ರಿ ಅಗ್ನಶಾಮಕ ಅಧಿಕಾರಿ ಮತ್ತು ಸಿಬ್ಬಂದಿಯವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Breaking; ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸರ್ಕಾರದ ತಡೆ Breaking; ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸರ್ಕಾರದ ತಡೆ

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಟ್ವಿಟರ್ ಖಾತೆಯಿಂದ ಘಟನೆ ಕುರಿತು ಮಾಹಿತಿ ನೀಡಲಾಗಿದೆ. ಬೆಂಕಿ ಅನಾಹುತದ ಚಿತ್ರಗಳನ್ನು ಹಾಕಲಾಗಿದೆ.

ಕರ್ನಾಟಕಕ್ಕೆ ಬರುತ್ತಾ ಓಲಾ ಎಲೆಕ್ಟ್ರಿಕ್ ಕಾರು ತಯಾರಿಕಾ ಘಟಕ?ಕರ್ನಾಟಕಕ್ಕೆ ಬರುತ್ತಾ ಓಲಾ ಎಲೆಕ್ಟ್ರಿಕ್ ಕಾರು ತಯಾರಿಕಾ ಘಟಕ?

ಬೆಂಕಿ ಹೊತ್ತಿಕೊಂಡಿರುವ ಶೋ ರೂಂ ಕಟ್ಟಡದ ಮೇಲೆ ಶೋ ರೂಂ ಮಾಲೀಕ ಪ್ರಶಾಂತ್ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಬೆಂಕಿ ಕಾಣಿಸಿಕೊಂಡ ಬಳಿಕ ಇಡೀ ಕಟ್ಟಡದಲ್ಲಿ ಹೊಗೆ ತುಂಬಿಕೊಂಡಿತ್ತು. ಬೆಂಕಿ ಆಕಸ್ಮಿಕದಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿರಬಹುದು ಎಂದು ಶಂಕಿಸಲಾಗಿದೆ.

ಘಟನೆ ಬಗ್ಗೆ ಮಾತನಾಡಿದ ಸಿರಾಜ್, "ಈ ಕಟ್ಟಡವನ್ನು ನನ್ನ ತಂದೆ ಹಮೀದ್ ಪ್ರಶಾಂತ್ ಎಂಬುವವರಿಗೆ ಕಳೆದ 4 ವರ್ಷಗಳ ಹಿಂದೆ ಲೀಸ್‌ಗೆ ನೀಡಿದ್ದಾರೆ" ಎಂದರು.

ಒಕಿನವ ಶೋ ರೂಂನಲ್ಲಿನ ಐದಕ್ಕೂ ಅಧಿಕ ವಾಹನಗಳು ಸಂಪೂರ್ಣ ಸುಟ್ಟು ಹೋಗಿವೆ. ಉಳಿದ ವಾಹನಗಳಿಗೆ ಹಾನಿಯಾಗಿದೆ. ಕಚೇರಿಯ ಕಡತ, ಕುರ್ಚಿ, ಟೇಬಲ್ ಸೇರಿದಂತೆ ಪಿಠೋಪಕರಣಳೂ ಸುಟ್ಟು ಹೋಗಿದ್ದು ಹಾನಿಯ ಅಂದಾಜು ಸಿಕ್ಕಿಲ್ಲ.

ಬೆಂಕಿಯಿಂದಾಗಿ ಶೋ ರೂಂ ಮೇಲ್ಭಾಗದಲ್ಲಿದ್ದ ಮನೆಗೂ ಹಾನಿಯಾಗಿದೆ. ಮನೆಯಲ್ಲಿನ ಪೀಠೋಪಕರಣ, ಗೃಹ ಬಳಕೆಯ ವಸ್ತುಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

English summary
Fire accident at Okinawa scooter showroom at Mangaluru city. Kadri fire station officials reached the spot and now fire under control.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X