ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಲಕನ ಮೇಲೆ ಹಲ್ಲೆ ಮಾಡಿದ್ದ ವೇದ ಶಿಕ್ಷಕನ ವಿರುದ್ಧ ಎಫ್‌ಐಆರ್

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಸೆಪ್ಟೆಂಬರ್, 10 : ವಿಟ್ಲದ ವೇದ ಪಾಠ ಶಾಲೆಯೊಂದರಲ್ಲಿ ತರಗತಿಗೆ ತಡವಾಗಿ ಬಂದ ವಿದ್ಯಾರ್ಥಿಗೆ ಶಿಕ್ಷಕ ಮನ ಬಂದಂತೆ ಅಮಾನವೀಯವಾಗಿ ಥಳಿಸಿರುವ ಘಟನೆ ಬೆಳಕಿಗೆ ಬಂದಿತ್ತು. ಸದ್ಯ, ವಿಟ್ಲ ಪೊಲೀಸರು ಶಿಕ್ಷಕನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಬಾಲಕನ ಮೇಲೆ ಹಲ್ಲೆ ನಡೆಸಿದ್ದ ವೇದ ಶಿಕ್ಷಕ ಶ್ಯಾಮ ಸುಂದರ ಶಾಸ್ತ್ರಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ದಲಿತ್‌ ಸೇವಾ ಸಮಿತಿಯು ವಿಟ್ಲ ಪೊಲೀಸ್ ಠಾಣೆ ಮತ್ತು ಶಿಶು ಕಲ್ಯಾಣ ಅಭಿವೃದ್ಧಿ ಇಲಾಖೆಗೆ ದೂರು ಸಲ್ಲಿಸಿತ್ತು. [ಅಮೆರಿಕಾ ಪ್ರಶಸ್ತಿ ಪಡೆದ ಬೆಂಗಳೂರು ಮೂಲದ ಶಿಕ್ಷಕಿ]

mangaluru

ಈ ದೂರಿನ ಅನ್ವಯ ವಿಟ್ಲ ಪೊಲೀಸರು ಗುರುವಾರ ಶಿಕ್ಷಕ ಶ್ಯಾಮ ಸುಂದರ ಶಾಸ್ತ್ರಿ ಅವರ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ. ಈ ಘಟನೆ ಖಂಡಿಸಿ ಸೆ.11ರಂದು ವಿಟ್ಲದಲ್ಲಿ ಮೌನ ಮೆರವಣಿಗೆ ನಡೆಸಲಾಗುತ್ತದೆ ಎಂದು ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ. [ಉಗ್ರರಿಂದ ಬಚಾವಾದ ಶಿಕ್ಷಕ ವಿಜಯ್ ಹೇಳಿದ ಕಿಡ್ನಾಪ್ ಕಥೆ]

ಏನಿದು ಘಟನೆ : 2015ರ ಮೇ ತಿಂಗಳಿನಲ್ಲಿ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಬ್ರಾಹ್ಮಣ ಮಕ್ಕಳ ವೇದ ಪಾಠ ಶಾಲೆಯಲ್ಲಿ ನಡೆದಿದೆ. ತಡವಾಗಿ ವೇದ ಪಾಠಶಾಲೆಗೆ ಬಂದ ವಿದ್ಯಾರ್ಥಿಯನ್ನು ಉಳಿದೆಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮುಂದೆ ಶರ್ಟ್‌ ಬಿಚ್ಚಿ ಥಳಿಸಿರುವುದನ್ನು ದೇವಸ್ಥಾನಕ್ಕೆ ಬಂದವರು ಚಿತ್ರೀಕರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

English summary
Vitla police registered the FIR against veda teacher who beats student in Vitla, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X