ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾರಕಕ್ಕೇರಿದ ಹಿಂಜಾವೇ ಮತ್ತು ದಕ್ಷಿಣ ಕನ್ನಡ ಡಿಸಿ ಜಟಾಪಟಿ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 25; ಹಿಂದೂ ಜಾಗರಣ ವೇದಿಕೆಯ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುತ್ತಿದ್ದಾರೆ.

ಈಗ ಹಿಂದೂ ಜಾಗರಣ ವೇದಿಕೆ ಮತ್ತು ಜಿಲ್ಲಾಧಿಕಾರಿ ನಡುವಿನ ಜಟಾಪಟಿ ತಾರಕಕ್ಕೇರಿದೆ. ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಜಗದೀಶ್ ಕಾರಂತ್ ವಿರುದ್ಧ ದೂರು ನೀಡಿದ್ದು ಪೊಲೀಸರು ಕಾರಂತ್ ವಿರುದ್ಧ ಐಪಿಸಿ ಸೆಕ್ಷನ್ 153,117,504,506,189 ಗಳಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಜಗದೀಶ್ ಕಾರಂತ್ ವಿರುದ್ಧ ದೂರು ನೀಡಿದ ದಕ್ಷಿಣ ಕನ್ನಡ ಡಿಸಿ! ಜಗದೀಶ್ ಕಾರಂತ್ ವಿರುದ್ಧ ದೂರು ನೀಡಿದ ದಕ್ಷಿಣ ಕನ್ನಡ ಡಿಸಿ!

ಈ ಹಿನ್ನಲೆಯಲ್ಲಿ ಕೇಸ್ ವಾಪಾಸ್ ಪಡೆದುಕೊಳ್ಳಲು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ. ಮಂಗಳೂರಿನಲ್ಲಿ ಹಿಂಜಾವೇ ಮುಖಂಡರ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದ್ದು, ಕೇಸ್ ವಾಪಾಸ್ ತೆಗೆದುಕೊಳ್ಳಬೇಕು. ಇಂತಹ ಸಾವಿರ ಕೇಸ್ ಗಳನ್ನು ಎದುರಿಸಲು ಜಾಗರಣ ವೇದಿಕೆ ಸಿದ್ಧವಿದೆ ಅಂತಾ ಸವಾಲೆಸಿದಿದ್ದಾರೆ.

ದೇವಾಲಯ ತೆರವು ವಿವಾದ, ನಂಜನಗೂಡು ತಹಶೀಲ್ದಾರ್ ವರ್ಗಾವಣೆ ದೇವಾಲಯ ತೆರವು ವಿವಾದ, ನಂಜನಗೂಡು ತಹಶೀಲ್ದಾರ್ ವರ್ಗಾವಣೆ

Fight Between Hindu Jagarana Vedike V/S Dakshina Kannada DC

ಹಿಂದೂ ಜಾಗರಣ ವೇದಿಕೆ ಪ್ರಾಂತ್ಯ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, "ದೇಶದ ವಿಶಿಷ್ಠ ಧಾರ್ಮಿಕ ಕ್ಷೇತ್ರದಲ್ಲಿ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನ ಕೂಡಾ ಒಂದಾಗಿದೆ. ಈ ದೇವಸ್ಥಾನವನ್ನು ಉಳಿಸುವ ನಿಟ್ಟಿನಲ್ಲಿ ಮತ್ತು ಗಣಿಗಾರಿಕೆಯನ್ನು ನಿಲ್ಲಿಸುವ ಸಲುವಾಗಿ ಜಾಗರಣ ವೇದಿಕೆ ಎಂತಹ ತ್ಯಾಗಕ್ಕೂ ಸಿದ್ಧವಾಗಿದೆ" ಎಂದರು.

ಮಡಿಕೇರಿಯಲ್ಲಿ ಕುಟ್ಟಪ್ಪ ಸ್ಮರಣೆ: ಹಿಂದೂ ಮುಖಂಡರ ಬಂಧನ ಮಡಿಕೇರಿಯಲ್ಲಿ ಕುಟ್ಟಪ್ಪ ಸ್ಮರಣೆ: ಹಿಂದೂ ಮುಖಂಡರ ಬಂಧನ

"ಜಗದೀಶ್ ಕಾರಂತ್ ಕಳೆದ 45 ವರ್ಷಗಳಿಂದ ಸಂಘಟನೆಯ ಕೆಲಸ ಮಾಡುತ್ತಿದ್ದಾರೆ. ಕಾರಂತ್‌ಗೆ ವೈಯುಕ್ತಿಕ ಜೀವನವಿಲ್ಲ ಇಡೀ ಜೀವನವನ್ನು ಸಂಘಟನೆಗಾಗಿ ಮೀಸಲಿರಿಸಿದ್ದಾರೆ. ಅವರ ಮೇಲೆ ಜಿಲ್ಲಾಧಿಕಾರಿ ಕೇಸ್ ಹಾಕಿರೋದು ದೊಡ್ಡ ವಿಷಯವಲ್ಲ. ಇಂತಹ ನೂರಾರು ಕೇಸುಗಳನ್ನು ಕಾರಂತರು ಕಂಡಿದ್ದಾರೆ. ಆದರೆ ಈಗ ಜಿಲ್ಲಾಧಿಕಾರಿ ಹಾಕಿರುವ ಕೇಸ್ ಹಿಂದೆ ಷಡ್ಯಂತ್ರವಿದೆ. ಕ್ಷೇತ್ರದಲ್ಲಿ ಅನ್ಯ ಮತೀಯರಿಂದ ನಡೆಯುತ್ತಿರುವ ಅಹಿತಕರ ಘಟನೆಯನ್ನು ಮತ್ತು ಗಣಿಗಾರಿಕೆ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಮುಚ್ಚಿ ಹಾಕುವ ಷಡ್ಯಂತ್ರ ಇದೆ" ಎಂದು ಆರೋಪಿಸಿದರು.

