ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ನಗರದ ರಕ್ಷಣೆಗೆ ಕಠಿಣ ತರಬೇತಿ: ಶಸ್ತ್ರಸಜ್ಜಿತ ತಂಡ ತಯಾರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂ. 17: ರಾಜ್ಯದ ಕಡಲ ನಗರಿ ಮಂಗಳೂರು ಅತೀ ಸೂಕ್ಷ್ಮ ಜಿಲ್ಲೆ. ಮಂಗಳೂರಿಗೆ ಉಗ್ರ ಸಂಪರ್ಕದ ಭೀತಿ ಇದೆ. ಯಾವುದೇ ಕ್ಷಣದಲ್ಲಿ ಗಲಭೆಗಳು ನಡೆಯುವ ಆತಂಕ ಇದೆ. ಪರಿಸ್ಥಿತಿ ಸಂದಿಗ್ಧತೆಗೆ ತಲುಪುವಾಗ ಹೆಚ್ಚುವರಿ ಪೊಲೀಸ್ ಭಧ್ರತೆ, ನುರಿತ ಭದ್ರತಾ ಸಿಬ್ಬಂದಿಯ ಅವಶ್ಯಕತೆಯೂ ಇದೆ. ಆದರೆ ಇನ್ನು ಮುಂದೆ ಇಂತಹ ಕಠಿಣ ಸಂದರ್ಭದಲ್ಲಿ ಯಾರಿಗೂ ಹೆದರಬೇಕಾಗಿಲ್ಲ.ಯಾರನ್ನೂ ಆಶ್ರಯಿಸಬೇಕಾಗಿಲ್ಲ. ಮಂಗಳೂರು ನಗರದ ರಕ್ಷಣೆಗೆ ಕಠಿಣ ತರಬೇತಿ ಪಡೆದ ಶಸ್ತ್ರಸಜ್ಜಿತ ತಂಡ ತಯಾರಾಗಿದೆ.

ಜಗತ್ತಿನ ಕುಖ್ಯಾತ ಉಗ್ರ ಸಂಘಟನೆ ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದೆ. ಮಂಗಳೂರಿನಲ್ಲಿ ಭಯೋತ್ಪಾದಕ ನಿಗ್ರಹ ತಂಡ ರಚನೆಯಾಗಿದೆ. ಮಂಗಳೂರು ನಗರ ಸೇರಿದಂತೆ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗಳಲ್ಲಿ ಆಂತರಿಕ ಭಧ್ರತಾ ವಿಭಾಗದಡಿ ನಗರ ಭಯೋತ್ಪಾದನಾ ನಿಗ್ರಹ ತಂಡ ರಚನೆಯಾಗಿದೆ. 35 ಪೊಲೀಸ್ ಸಿಬ್ಬಂದಿಗಳಿಗೆ ಶಸ್ತ್ರಾಸ್ತ್ರ ಸಹಿತ ಎರಡು ತಿಂಗಳ ಕಠಿಣ ತರಬೇತಿಯನ್ನು ನೀಡಿ ತಂಡ ಮಾಡಲಾಗಿದೆ. ಬೆಂಗಳೂರಿನ ಕೂಡ್ಲುವಿನ ಸೆಂಟರ್ ಫಾರ್ ಕೌಂಟರ್ ಟೆರರಿಸಂ ಸೆಂಟರ್ ನಲ್ಲಿ ತರಬೇತಿ ನೀಡಲಾಗಿದೆ. ಜಗತ್ತಿನ ಕುಖ್ಯಾತ ಉಗ್ರ ಸಂಘಟನೆ ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಆರೋಪ ಮಂಗಳೂರಿಗೆ ಇದೆ.

ಅಶ್ವಥ ಎಲೆಯ ಮೇಲೆ ಸಚಿನ್ ಭಾವಚಿತ್ರ: ಉಡುಪಿ ಕಲಾವಿದನಿಗೆ ಸಚಿನ್ ಫಿದಾ!ಅಶ್ವಥ ಎಲೆಯ ಮೇಲೆ ಸಚಿನ್ ಭಾವಚಿತ್ರ: ಉಡುಪಿ ಕಲಾವಿದನಿಗೆ ಸಚಿನ್ ಫಿದಾ!

ಬೆಂಗಳೂರಿನ ಕೂಡ್ಲುವಿನ ಸೆಂಟರ್ ಫಾರ್ ಕೌಂಟರ್ ಟೆರರಿಸಂ ಸೆಂಟರ್ ನಲ್ಲಿ ತರಬೇತಿ

ಬೆಂಗಳೂರಿನ ಕೂಡ್ಲುವಿನ ಸೆಂಟರ್ ಫಾರ್ ಕೌಂಟರ್ ಟೆರರಿಸಂ ಸೆಂಟರ್ ನಲ್ಲಿ ತರಬೇತಿ

ಈ ತಂಡ ಮಂಗಳೂರು ನಗರದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಕರ್ತವ್ಯದಲ್ಲಿ ತೊಡಗಿದೆ. ಈ ತಂಡಕ್ಕೆ ದೈಹಿಕ, ಎಂತಹದೇ ಸಂಧರ್ಭದಲ್ಲಿ ಕಾರ್ಯ ನಿರ್ವಹಿಸುವ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುವ ತರಬೇತಿ ಯನ್ನು ನೀಡಲಾಗಿದೆ. ಅಲ್ಲದೇ ಸೇನೆಯಲ್ಲಿ ನೀಡುವ ಶಸ್ತ್ರಾಸ್ತ್ರ ತರಬೇತಿ, ಮ್ಯಾಪ್ ರೀಡಿಂಗ್ ಸೇರಿದಂತೆ ಹಲವು ಮಾದರಿಯ ತರಬೇತಿ ಕೊಡಲಾಗಿದೆ. ಹಳ್ಳಿ ಮತ್ತು ನಗರದಲ್ಲಿ ವ್ಯತಿರಿಕ್ತ ಹವಾಮಾನ ದಲ್ಲೂ ಕರ್ತವ್ಯ ನಿರ್ವಹಿಸುವ ರೀತಿಯಲ್ಲಿ ತಂಡವನ್ನು ಸಜ್ಜುಗೊಳಿಸಲಾಗಿದೆ.

ಅಮೆರಿಕಾದ ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಭಾರತೀಯ ಸೇನೆ ಸೇರಿದ ಬೆಳ್ತಂಗಡಿ ಯುವಕಅಮೆರಿಕಾದ ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಭಾರತೀಯ ಸೇನೆ ಸೇರಿದ ಬೆಳ್ತಂಗಡಿ ಯುವಕ