ಕಾರಿಂಜ ಕ್ಷೇತ್ರದ ಸುತ್ತಾ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಕಳೆದ 14 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿ ಕೇಸ್ ಹಾಕುವ ಬದಲು ಈ ಹಿಂದಿನ ಫೈಲ್ ಗಳನ್ನು ತೆಗೆದು ನೋಡಿ, ಯೋಗ್ಯತೆ ಮತ್ತು ಗೌರವವನ್ನು ಉಳಿಸಿಕೊಳ್ಳಿ. ಕಾರಿಂಜ ಕ್ಷೇತ್ರದ ಬೆಟ್ಟದ ಬುಡದಲ್ಲೇ ಗಣಿಗಾರಿಕೆಯಾಗುತ್ತಿದೆ. ಹತ್ತುಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಸ್ಫೋಟಕಗಳಿಂದ ಗಣಿಗಾರಿಕೆ ನಡೆಸಲಾಗುತ್ತಿದೆ. ಈಗಾಗಲೇ ಸ್ಫೋಟದಿಂದಾಗಿ ಕಾರಿಂಜೇಶ್ವರ ನ ದೇವಸ್ಥಾನ ಬಿರುಕು ಬಿಟ್ಟಿದೆ. ಇದರಿಂದಾಗಿ ಸ್ಥಳೀಯ 32 ಗ್ರಾಮಗಳಿಗೆ ತೊಂದರೆಯಾಗುವ ಸ್ಥಿತಿ ಇದೆ. ಈ ಗಂಭೀರ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗಳು ಅರ್ಥಮಾಡಿಕೊಳ್ಳಬೇಕೆಂದು ಮುಖಂಡರು ಆಗ್ರಹಿಸಿದರು.

ಜಿಲ್ಲಾಧಿಕಾರಿ ದೂರು ನೀಡಿದ ಬಳಿಕ ಕಾರಿಂಜ ಕ್ಷೇತ್ರ ಭಗವಾಧ್ವಜ ತೆಗೆಯಲು ಸ್ಥಳೀಯ ಪೊಲೀಸರು ಸೂಚನೆ ನೀಡಿದ್ದಾರೆ. ಪೊಲೀಸರು ಧ್ವಜ ತೆಗೆದರೆ ನಮ್ಮ ಸಾಮರ್ಥ್ಯ ಪ್ರದರ್ಶನ ಮಾಡಬೇಕಾಗುತ್ತದೆ. ಪೂಂಜಾಲಕಟ್ಟೆ ಠಾಣೆಯ ಎಸ್‌ಐ ಸೌಮ್ಯ ಭಗಾವಾಧ್ವಜ ತೆಗೆಯಲು ಹೇಳಿದ್ದಾರೆ. ತಾಖತ್ ಇದ್ದರೆ ಭಗವಾಧ್ವಜ ತೆಗೆದು ನೋಡಿ. ಒಂದು ವಾರದೊಳಗೆ ಸಾವಿರ ಭಗವಾಧ್ವಜ ಹಾಕುತ್ತೇವೆ. ಜಾಸ್ತಿ ತುಳಿಯೋಕೆ ನೋಡಬೇಡಿ, ಹಿಂದೂ ಸಮಾಜ ಕಲ್ಲು ಗುಂಡು, ಕಾಲು ಮುರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.

ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ದೇವಸ್ಥಾನದ ಸುತ್ತಾ 10 ಕಿಲೋ ಮೀಟರ್ ಪ್ರದೇಶವನ್ನು ಸೂಕ್ಷ್ಮ ವಲಯ ಅಂತಾ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ಹೋರಾಟದ ತೀವ್ರತೆಗೆ ಜಿಲ್ಲಾಡಳಿತ ಹೊಣೆಯಾಗಬೇಕೇಂದು ಹೇಳಿದ್ದಾರೆ.

"ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸದೇ ಇದ್ದರೆ ಜಿಲ್ಲಾಧಿಕಾರಿಯ ಕೊರಳ ಪಟ್ಟಿ ಹಿಡಿಯುತ್ತೇವೆ" ಎಂದು ಹೇಳಿದ್ದ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದೂರು ನೀಡಿದ್ದಾರೆ. ಇದೇ ಈಗ ಜಟಾಪಟಿಗೆ ಕಾರಣವಾಗಿದೆ.

English summary
Deputy commissioner of Dakshina Kannada Dr. K. V. Rajendra filed a complaint against Hindu Jagarana Vedike leader Jagadish Karanth. Now fight between Dc and Jagarana Vedike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X