ಭದ್ರತೆಯನ್ನು ಹೆಚ್ಚು ಮಾಡುವ ಅನಿವಾರ್ಯತೆಯೂ ಇಲಾಖೆಗೆ ಇದೆ

ಭದ್ರತೆಯನ್ನು ಹೆಚ್ಚು ಮಾಡುವ ಅನಿವಾರ್ಯತೆಯೂ ಇಲಾಖೆಗೆ ಇದೆ

ಮಂಗಳೂರು ಜಲ, ರಸ್ತೆ, ವಾಯು ಮಾರ್ಗ ಹೊಂದಿದ ಪ್ರದೇಶವಾಗಿದ್ದು, ಹತ್ತಾರು ಕೈಗಾರಿಕೆಗಳೂ ಇವೆ. ಹೀಗಾಗಿ ಭದ್ರತೆಯನ್ನು ಹೆಚ್ಚು ಮಾಡುವ ಅನಿವಾರ್ಯತೆಯೂ ಇಲಾಖೆಗೆ ಇದೆ. ಈ ತಂಡದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಮಂಗಳೂರು ನಗರ ಪೊಲೀಸ್ ಗೆ ಈ ತಂಡದ ಬಲ ಸಿಗಲಿದೆ. 30ಮಂದಿ ಸಿಬ್ಬಂದಿ ತಂಡ ಒಳ್ಳೆಯ ದೈಹಿಕ ಸಾಮರ್ಥ್ಯ, ಮಾನಸಿಕ ಸಧೃಡತೆಯನ್ನು ಹೊಂದಿದ್ದಾರೆ. ಇದಿಷ್ಟೇ ಅಲ್ಲದೇ ಮಂಗಳೂರು ನಗರ ಶಸ್ತ್ರಾಸ್ತ್ರ ಮೀಸಲು ಪಡೆಗೆ ವರುಣ ಎಂಬ ಜಲ ಫಿರಂಗಿ ವಾಹನವನ್ನು ಸೇರ್ಪಡೆಗೊಳಿಸಲಾಗಿದೆ. ಉದ್ರಿಕ್ತ ಗುಂಪು ಚದುರುವಿಕೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಈ ಫಿರಂಗಿ ವಾಹನವನ್ನು ಬಳಸಲಾಗುತ್ತದೆ ಅಂತಾ ಹೇಳಿದ್ದಾರೆ.

ಮಂಗಳೂರು ನಗರ ಪೊಲೀಸ್ ಮೈದಾನದಲ್ಲಿ ಅಣಕು ಪ್ರದರ್ಶನ

ಮಂಗಳೂರು ನಗರ ಪೊಲೀಸ್ ಮೈದಾನದಲ್ಲಿ ಅಣಕು ಪ್ರದರ್ಶನ

ವಿದೇಶದಲ್ಲಿ ಮೊದಲ ಬಾರಿ 1960ರಲ್ಲಿ ಅಮೇರಿಕಾ ಲಾಸ್ ಎಲೆಂಜಿಸಲ್ ನಲ್ಲಿ ಈ ಮಾದರಿಯ ಭದ್ರತಾ ಪಡೆಯನ್ನು ಸ್ಥಾಪನೆ ಮಾಡಲಾಯಿತು. ಅಮೇರಿಕಾದ ಬಳಿಕ ಪ್ರಪಂಚದ ಬೇರೆ ಬೇರೆ ರಾಷ್ಟ್ರದಲ್ಲೂ ಈ ರೀತಿ ಪಡೆಗಳಿವೆ. 2008 ರ ನವೆಂಬರ್ 26 ರಂದು ಮುಂಬೈ ಉಗ್ರ ದಾಳಿಯ ನಂತರ ಭಾರತದಲ್ಲೂ ಜಾರಿ ಗೊಳಿಸಲಾಗಿದೆ. 2011ರಲ್ಲಿ ಪಂಜಾಬ್, 2014ರಲ್ಲಿ ದೆಹಲಿಯಲ್ಲಿ ಈ ಟೀಂ ನ್ನು ಸ್ಥಾಪನೆ ಮಾಡಲಾಗಿದೆ..

ಶಸ್ತ್ರಾಸ್ತ್ರ ತರಬೇತಿ ಪಡೆದ ತಂಡ ಮಂಗಳೂರು ನಗರ ಪೊಲೀಸ್ ಮೈದಾನದಲ್ಲಿ ಅಣಕು ಪ್ರದರ್ಶನ ನೀಡಿದೆ. ಮೊದಲು ಕಟ್ಟಡದಲ್ಲಿ ಅಡಗಿದ ಉಗ್ರರನ್ನು ಸದೆಬಡಿಯುವ ಕಾರ್ಯಾಚರಣೆ, ವಾಹನದಲ್ಲಿ ಪರಾರಿಯಾಗುತ್ತಿದ್ದ ಉಗ್ರರ ಮೇಲೆ ದಾಳಿ, ಕಾರ್ಯಾಚರಣೆಯ ವೇಳೆ ಮಾಡಬೇಕಾದ ಮುನ್ನಚ್ಚೆರಿಕಾ ಕ್ರಮ, ಫೈರಿಂಗ್ ವಿಧಾನ,ಶಸ್ತ್ರಾಸ್ತ್ರ ಗಳ ಮರುಜೋಡಣೆ ಸೇರಿದಂತೆ ವಿವಿಧ ಅಭ್ಯಾಸಗಳನ್ನು ಪ್ರದರ್ಶನ ಮಾಡಲಾಗಿದೆ.

ಯಾವುದೇ ಕ್ಷಣದಲ್ಲಿ ಗಲಭೆಗಳು ನಡೆಯುವ ಆತಂಕ

ಯಾವುದೇ ಕ್ಷಣದಲ್ಲಿ ಗಲಭೆಗಳು ನಡೆಯುವ ಆತಂಕ

ದೇಶದಲ್ಲಿ ಉಗ್ರ ಚಟುವಟಿಕೆಗಳಿಗೆ ಹಲವು ದಶಕಗಳ ಇತಿಹಾಸವಿದ್ದರೂ ರಾಜ್ಯದ ಬಂದರು ನಗರಿ ಮಂಗಳೂರಿಗೆ ಇತ್ತೀಚಿನ ವರೆಗೂ ಉಗ್ರ ಚಟುವಟಿಕೆಗಳ ನೆರಳು ಬಿದ್ದಿರಲಿಲ್ಲ. ಆದರೆ ಯಾವಾಗ 2008ರಲ್ಲಿ ಉಗ್ರ ಸಂಘಟನೆ ನೆಲೆ ಮಂಗಳೂರಿನಲ್ಲಿ ಪತ್ತೆಯಾಯಿತೋ ಅಲ್ಲಿಂದ ಇಲ್ಲಿ ವರೆಗೆ ಒಂದಲ್ಲ ಒಂದು ಘಟನೆಗಳು ನಡೆದಾಗ ಅದಕ್ಕೆ ಮಂಗಳೂರು ಲಿಂಕ್ ಬೆಸೆದುಕೊಂಡಿರುತ್ತದೆ. ಕಳೆದ 8 ವರ್ಷಗಳ ಅವಧಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಬಾರಿ ಎನ್‌ಐಎ, ಎಟಿಎಸ್ ಸೇರಿದಂತೆ ದೇಶದ ನಾನಾ ತನಿಖಾ ಸಂಸ್ಥೆಗಳು ಮಂಗಳೂರಿಗೆ ಭೇಟಿ ನೀಡಿ ತನಿಖೆ ಕೈಗೊಂಡಿವೆ.

ಮಂಗಳೂರಿಗೆ ಉಗ್ರ ಸಂಪರ್ಕದ ಭೀತಿ ಇದೆ. ಯಾವುದೇ ಕ್ಷಣದಲ್ಲಿ ಗಲಭೆಗಳು ನಡೆಯುವ ಆತಂಕ ಇದೆ. ಪರಿಸ್ಥಿತಿ ಸಂದಿಗ್ಧತೆಗೆ ತಲುಪುವಾಗ ಹೆಚ್ಚುವರಿ ಪೊಲೀಸ್ ಭಧ್ರತೆ, ನುರಿತ ಭದ್ರತಾ ಸಿಬ್ಬಂದಿಯ ಅವಶ್ಯಕತೆ ಯೂ ಇದೆ. ಈ ವೇಳೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಡಿಸಿಪಿಗಳಾದ ಹರಿರಾಂಶಂಕರ್ ದಿನೇಶ್ ಕುಮಾರ್, ಮತ್ತು ತಂಡದ ಮುಖ್ಯಸ್ಥ ಸುಬ್ರಹ್ಮಣ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

(ಒನ್ಇಂಡಿಯಾ ಸುದ್ದಿ)

Recommended Video

Siddaramaiah: ಸಂಸ್ಕೃತಿಯೆಡೆಗೆ ಸೌಹಾರ್ದ ನಡಿಗೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ | *Politics | OneIndia Kannada

English summary
Mangalore police have formed special anti-terror squad to fight against terrorists in the city where many terrorists have emerged out from. This special team will have 35 personnel who are well trained and well equipped to tackle terrorists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X